KSRTC: ಬಸ್ ಅಪಘಾತ, ತುರ್ತು ಸ್ಥಿತಿಗಳಲ್ಲಿ ಪ್ರಯಾಣಿಕರು ಏನು ಮಾಡಬೇಕು? ಇವುಗಳನ್ನು ಪಾಲಿಸಿ ಸಾಕು
ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಸಮೀಪ ಹಿರಿಯೂರು ಬಳಿ ಇತ್ತೀಚೆಗೆ ಭೀಕರ ಬಸ್ ಅಪಘಾತ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟಿದ್ದರು. ಇದು ರಾಷ್ಟ್ರಮಟ್ಟದಲ್ಲೂ ಸುದ್ದಿ ಆಗಿತ್ತು. ಅದೇ ರೀತಿ ನಿತ್ಯವು ಒಂದಿಲ್ಲ ಒಂದು ಕಡೆಗಳಲ್ಲಿ ವಾಹನಗಳ ಅಪಘಾತ ಸಂಭವಿಸುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವಾಗ ತುರ್ತು ಸಂದರ್ಭಗಳು ಎದುರಾದಾಗ ಪ್ರಯಾಣಿಕರು ಹೇಗೆ ಜೀವ ಉಳಿಸಿಕೊಳ್ಳಬೇಕು?. ಅದಕ್ಕಾಗಿ ಏನು ಮಾಡಬೇಕು? ಏನೆಲ್ಲ ಪಾಲಿಸಬೇಕು? ಅಪಘಾತದ ಕ್ಷಣದಲ್ಲಿ ಹೇಗೆ ವರ್ತಿಸಬೇಕು? ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಲಹೆ ಮತ್ತು ಮಾರ್ಗದರ್ಶನ ನೀಡಿದೆ. ಇವನ್ನು ಅನುಸರಿಸಿದರೆ ನಿಮ್ಮ ಜೀವದ ಜೊತೆಗೆ ಇತರರ ಜೀವಗಳನ್ನೂ ಉಳಿಸಬಹುದಾಗಿದೆ.
ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ ಬಸ್‌ಗಳನ್ನು ಹೊರತುಪಡಿಸಿ ಪಲ್ಲಕ್ಕಿ, ಉತ್ಸವ, ಅಂಬಾರಿ, ಐರಾವತ, ಅಶ್ವಮೇಧ ಸೇರಿ ಇತರ ಪ್ರತಿಷ್ಠಿತ ದೊಡ್ಡ ಬಸ್‌ಗಳಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿಗಳು ಎದುರಾದರೆ ನಿಮ್ಮ ರಕ್ಷಣೆಗೆ ಹಲವಾರು ಸುರಕ್ಷಾ ವ್ಯವಸ್ಥೆಗಳನ್ನು, ಸೂಚನೆ, ಸಂಕೇತ ಒದಗಿಸಲಾಗಿದೆ. ಅವುಗಳ ಬಗ್ಗೆ ತಿಳಿಯುವುದು, ಸೂಕ್ತ ಕಾಲದಲ್ಲಿ ಬಳಸುವುದರಿಂದ ನೀವು ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ. ಅಂತಹ ಸೂಚನೆಗಳ ಏನು? ಎಂಬ ವಿವರ ಇಲ್ಲಿದೆ.

1. ಪ್ರತಿಷ್ಠಿತ ಬಸ್‌ಗಳಲ್ಲಿ ತುರ್ತು ಹ್ಯಾಮರ್ (ಸುತ್ತಿಗೆ)
ಮಲ್ಟಿಎಕ್ಸೆಲ್ ಸೇರಿ ಹಲವು ಪ್ರತಿಷ್ಠಿತ ಬಸ್‌ಗಳಲ್ಲಿ ಕಿಟಕಿಗಳ ಬಳಿ ಹ್ಯಾಮರ್ ಸುತ್ತಿಗೆ ಇಟ್ಟಿರುತ್ತಾರೆ. ಅದನ್ನು ಕಿಟಕಿ ಪಕ್ಕ ಅಳವಡಿಸಲಾಗಿರುತ್ತದೆ. ಈ ಸಾಧನದಿಂದ ನೀವು ತುರ್ತು ಸಂದರ್ಭಗಳಲ್ಲಿ, ಬಸ್ ಪಲ್ಟಿ ಆದಾಗ, ಒಳಗೆ ಬೆಂಕಿ ಹೊತ್ತಿಕೊಂಡಾಗ ಸರತಿ ಸಾಲಿನಲ್ಲಿ ಇಳಿಯಲು ಆಗಲ್ಲ. ಆಗ ಅದರಿಂದ ಕಿಟಕಿ ಒಡೆದು ಹೊರ ಬರಲು ಸಾಧ್ಯವಾಗುತ್ತದೆ. ತುರ್ತು ಪರಿಸ್ಥಿತಿ ವೇಳೆಯಲ್ಲಿ ಮಾತ್ರವೇ ಅದನ್ನು ಬಳಸಲು ಸೂಚಿಸಲಾಗಿದೆ.
2. ತುರ್ತು ನಿರ್ಗಮನ ದ್ವಾರ
ನೀವು ಬಸ್‌ನಲ್ಲಿ ಪ್ರಯಾಣಿಸುವಾಗ ತುರ್ತು ನಿರ್ಗಮನ ದ್ವಾರವನ್ನು ನೋಡಿಕೊಂಡಿರಬೇಕು. ಸಾಮಾನ್ಯವಾಗಿ ಮುಖ್ಯ ಬಾಗಿಲನ್ನು ತೆಗೆಯಲು ಆಗದಿದ್ದಾಗ ಮತ್ತು ಸೂಚನೆ ದೊರೆತಾಗ ಮಾತ್ರವೇ ತುರ್ತು ನಿರ್ಗಮನ ದ್ವಾರವನ್ನು ಬಳಸಬೇಕು. ಲಗೇಜುಗಳಿಂದ ತುರ್ತು ನಿರ್ಗಮನ ದ್ವಾರ ಮುಚ್ಚಿರಬಾರದು. ಹಾಗೇನಾದರೆ ಆದಲ್ಲಿ, ತುರ್ತು ವೇಳೆ ತೆಗೆಯಲು ಆಗದೇ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ.
ಅಗ್ನಿ ನಂದನ (ಫೈರ್ ಎಕ್ಸ್ಟಿಂಗ್ವಿಷರ್) ಬಳಕೆಗೆ ಸೂಚನೆ
ಬಸ್ ಒಳಗೆ ಈ ಅಗ್ನಿ ನಂದಕ ಸಾಧನ ಅಳವಡಿಸಲಾಗಿರುತ್ತದೆ. ಬಸ್‌ಗೆ ಅಗ್ನಿ ಹೊತ್ತಿಕೊಂಡ ಸಂದರ್ಭದಲ್ಲಿ ತತ್‌ಕ್ಷಣ ಚಾಲಕರಿಗೆ ಮಾಹಿತಿ ನೀಡಬೇಕು. ತರಬೇತಿ ಪಡೆದಿದ್ದರೆ ಅಗ್ನಿ ನಂದಕವನ್ನು ಬಳಸಬೇಕು. ಸಿಬ್ಬಂದಿಯ ಸೂಚನೆಗಳನ್ನು ಶಾಂತ ಸ್ಥಿತಿಯಿಂದ ಅನುಸರಿಸಬೇಕು. ಹೀಗೆ ಮಾಡಿದಲ್ಲಿ ಅಗ್ನಿ ಅವಘಡ ವೇಳೆ ನೀವು ಬಚಾವ್ ಆಗಬಹುದು. ಇಲ್ಲವೇ ದೊಡ್ಡ ಸಣ್ಣ ಪ್ರಮಾಣದ ಬೆಂಕಿ ಬಸ್‌ಗೆ ಆವರಿಸಿ ದೊಡ್ಡ ಜ್ವಾಲೆ ಆಗುವುದನ್ನು, ಪ್ರಾಣ ಹಾನಿಯನ್ನು ನೀವು ತಪ್ಪಿಸಬಹುದಾಗಿದೆ.
ಪ್ರಯಾಣಿಕರಿಗಾಗಿ ಪ್ಯಾನಿಕ್ ಬಟನ್
ಕೆಎಸ್‌ಆರ್‌ಟಿಸಿ ದೊಡ್ಡ ಬಸ್‌ಗಳಲ್ಲಿ ಒಳಭಾಗದಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಇರುತ್ತದೆ. ಪ್ರಯಾಣಿಕರು ಬಸ್‌ನಲ್ಲಿ ಆತಂಕ, ಜೀವ ಭಯ ಉಂಟಾದಲ್ಲಿ ನೀವು ಈ ಪ್ಯಾನಿಕ್ ಬಟನ್ ಒತ್ತಬಹುದು. ಅದು ಸಕ್ರಿಯವಾಗುತ್ತಿದ್ದಂತೆ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನೆ ಆಗುತ್ತದೆ. ಪ್ಯಾನಿಕ್ ಬಟನ್‌ಗಳನ್ನು ವಾಹನಗಳ ಹಾದಿ ಪತ್ತೆ ಹಾಗೂ ಮೇಲ್ವಿಚಾರಣಾ ವ್ಯವಸ್ಥೆ (ವಿಟಿಎಂಎಸ್) ಜೊತೆಗೆ ಸಂಯೋಜಿಸುವ ಕಾರ್ಯ ನಡೆಸಲಾಗುತ್ತಿದೆ. ಅದು ಈ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬಸ್ ಚಲಿಸುವಾಗ ಅಗ್ನಿ ಅವಘಡ, ತುರ್ತು ವೈದ್ಯಕೀಯ ಪರಿಸ್ಥಿತಿ, ಪ್ರಯಾಣಿಕರ ಸುರಕ್ಷತೆಗೆ ಅಪಾಯದ ಸಂದರ್ಭಗಳಲ್ಲಿ ಈ ಪ್ಯಾನಿಕ ಬಟನ್ ಒತ್ತಬೇಕು. ಒತ್ತಿದರೆ ಕೂಡಲೇ ಬಸ್‌ನಲ್ಲಿ ಶಬ್ದ ಉಂಟಾಗಿ ಸಂಬಂಧಿಸಿದ ಚಾಲಕ ಹಾಗೂ ಅಧಿಕಾರಿಗಳಿಗೆ ಮಾಹಿತಿ ತಲುಪುತ್ತದೆ. ಇನ್ನೂ ಬೇರೆ ಯಾರಾದರೂ ಈ ಪ್ಯಾನಿಕ್ ಬಟ್ ಒತ್ತಿದರೆ ನೀವು ತಕ್ಷಣ ಸಿಬ್ಬಂದಿಗೆ ಸ್ಪಂದಿಸಬೇಕು. ಅಲ್ಲದೇ ಸಹ ಪ್ರಯಾಣಿಕರಿಗೆ ಸಹಕರಿಸಬೇಕು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಡ್ಯಾಶ್ ಕ್ಯಾಮ್ ಮತ್ತು ಸ್ಯಾಲೂನ್ (ಒಳಭಾಗದ) ಕ್ಯಾಮೆರಾ
ಅಂಬಾರಿ, ಉತ್ಸವ ಬಸ್‌ಗಳಲ್ಲಿ ಡ್ಯಾಶ್ ಕ್ಯಾಮ್ ಮತ್ತು ಸ್ಯಾಲೋನ್ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಇವು ಚಾಲಕರ ಚಾಲನಾ ಶೈಲಿ ಹಾಗೂ ಸುರಕ್ಷತಾ ವಿಷಯಗಳನ್ನು ಮೇಲ್ವಿಚಾರಣೆ ಮಾಡುತ್ತವೆ. ಮುಂದಿನ ದಿನಗಳಲ್ಲಿ ಎಲ್ಲ ವಿಧದ ಸ್ಲೀಪರ್ ಬಸ್‌ಗಳಲ್ಲಿಯೂ ಡ್ಯಾಶ್‌ಕ್ಯಾಮ್ ಹಾಗೂ ಸ್ಯಾಲೂನ್ ಕ್ಯಾಮರಾಗಳನ್ನು ಅಳವಡಿಸುಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಇದರಿಂದ ಚಾಲಕರ ಉತ್ತಮ ಚಾಲನೆ ಬಗ್ಗೆ ಮಾಹಿತಿ ಸಿಗುತ್ತದೆ. ಒಂದು ವೇಳೆ ಬಸ್ ಒಳಗೆ ಪ್ರಯಾಣಿಕರ ಮಧ್ಯ ಗಲಾಟೆ, ಅಹಿತಕರ ಘಟನೆ ನಡೆದಾಗಲೂ ಸಾಕ್ಷಿವಾಗಿ ಇದರಲ್ಲಿ ದೃಶ್ಯಗಳನ್ನು ಪರಿಹರಿಸಲಾಗುತ್ತದೆ. ಕ್ಯಾಮೆರಾ ರೆಕಾರ್ಡಿಂಗ್ ಇರುವ ಹಿನ್ನೆಲೆ ಏನೆ ನಡೆದರೂ ಗೊತ್ತಾಗುತ್ತದೆ.
ಪ್ರಥಮ ಚಿಕಿತ್ಸಾ ಪೆಟ್ಟಿಗೆ
ಎಲ್ಲ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುತ್ತದೆ. ಅದರಲ್ಲಿ ಅಗತ್ಯವಿರುವ ಎಲ್ಲ ಔಷಧೋಪಕರಣಗಳು ಇರುತ್ತವೆ. ಬ್ಯಾಂಡೇಜ್, ಟಿಂಚರ್, ಮುಲಾಮು ಸೇರಿ ಅಗತ್ಯ ಔಷಧಿ ಇಟ್ಟಿರಲಾಗಿರುತ್ತದೆ. ಅಪಘಾತ ಸೇರಿ ತುರ್ತು ಸಂದರ್ಭಗಳಲ್ಲಿ ಚಾಲಕರಿಗೆ, ನಿರ್ವಾಹಕರಿಗೆ, ಇಲ್ಲವೇ ಪ್ರಯಾಣಿಕರಿಗೆ ಗಾಯಗಳಾದಲ್ಲಿ ಅದನ್ನು ಬಳಸಬಹುದಾಗಿದೆ.
ಅಗ್ನಿ ಪತ್ತೆ ಮತ್ತು ನಂದಿಸುವ ವ್ಯವಸ್ಥೆ (FDSS)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಎಲ್ಲ ಬಸ್‌ಗಳಲ್ಲಿ ಅಂಬಾರಿ, ಉತ್ಸವ, ಐರಾವತ್ ಕ್ಲಬ್ ಕ್ಲಾಸ್ 2.0 ಮತ್ತು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಅಗ್ನಿ ಪತ್ತೆ ಮತ್ತು ನಂದಿಸುವ ವ್ಯವಸ್ಥೆ (FDSS) ಇರುತ್ತದೆ.
ಪ್ರಯಾಣಿಕರ ಸುರಕ್ಷತಾ ಸಲಹೆಗಳು
ಬಸ್‌ಗಳಲ್ಲಿ ಪ್ರಯಾಣಿಕರಿಗೆ ಒಂದಷ್ಟು ಸೂಚನಾ ಫಲಕ ಅಥವಾ ಸಂಕೇತಗಳನ್ನು ಹಾಕಿರುತ್ತಾರೆ. ಅಲ್ಲಿನ ಸೂಚನೆಗಳನ್ನು ನೀವು ಪಾಲಿಸಬೇಕು. ಉದಾಹರಣೆಗೆ ಧೂಮಪಾನ ನಿಷೇಧಿಸಲಾಗಿದೆ ಎಂದಿರುತ್ತದೆ. ಅಂದರೆ ನೀವು ಬಸ್‌ನಲ್ಲಿ ಸಿಗರೇಟ್, ಬೀಡಿ ಸೇದುವಂತಿಲ್ಲ. ಬಸ್ ಚಲಿಸುವಾಗ ನೀವು ಆಸನದಲ್ಲೇ ಕುಳಿತುಕೊಳ್ಳಬೇಕು. ತುರ್ತು ವೇಳೆ ಮಕ್ಕಳು, ವೃದ್ಧರಿಗೆ, ಅಂಗವಿಕಲರಿಗೆ ಸಹಾಯ ಮಾಡಬೇಕು. ನಿಮ್ಮ ಹಾಗೂ ಸಹ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳಲ್ಲಿ ಡೀಸೆಲ್, ಪೆಟ್ರೋ, ಅಡುಗೆ ಅನಿಲ, ಪಟಾಕಿಗಳಂತಹ ಸ್ಪೋಟಕ ಒಯ್ಯಬಾರದು. ಇವೆಲ್ಲ ಬಸ್‌ಗಳಲ್ಲಿ ಒಯ್ಯುವುದನ್ನು ನಿಷೇಧಿಸಲಾಗಿದೆ. ಇದರಿಂದ ಜೀವ ತೊಂದರೆ ಆಗುವ ಸಂಭವವಿರುತ್ತದೆ.
ಈ ಮೇಲಿನ ಸೂಚನೆ, ಸಲಹೆಗಳು ಮತ್ತು ನಿಯಮ ಪಾಲನೆ ಗಳಿಂದ ತುರ್ತು ಸಂದರ್ಭಗಳಲ್ಲಿ ನೀವು ತಪ್ಪಿಸಿಕೊಳ್ಳಬಹುದು. ಇಲ್ಲವೇ ಸಂಭವನೀಯ ಅಪಾಯ ತಡೆಯಲು ಸಾಧ್ಯವಾಗುತ್ತದೆ. ಇದರಿಂದ ನೀವು ಸುರಕ್ಷಿತ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
-
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications