KSRTC Airavat new 20 Bus: ಇಂದಿನಿಂದ ರಾಜ್ಯದೆಲ್ಲಡೆ ಹೊಸ ಬಸ್‌ಗಳು ಸಂಚಾರ, ವಿಶೇಷತೆ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಿಗಮಕ್ಕೆ 20 ಹೊಸ ಮಲ್ಟಿ ಆಕ್ಸೆಲ್ ವೋಲ್ವೋ ಬಸ್‌ಗಳನ್ನು ಸೇರ್ಪಡೆಗೊಳಿಸಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಆರಾಮದಾಯಕ ಪ್ರಯಾಣದ ಅನುಭವ ನೀಡಲು ಮುಂದಾಗಿದೆ. ಈ ಬಸ್‌ಗಳಿಗೆ ಇಂದು ಬುಧವಾರ ಅಕ್ಟೋಬರ್ 20ರಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
ಈ ಬಸ್‌ಗಳು ಇಂದಿನಿಂದ ಹೊಸಕೋಟೆ ಕೈಗಾರಿಕಾ ಘಟಕದಲ್ಲಿ ತಯಾರಾಗಿ ಬೆಂಗಳೂರಿ ಬಂದ ಈ ಬಸ್‌ಗಳು ಇನ್ಮುಂದೆ ಕೆಎಸ್‌ಆರ್‌ಟಿಸಿ ಭಾಗವೇ ಆಗಲಿವೆ. ವಿಧಾನಸೌಧದ ಆವರಣದಲ್ಲಿ ಈ ಬಸ್‌ಗಳ ಕಾರ್ಯಾಚರಣೆಗೆ ಅಧಿಕೃತ ಗ್ರೀನ್ ಸಿಗ್ನಲ್ ಸಿಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಸೇವೆ ನೀಡಲಿವೆ. ರಾಜ್ಯದ ಒಳಗೂ ಹಲವು ನಗರಗಳಿಗೆ ಈ ಹೊಸ ಐರಾವತ ಬಸ್‌ಗಳ ಸೇವೆ ಲಭ್ಯವಾಗಲಿದ್ದು, ಇದು ಪ್ರಯಾಣಿಕರ ಖಷಿ ಹೆಚ್ಚುವಂತೆ ಮಾಡಿದೆ.

ಸದ್ಯ ರಾಜ್ಯ ಸಾರಿಗೆ ಇಲಾಖೆಯು 20 ಹೊಸ ಮಲ್ಟಿ-ಆಕ್ಸಲ್ ವೋಲ್ವೋ ಬಸ್‌ಗಳನ್ನು ಖರೀದಿಸಿದೆ. ಇವುಗಳ ಸೇವೆ, ಬೇಡಿಕೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನಷ್ಟು ಹೊಸ ಬಸ್ ಖರೀದಿಗೆ ಪ್ಲಾನ್ ಮಾಡಿಕೊಂಡಿದೆ. ಇಂತಹ ಅತ್ಯಾಧುನಿಕ, ವಿಶಾಲ ಒಳಾಂಗಣ ಹೊಂದಿರುವ ಮಲ್ಟಿ ಆಕ್ಸೆಲ್ ಬಸ್‌ಗಳು ಕೇವಲ KSRTC ನಿಗಮಕ್ಕೆ ಮಾತ್ರ ಸೀಮಿತವಾಗದೇ, ಉತ್ತರ ಕರ್ನಾಟಕದಲ್ಲಿ ಸೇವೆ ನೀಡುವ NWKRTC, ಕಲ್ಯಾಣ ಕರ್ನಾಟಕದಲ್ಲಿ ಸೇವೆ ನೀಡುತ್ತಿರುವ KKRTC ನಿಗಮದಿಂದ ಖರೀದಿಗೆ ಇಲಾಖೆ ಚಿಂತನೆ ನಡೆಸಿದೆ.
ಈ ಬಸ್‌ಗಳು ರಾಜ್ಯದ ಮಹಾನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಗೆ ಹಾಗೂ ಚೆನ್ನ, ತಮಿಳುನಾಡು, ಕೇರಳ, ಹೈದರಾಬದ್ ಸೇರಿದಂತೆ ಮೊದಲ ಮಾರ್ಗಗಳಲ್ಲಿ ಸೇವೆ ನೀಡಲಿವೆ. ಈ ಬಗ್ಗೆ ರೂಟ್ ಮ್ಯಾಪ್ ನಿಗಮವೇ ನೀಡಲಿದೆ.
ಹೊಸ ಐರಾವತ ಬಸ್‌ಗಳ ವಿಶೇಷತೆಗಳೇನು?
* ವಿಶಾಲ ಒಳಾಂಗಣ ಹೊಂದಿರುವ ಈ ಬಸ್ 5.6ರಷ್ಟು ಎತ್ತರವಿದೆ.
* ಏರೋಡೈನಾಮಿಕ್ ವಿನ್ಯಾಸದಿಂದ ರೂಪುಗೊಂಡಿರುವ ಈ ಬಸ್ ಇಂಧನ ದಕ್ಷತೆ ಹೊಂದಿದೆ.
* ಒಟ್ಟಾರೆ ಬಸ್ಸಿನ ಉದ್ದದಲ್ಲಿ 3.5% ಅಧಿಕವಾಗಿದೆ. ಆಸನಗಳ ಮಧ್ಯೆ ಹೆಚ್ಚು ಅಂತರವಿರುವುದರಿಂದ ಪ್ರಯಾಣಿಕರಿಗೆ ಒಳ್ಳೆಯ ಅನುಭವ ನೀಡುತ್ತದೆ.
* ಹೊಸ ತಂತ್ರಜ್ಞಾನ ಬಳಸಿ ಸುಧಾರಿತ ಇಂಜಿನ್ ಈ ಬಸ್‌ಗಳಗೆ ಅಳವಡಿಸಲಾಗಿದೆ. ಹೀಗಾಗಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುತ್ತದೆ.
* ವಿಂಡ್‌ಶೀಲ್ಡ್ ಗಾಜು 9.5% ರಷ್ಟು ಅಗಲವಾಗಿದೆ. ಚಾಲಕನಿಗೆ ಗೋಚರತೆ ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ.
* ಈ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್‌ನಲ್ಲಿ ಉತ್ತಮ ಹವಾ ನಿಯಂತ್ರಣಾ ವ್ಯವಸ್ಥೆ ಇದೆ.
* ಪ್ರಯಾಣಿಕರ ಲಗೇಜ್ ಇಡಲು ಉತ್ತಮ ಸ್ಥಳಾವಕಾಶ ಇದೆ. ನಿಗಮದ ಹಳೆಯ ಬಸ್ ಗಳಿಗಿಂತಲೂ ವಿಶಾಲ ಲಗೇಜ್ ಜಾಗ ಹೊಂದಿರುವ ಬಸ್ ಇದಾಗಿದೆ.
* ಪ್ರಯಾಣಿಕರು ಸೀಟಿ ಪಕ್ಕದಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಕೊಡಲಾಗಿದೆ.
* ಅತ್ಯುತ್ತಮ ಗುಣಮಟ್ಟದ ಹಾಗೂ ವಿನ್ಯಾಸದ ಸೀಟುಗಳು, ಮೃದು ಸಾಮಗ್ರಿಗಳಿಂದ ಸೀಟು ತಯಾರಿಸಿ ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
* ವಿಶಾಲವಾದ ಪ್ಯಾಂಟೋಗ್ರಾಫಿಕ್ ವಿನ್ಯಾಸ ಹೊಂದಿರುವುದರಿಂದ ಅದು ವಾಹನದ ನಿರ್ವಹಣೆಯನ್ನು ಸುಲಭವಾಗಿಸಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
* ಬಸ್ ಹಿಂದಿಯಲ್ಲಿ ಸಹ ಫಾಗ್ ಲೈಟ್ ಒಳಗೊಂಡಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ದೊರೆಯಲಿದೆ.
* ಬಸ್ ನಲ್ಲಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ವ್ಯವಸ್ಥೆ (FAPS) ಇದೆ. ಬೆಂಕಿ ಅವಘಡ ಎದುರಾದರೆ ಅಂತಹ ತುರ್ತು ಸಮಯದಲ್ಲಿ ಅಧಿಕ ಸುರಕ್ಷತೆ ಒದಗಿಸಲಿದೆ. ಬಸ್ಸಿನ ಒಳಗೆ ಪ್ರ ಎರಡೂ ಬದಿಯಲ್ಲಿ ಇರುವ ನೀರಿನ ಪೈಪಿಗಳಿಂದ ನೀರು ಬಂದು ಬೆಂಕಿ ಆರಿಸುವ ವ್ಯವಸ್ಥೆ ಹೊಂದಿದೆ.
* ಪ್ರಯಾಣಿಕರಿಗೆ ಹಾಲಿ ಇರುವ ಬಸ್‌ಗಳಿಗಿಂತ ಈ ಬಸ್‌ಗಳು ಇನ್ನಷ್ಟು ಆರಾಮದಾಯ ಸೇವೆ ಒದಗಿಸಲಿವೆ ಎಂದು ನಿಗಮದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೂ.1 ಕೋಟಿ ಪರಿಹಾರ ಚೆಕ್ ವಿತರಿಸಿದ ಸಿಎಂ
ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇದೇ ವೇಳೆ KSRTC ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಪಘಾತಕ್ಕೆ ಒಳಪಟ್ಟು ಮೃತರಾದ 2 ಸಿಬ್ಬಂದಿಗಳ ಅವಲಂಭಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ರೂ.1 ಕೋಟಿ ಪರಿಹಾರ ಚೆಕ್ ಅನ್ನು ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ 5 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ರೂ.10 ಲಕ್ಷಗಳ ಪರಿಹಾರ ಚೆಕ್‌ನ್ನು ವಿತರಿಸಿದರು.
ಖಾಸಗಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು (ಶ್ರೀ ನಾಗರಾಜು ಎಂ.ಎನ್. ನಿರ್ವಾಹಕ, ರಾಮನಗರ ವಿಭಾಗ ಹಾಗೂ ಶ್ರೀ ಶಿವಣ್ಣ, ಚಾಲಕ ಕಂ ನಿರ್ವಾಹಕ, ಮೈಸೂರು ನಗರ ವಿಭಾಗ ರವರ) ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 22 ಸಿಬ್ಬಂದಿಗಳ ಅವಲಂಭಿತರಿಗೆ ರೂ.22 ಕೋಟಿ ಪರಿಹಾರ ನೀಡಲಾಯಿತು ಎಂದು ನಿಗಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications