KSRTC: ಕನಕಪುರ-ಬೆಂಗಳೂರು ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ, 20 ವರ್ಷದ ಬಳಿಕ 4 ಬಸ್ ಸಂಚಾರ
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ರಾಜಧಾನಿ ಎಲ್ಲ ಜಿಲ್ಲೆಗಳ ಹಲವಾರು ಪ್ರದೇಶಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳು ಸಂಚರಿಸುತ್ತವೆ. ಆದರೆ ನಗರದಿಂದ ಕೊಂಚ ದೂರದ ಕನಕಪುರಕ್ಕೆ ಕಳೆದ ಎರಡು ದಶಕಗಳಿಂದ ನೇರ ಬಸ್ ಸೇವೆ ಇರಲಿಲ್ಲ. ಇದೀಗ ಮನವಿಗೆ ಸ್ಪಂದಿಸಿದ ಕೆಎಸ್‌ಆರ್‍ಟಿಸಿ ನಿಗಮದ ಅಧಿಕಾರಿಗಳು ನಾಲ್ಕು ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸುವ ಮೂಲಕ ಬೆಂಗಳೂರು-ಕನಪುರದ ಸಾರ್ವಜನಿಕರು, ಉದ್ಯೋಗಿಗಳಿಗೆ ಸೇರಿದಂತೆ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ್ದಾರೆ.
ಹೌದು, 2003ರಲ್ಲಿ ಕಾರಣಾಂತಗಳಿಂದ ಕನಕಪುರಕ್ಕೆ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಒಂದಷ್ಟು ಸಮಸ್ಯೆಗಳು ಉಂಟಾಗಿತ್ತು. ಇದನ್ನು ಗಮನಿಸಿದ ಜನ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಇತ್ತೀಚೆಗೆ ಸಾರಿಗೆ ನಿಗಮಕ್ಕೆ ಮನವಿ ಸಲ್ಲಿಸಿದ್ದರು. ಬಸ್ ಸೇವೆಗಳಿಂದ ಒಂದಷ್ಟು ಅನುಕೂಲವಾಗಲಿದೆ ಎಂದು ವಿವರಿಸಿದ್ದರು.

ಮನವಿಗೆ ಸ್ಪಂದಿಸಿದ ಕೆಎಸ್‌ಆರ್‍ಟಿಸಿ ಅಧಿಕಾರಿಗಳು ಕನಕಪುರ-ಬೆಂಗಳೂರು ನಡುವೆ ಬೆಳಗ್ಗೆ ಮತ್ತು ಸಂಜೆ ನಾಲ್ಕು ಬಸ್‌ಗಳನ್ನು ಕಾರ್ಯಾಚರಣೆ ಆರಂಭಿಸಿದೆ. ಈ ಮೂಲಕ 20 ವರ್ಷಗಳ ಬಳಿಕ ಕಾರ್ಮಿಕರು, ಸಾರ್ವಜನಿಕರು, ಮಹಿಳೆಯರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ನಿತ್ಯ ಬಸ್ ಸೇವೆ ಲಭಿಸಿದಂತಾಗಿದೆ. ಈ ಬಸ್‌ಗಳ ವೇಳಾಪಟ್ಟಿ ಮುಂದಿದೆ.
ಕನಕಪುರ-ಬೆಂಗಳೂರು ಬಸ್ ಸಂಚಾರ ಸಮಯ ಹೀಗಿದೆ
ಕನಕಪುರದಿಂದ ಬೆಳಗ್ಗೆ 6.30, 7.30, 08 ಗಂಟೆ ಹಾಗೂ 09 ಗಂಟೆಗೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರಲಿವೆ. ಬೆಂಗಳೂರು ಬಸ್ ನಿಲ್ದಾಣದಿಂದ ಸಂಜೆ 5.30, 6.30 ಮತ್ತು 8.30 ಕ್ಕೆ ಕನಕಪುರಕ್ಕೆ ಕೆಎಸ್‌ಆರ್‍ಟಿಸಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಎಲ್ಲ ವರ್ಗದ ಪ್ರಯಾಣಿಕರಿಗೆ ಈ ಬಸ್‌ಗಳಿಂದ ಅನುಕೂಲವಾಗಲಿದೆ. ಈ ಮೊದಲು ಸಂಜೆ ನಂತರ ಕನಕಪುರಕ್ಕೆ ಬಸ್ ಇರಲಿಲ್ಲ. ಇದೀಗ ಆ ಸಮಸ್ಯೆ ದೂರವಾಗಿದ್ದು, ಕನಕಪುರದ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮನವಿಗೆ ಅಧಿಕಾರಿಗಳ ಸ್ಪಂದನೆ, ಧನ್ಯವಾದ
ರಾಮನಗರ ಜಿಲ್ಲೆಯ ಕನಕಪುರದಿಂದ ನಿತ್ಯ ಬೆಂಗಳೂರು ಮಹಾನಗರಕ್ಕೆ ಉದ್ಯೋಗ, ಗಾರ್ಮೆಂಟ್ಸ್, ಶಿಕ್ಷಣ, ಇನ್ನಿತರ ಕೆಲಸ ಕಾರ್ಯಗಳ ನಿಮಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಅವರು ಬೆಳಗ್ಗೆ ಹಾಗೂ ಸಂಜೆ ನಂತರ ಸೂಕ್ತ ಸಮಯಕ್ಕೆ ಬಸ್‌ಗಳ ಅಭಾವ ಎದರಿಸುತ್ತಿದ್ದರು. ಖಾಸಗಿ ಹಾಗೂ ಇನ್ನಿತರ ವಾಹನಗಳನ್ನು ಅವಲಂಬಿಸಿದ್ದರು. ಸದ್ಯ ಕೆಎಸ್‌ಆರ್‍ಟಿಸಿಯಿಂದ ಬಸ್ ಸಂಚಾರ ಶುರುವಾಗಿದೆ. ತಮ್ಮ ಮನವಿಗೆ ಸ್ಪಂದಿಸಿ ಬಸ್‌ಗಳನ್ನು ಬಿಟ್ಟಿದ್ದಕ್ಕಾಗಿ ಜನರ ಪರವಾಗಿ ಸಾರಿಗೆ ನಿಗಮದ ಅಧಿಕಾರಿಗಳಿಗೆ ಜಯಕರ್ನಾಟಕ ಜನಪರ ವೇದಿಕೆ ಸಲಹೆಗಾರರಾದ ಕುಮಾರಸ್ವಾಮಿ ಅವರು ಧ್ಯನವಾದ ತಿಳಿಸಿದ್ದಾರೆ.












Click it and Unblock the Notifications