ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5500 ಹೊಸ ಬಸ್ ಖರೀದಿ,ಅಗ್ನಿಶಾಮಕ ಸಾಧನ ಕಡ್ಡಾಯ

ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಸದೃಢಗೊಳಿಸಲು ಹಾಗೂ ಸಾರ್ವಜನಿಕರಿಗೆ ಸಗಟು ಸಂಚಾರ ವ್ಯವಸ್ಥೆ ಕಲ್ಪಿಸಲು ಜೂನ್ ಅಂತ್ಯದ ಒಳಗಾಗಿ ಸಾರಿಗೆ ಸಂಸ್ಥೆಗೆ 5500 ಹೊಸ ಬಸ್ ಗಳನ್ನು ಖರೀದಿಸಲಾಗುವುದು

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 24: ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಸದೃಢಗೊಳಿಸಲು ಹಾಗೂ ಸಾರ್ವಜನಿಕರಿಗೆ ಸಗಟು ಸಂಚಾರ ವ್ಯವಸ್ಥೆ ಕಲ್ಪಿಸಲು ಜೂನ್ ಅಂತ್ಯದ ಒಳಗಾಗಿ ಸಾರಿಗೆ ಸಂಸ್ಥೆಗೆ 5500 ಹೊಸ ಬಸ್ ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮಾರ್ಚ್ ತಿಂಗಳ ಅಂತ್ಯಕ್ಕೆ 1650 ಹೊಸ ಬಸ್ ಗಳು ಸಂಸ್ಥೆಗೆ ಬರಲಿದ್ದು ಎಲ್ಲಾ 1650 ಬಸ್ಸುಗಳನ್ನು ಬೆಂಗಳೂರು ಸಂಚಾರಕ್ಕೆ ಬಳಸಲಾಗುವುದು. ಈ ಪೈಕಿ 550 ವೋಲ್ವೊ ಬಸ್ ಗಳಾಗಿವೆ.[5,500 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ]

ನಂತರ ಖರೀದಿಸುವ ಬಸ್ಸುಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ವಿಭಾಗಗಳಿಗೆ ಮೀಸಲಿರಿಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಕಟಿಸಿದರು. ಹೊಸ ಬಸ್ಸುಗಳು ಬಂದ ಮೇಲೆ ಹಳೆಯ ಬಸ್‍ಗಳನ್ನು ನಿಲ್ಲಿಸಿ ಆ ಮಾರ್ಗಗಳಲ್ಲಿ ಹೊಸ ಬಸ್‍ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಸಚಿವರು ತಿಳಿಸಿದರು.

KSRTC to get over 5,500 new buses Fire extinguishers : Ramalinga Reddy
ಇತ್ತೀಚೆಗೆ ನೆಲಮಂಗಲದ ಹತ್ತಿರ ನಡೆದ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಬಸ್‍ನಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ. ದುರಂತ ನಡೆದ ಸಂದರ್ಭದಲ್ಲಿ ಬಸ್ಸಿನ ಇಂಜೀನ್, ಡಿಸೇಲ್ ಟ್ಯಾಂಕರ್, ಬಸ್ಸಿನ ಟೈರ್ ಗಳು ಸುಸ್ಥಿತಿಯಲ್ಲಿದ್ದವು. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರೇ ಹೇಳುವಂತೆ ಪೂಜಾ ಸಾಮಗ್ರಿಗಳುಳ್ಳ ಒಂದು ಚೀಲ ಇತ್ತು. ಆ ಕಾರಣದಿಂದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನುತ್ತಿದ್ದಾರೆ.

ಆದರೂ ಸತ್ಯಾಸತ್ಯತೆ ಅರಿಯಲು ಬೆಂಕಿ ದುರಂತದ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಕೆಲವು ಮಾದರಿಗಳನ್ನು ಪ್ರಯೋಗಾಲಂiÀiಕ್ಕೆ ಕಳುಹಿಸಲಾಗಿದೆ. ಒಂದು ವಾರದಲ್ಲಿ ವರದಿ ಬರುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಅಗ್ನಿಶಾಮಕ ಸಾಧನ ಅಳವಡಿಕೆ: ಸರ್ಕಾರಿ, ಖಾಸಗಿ, ಶಾಲಾ ಕಾಲೇಜು ವಾಹನ ಹಾಗೂ ಲಾರಿಗಳಲ್ಲಿ ಅಗ್ನಿ ದುರಂತ ತಡೆಯುವ ಸಂಬಂಧ ಅಗ್ನಿಶಾಮಕ ಸಾಧನವನ್ನು ಕಡ್ಡಾಯವಾಗ ಅಳವಡಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದರು.

English summary
KSRTC to get over 5,500 new buses fitted with Fire extinguishers. Of the new buses, Bengaluru Metropolitan Transport Corporation (BMTC) will get 1,650 buses, and this includes 150 Volvo buses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X