ಬಿಲ್ಡರ್ ಅಪಹರಣ ಪ್ರಕರಣ: ಐವರು ಅರೆಸ್ಟ್‌

arrest
ಬೆಂಗಳೂರು,ಜು.1: ಏಳು ದಿನಗಳ ಹಿಂದೆ ನಗರದ ಬಿಲ್ಡರ್ ಒಬ್ಬರನ್ನು ಅಪಹರಿಸುವ ಸಂಚು ರೂಪಿಸಿ 15 ಲಕ್ಷ ಹಣಕ್ಕೆ ಬೇಡಿಕೆ ಇರಿಸಿದ್ದ 5 ಜನ ದರೋಡೆಕೋರರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. [ಬಿಲ್ಡರ್ ಅಪಹರಿಸಿ ಹಣಗಳಿಸುವ ಸಂಚು ವಿಫಲ]

ರಾಘವೇಂದ್ರ ಬಡಾವಣೆಯ ಶ್ರೀನಿವಾಸ(27), ಮಹಾಲಕ್ಷ್ಮಿ ಲೇಔಟ್‌‌ನ ಆರ್ಮುಗಂ(27), ಕೃಷ್ಣನಗರದ ದೊರೆ ಬಿನ್ ಕೃಷ್ಣಮೂರ್ತಿ(20), ಪರಪ್ಪನ ಅಗ್ರಹಾರದ ಹರೀಶ ಬಿನ್ ಭಾಸ್ಕರ್(20), ಮೀನಾಕ್ಷಿ ಲೇಔಟ್ ರಾಯಸಂದ್ರದ ಸತೀಶ ಬಿನ್ ಕೃಷ್ಣ(20) ಬಂಧಿತ ಆರೋಪಿಗಳು.

ಬಂಧಿತರಿಂದ 5 ಲಕ್ಷ ರೂ ಮೌಲ್ಯದ 1 ಚಿನ್ನದ ಮಾಂಗಲ್ಯ ಸರ, ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಎಸ್ಟೀಮ್ ಕಾರು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಶ್ರೀನಿವಾಸ ಮತ್ತು ಮುರುಗ ಇವರಿಬ್ಬರು ಸ್ನೇಹಿತರಾಗಿದ್ದು ಇಬ್ಬರ ಮೇಲೂ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ ಮತ್ತು ಹೆಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಬಿಲ್ಡರ್‌ ಅಪಹರಣ ಪ್ರಕರಣದ ಮುಖ್ಯ ಸೂತ್ರಧಾರರಾಗಿದ್ದ ಇವರನ್ನು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಈ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳೆಲ್ಲರೂ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದು, ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ರಾತ್ರಿ ವೇಳೆಯಲ್ಲಿ ಕಾರಿನಲ್ಲಿ ಬರುವ ಸಾರ್ವಜನಿಕರನ್ನು ಅಪಹರಿಸಿ ಒತ್ತೆಯಾಗಿಟ್ಟುಕೊಂಡು ಹಣಗಳಿಸುವ ಸಂಚು ರೂಪಿಸಿದ್ದರು.

ಜುಲೈ 23ರ ರಾತ್ರಿ ಉತ್ತರಹಳ್ಳಿಯಲ್ಲಿ ವಿನೋದ್‍ರವರನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟು, ನಂತರ ಆವರ ಮನೆ ಬಳಿ ಬಂದು ತಾಯಿಯ ಮೈಮೇಲಿದ್ದ ಬಂಗಾರದ ಸರವನ್ನು ಕಸಿದುಕೊಂಡು ಹೋಗಿ ಮಾರಾಟ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ಡಿ.ರಾಜು ನೇತೃತ್ವದ ತಂಡ ಆರೋಪಿಗಳನ್ನು ಒಂದೇ ವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+