KSRTC: ಬೆಂಗಳೂರಿನ ಹತ್ತಿರವಿರುವ ಈ ನಗರಗಳಿಗೂ ಎಸಿ ಬಸ್ ಸೇವೆ ಆರಂಭಿಸಲು ಕೆಎಸ್‌ಆರ್‌ಟಿಸಿ ಚಿಂತನೆ
KSRTC: ಇಡೀ ರಾಜ್ಯದ್ಯಂತ ಸೇವೆ ನೀಡುತ್ತಿರುವ ಕೆಎಸ್‌ಆರ್‌ಟಿಸಿಯು ನಿರ್ವಹಣೆಯಲ್ಲಿ ದೇಶದಲ್ಲೇ ನಂ 1 ಸಾರಿಗೆ ಎಂಬ ಸ್ಥಾನವನ್ನು ಅಲಂಕರಿಸಿದೆ. ಅಲ್ಲದೆ, ಪ್ರತಿವರ್ಷವೂ ಸಹ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಾ ಬರುತ್ತಿದೆ. ಇನ್ನು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನಮನ್ನಣೆ ಪಡೆದುಕೊಂಡಿದೆ. ಇದೀಗ ಈ ಸಾರಿಗೆಯೂ ಬೆಂಗಳೂರಿನ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಸಿ ಬಸ್‌ಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಕೆಸ್‌ಆರ್‌ಟಿಸಿಯು ಎಸಿ ಬಸ್‌ಗಳನ್ನು ದೂರದ ಊರು, ಜಿಲ್ಲೆಗಳಿಗೆ ಮಾತ್ರ ಬಿಟ್ಟಿತ್ತು. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿಲೋ ಮೀಟರ್ ವ್ಯಾಪ್ತಿಯ ಸ್ಥಳಗಳಿಗೆ ಎಸಿ ಬಸ್‌ಗಳ ಸೇವೆ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC) ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರು, ವಿವಿಧ ಉದ್ದೇಶಗಳಿಗಾಗಿ ಪ್ರತಿನಿತ್ಯ ನಗರಕ್ಕೆ ಸಾವಿರಾರು ಜನರು ಪ್ರಯಾಣಿಸುತ್ತಿರುತ್ತಾರೆ. ವಿದ್ಯಾರ್ಥಿಗಳು, ಟೆಕ್ಕಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳು ಬೆಂಗಳೂರಿಗೆ ಹತ್ತಿರವಿರುವ ಕೋಲಾರ, ತುಮಕೂರು, ಆನೇಕಲ್, ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ, ಚಿಕ್ಕಬಳ್ಳಾಪುರ, ಹೊಸೂರಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಆದ್ದರಿಂದ ಈ ಮಾರ್ಗಗಳಿಗೂ ಎಸಿ ಬಸ್ ಸೇವೆ ಒದಗಿಸಲು ಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ನಿಗಮವು ಬೆಂಗಳೂರಿನಿಂದ ಚೆನ್ನೈ, ಮಂಗಳೂರು, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಗೋವಾ ಸೇರಿದಂತೆ ಇತರ ಮಾರ್ಗಗಳಲ್ಲಿ ಎಸಿ ಬಸ್ ಸೇವೆಗಳನ್ನು ಒದಗಿಸುತ್ತಿದೆ. ಆದರೆ, 100 ಕಿಮೀ ವ್ಯಾಪ್ತಿಯಲ್ಲಿರುವ ನಗರಗಳಿಗೆ ಎಸಿ ಸೇವೆಗಳನ್ನು ನೀಡಲಾಗಿಲ್ಲ. ಅಶ್ವಮೇಧ ಸೇರಿದಂತೆ ಅಸ್ತಿತ್ವದಲ್ಲಿರುವ ನಾನ್-ಎಸಿ ಬಸ್‌ಗಳು ಸಾಮಾನ್ಯ ಪಾಯಿಂಟ್-ಟು-ಪಾಯಿಂಟ್ ಬಸ್‌ಗಳಾಗಿದ್ದು, ಕುಳಿತುಕೊಳ್ಳಲು ಮತ್ತು ನಿಂತು ಪ್ರಯಾಣಿಸಲು ಅನುಕೂಲಕರವಾಗಿದೆ.
ಆದರೆ, ಯಾವುದೇ ತೊಂದರೆಯಿಲ್ಲದೆ, ಆರಾಮದಾಯಕವಾಗಿ, ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಇತರ ಸೌಕರ್ಯಗಳನ್ನು ಒದಗಿಸುವ ಎಸಿ ಬಸ್‌ಗಳಿಗೆ ಇದೀಗ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಇವುಗಳನ್ನು ನಗರದ 100 ಕಿಲೋ ಮೀಟರ್ ವ್ಯಾಪ್ತಿಯಲ್ಲೂ ಬಿಡಬೇಕು ಎನ್ನುವ ಆಗ್ರಹಗಳು ಮೊದಲಿನಿಂದಲೂ ಕೇಳಿಬಂದಿದ್ದವು.
ಬಿಎಂಟಿಸಿಯಿಂದ ಗುಡ್ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಇದು ಪ್ರಯಾಣಿಕರ ಅನುಕೂಕ್ಕೆ ತಕ್ಕಂತೆ ಆಹಾಗ ಶುಭಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಶುಭಸುದ್ದಿಯೊಂದನ್ನು ನೀಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಸದ್ಯ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ಹೆಚ್ಚಾಗಿ ಜನಮನ್ನಣೆ ಪಡೆದಿವೆ. ಬಹುತೇಕ ವಾಯು ವಜ್ರ ಬಸ್‌ಗಳು ವೋಲ್ವೋ ಕಂಪನಿ ನಿರ್ಮಿತ ಬಸ್‌ಗಳಾಗಿದ್ದು, ಇವುಗಳ ಬದಲಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಹಾಗಾದರೆ ಯಾವಾಗಿನಿಂದ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈಗಾಗಲೇ ನಗರದಲ್ಲಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ಮಾಡುತ್ತಿವೆ. ಇದೀಗ ಈ ಸೇವೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ವಿಸ್ತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಮುಂದಿನ ತಿಂಗಳಿನಿಂದಲೇ ಅಂದರೆ ಡಿಸೆಂಬರ್‌ನಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಓಡಲಿವೆ. ವೋಲ್ವೋ ಬಸ್‌ಗಳ ಕಾರ್ಯಾಚರಣೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಇದನ್ನು ನಿಯಂತ್ರಿಸಲು ಬಿಎಂಟಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದಲ್ಲಿ ವೋಲ್ವೋ ಬಸ್‌ಗಳು ತುಂಬಾ ಹಿಂದಿನಿಂದಲೂ ಸೇವೆ ಒದಗಿಸುತ್ತಾ ಬಂದಿವೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣವನ್ನು ಒದಗಿಸುತ್ತಾ ಬಂದಿದ್ದವು. ಆದರೆ, ಹೆಚ್ಚಿನ ನಿರ್ವಹಣಾ ವೆಚ್ಚಗಳ ಹಿನ್ನೆಲೆ ವೋಲ್ವೋ ಬಸ್‌ಗಳ ನಿರ್ವಹಣೆ ಬಿಎಂಟಿಸಿಗೆ ಲಾಭದಾಯಕ ಆಗಿಲ್ಲ. ಇದೇ ವೇಳೆ, ಅಶೋಕ್ ಲೇಲ್ಯಾಂಡ್ ಒದಗಿಸುವ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯಿಂದ ಬಿಎಂಟಿಸಿಗೆ ಲಾಭವಾಗಲಿದೆ ಎಂದು ತಿಳಿದುಬಂದಿದೆ.
ಬಳಿಕ ಇದನ್ನರಿತ ಬಿಎಂಟಿಸಿ ಅಧಿಕಾರಿಗಳು ಎಲೆಕ್ಟ್ರಿಕ್ ಬಸ್‌ಗಳ ಕಡೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಈ ಬಸ್‌ಗಳನ್ನು ತುಂಬಾ ಸಹಕಾರಿಯಾಗಲಿವೆ. ಆದ್ದರಿಂದ ಐಷಾರಾಮಿ ವೋಲ್ವೋ ಬಸ್‌ಗಳ ಬದಲು ಬಿಎಂಟಿಸಿಯು 320 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ.












Click it and Unblock the Notifications