ದೇವೇಗೌಡ-ಕುಮಾರಸ್ವಾಮಿ ಮಾತುಕತೆ: ಸರ್ಕಾರ ಉಳಿಸಿಕೊಳ್ಳಲು ತಂತ್ರ
ಬೆಂಗಳೂರು, ಜುಲೈ 08: ಜೆಡಿಎಸ್ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿರುವ ಕುಮಾರಸ್ವಾಮಿ ಅವರು, ತಾವು ಮಾತ್ರ ತಾಜ್ ವೆಸ್ಟ್ ಎಂಡ್ ಹೊಟೆಲ್‌ನಲ್ಲಿಯೇ ಉಳಿದಿದ್ದಾರೆ.
ತಾಜ್ ವೆಸ್ಟ್ ಎಂಡ್ ಹೊಟೆಲ್‌ನಲ್ಲಿ ಕುಮಾರಸ್ವಾಮಿ ಅವರು ಬಹು ಸಮಯದಿಂದ ದೇವೇಗೌಡ ಅವರೊಂದಿಗೆ ಮಾತನಾಡುತ್ತಿದ್ದು, ಸರ್ಕಾರ ಉಳಿಸಿಕೊಳ್ಳಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.
ರಾಜೀನಾಮೆ ಕೊಟ್ಟಿರುವ ಶಾಸಕರು ಸ್ಪೀಕರ್ ಭೇಟಿಗೆ ಬಂದಾಗ ಅವರ ಮನವೊಲಿಸುವ ಯತ್ನ ಮಾಡಬೇಕು ಎಂಬ ಸಲಹೆಯನ್ನು ದೇವೇಗೌಡ ಅವರು ಕುಮಾರಸ್ವಾಮಿಗೆ ನೀಡಿದ್ದಾರೆ ಎನ್ನಲಾಗಿದೆ.

ಅಷ್ಟು ಮಾತ್ರವೇ ಅಲ್ಲದೆ, ಒಂದು ವೇಳೆ ಸರ್ಕಾರ ಪತನ ಖಚಿತವಾದರೆ, ಸಿಎಂ ಕುಮಾರಸ್ವಾಮಿ ಮುಂದಿನ ನಡೆ ಏನಾಗಿರಬೇಕು, ಯಾವ ರೀತಿಯಲ್ಲಿ ರಾಜೀನಾಮೆ ನೀಡಬೇಕು, ಸರ್ಕಾರ ಉರುಳಿಸಿದಕ್ಕೆ ಕಾರಣ ಯಾರನ್ನು ಮಾಡಬೇಕು ಎಂಬಿತ್ಯಾದಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಎಚ್.ಡಿ.ರೇವಣ್ಣ ಅವರು ಸಹ ತಾಜ್ ವೆಸ್ಟ್ ಎಂಡ್‌ಗೆ ಭೇಟಿ ನೀಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರೇವಣ್ಣ ಅವರು ಜೆಡಿಎಸ್ ಶಾಸಕರು ಉಳಿದಿರುವ ರೆಸಾರ್ಟ್‌ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿ-ದೇವೇಗೌಡ ಅವರು ಸಭೆಯ ಸಮಯದಲ್ಲಿಯೇ ಕೆಲವು ಕಾಂಗ್ರೆಸ್ ಮುಖಂಡರ ಜೊತೆ ಸಹ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications