KSRTC e-buses: ಐದು ಜಿಲ್ಲೆಗಳಲ್ಲಿ ಫೆಬ್ರವರಿಯಲ್ಲಿ ಆರಂಭವಾಗಬೇಕಿದ್ದ ಎಲೆಕ್ಟ್ರಿಕ್ ಬಸ್‌ಗಳು ಇನ್ನೂ ವಿಳಂಬ?

ರಾಜ್ಯದ ಇತರ ಮಾರ್ಗಗಳಲ್ಲಿಯೂ ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆಯಿದ್ದರೂ, ಪ್ರಯಾಣಿಕರು ಮಾರ್ಚ್‌ವರೆಗೆ ಕಾಯಬೇಕಾಗಬಹುದು.

ಬೆಂಗಳೂರು, ಫೆಬ್ರವರಿ. 13: ಮೈಸೂರು - ಬೆಂಗಳೂರು ನಡುವೆ ಸಂಚಾರ ಆರಂಭಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇಂತಹದ್ದೇ ಬಸ್‌ಗಳಿಗಾಗಿ ಎದುರು ನೋಡುತ್ತಿದ್ದ ಇತರ ಜಿಲ್ಲೆಗಳಿಗೆ ನಿರಾಶೆ ಎದುರಾಗಿದೆ.

ಹೌದು, ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ರಾಜ್ಯದ ಐದು ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವ ಯೋಜನೆ ಮಾಡಿತ್ತು. ಆದರೆ ಇದು ಈ ತಿಂಗಳು ಪ್ರಾರಂಭವಾಗುವ ಸಾಧ್ಯತೆಯಿಲ್ಲ.

ಏಕೆಂದರೆ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಬೇಕಿದ್ದ ಖಾಸಗಿ ನಿರ್ವಾಹಕರು ಇನ್ನೂ 49 ಬಸ್‌ಗಳನ್ನು ನೀಡಿಲ್ಲ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ. ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್ ಬಸ್ ಯಶಸ್ವಿಯಾಗಿ ಓಡುತ್ತಿದ್ದು, ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

KSRTC e-buses: Electric buses on five routes in Karnataka is unlikely to take off in Feb

ರಾಜ್ಯದ ಇತರ ಮಾರ್ಗಗಳಲ್ಲಿಯೂ ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆಯಿದ್ದರೂ, ಪ್ರಯಾಣಿಕರು ಮಾರ್ಚ್‌ವರೆಗೆ ಕಾಯಬೇಕಾಗಬಹುದು.

"20 ಅಂಬಾರಿ ಉತ್ಸವ್ ಎಸಿ ವೋಲ್ವೊ, 350 ಎಲೆಕ್ಟ್ರಿಕ್ ವಾಹನ, 40 ನಾನ್ ಎಸಿ ಸ್ಲೀಪರ್ (222ವೀಲ್ ಬೇಸ್), 13.5 ಮೀಟರ್ ಉದ್ದದ ನಾಲ್ಕು ಎಸಿ ಸ್ಲೀಪರ್, 13.4 ಮೀಟರ್ ಉದ್ದದ 4 ನಾನ್ ಎಸಿ ಸ್ಲೀಪರ್, 50 ಸಿಟಿ ವೆಹಿಕಲ್ (ಡಲ್ಪ್), 550 ಕರ್ನಾಟಕ ಸಾರಿಗೆ ವಾಹನಗಳನ್ನು ಖರೀದಿಸಲಾಗುತ್ತದೆ. ಈಗಾಗಲೆ ಎಲೆಕ್ಟ್ರಿಕ್ ಬಸ್‌ಗಳನ್ನು ಚೀನಾ ಮೂಲದ ಕಂಪನಿಯಿಂದ ಖರೀದಿಸಲಾಗುತ್ತಿದೆ. ಕೊರೊನಾ ಕಾರಣಕ್ಕಾಗಿ ತಯಾರಿಕೆ ವಿಳಂಬವಾಗಿದೆ. ಫೆಬ್ರವರಿ 15 ರೊಳಗೆ 50 ಬಸ್‌ಗಳ ಸೇವೆ ಆರಂಭವಾಗಲಿದೆ" ಎಂದು ಈ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದ್ದರು.

ಆದರೆ, ಫೆಬ್ರವರಿ 15 ರೊಳಗೆ ರಾಜ್ಯದ ಐದು ಜಿಲ್ಲೆಗಳಿಗೆ 50 ಬಸ್‌ಗಳ ಸೇವೆ ನೀಡಲು ಸಾಧ್ಯವಿಲ್ಲ. ಏಕೆಂದರೆ ಖಾಸಗಿ ನಿರ್ವಾಹಕರು ಇನ್ನೂ 49 ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಿಲ್ಲ.

KSRTC e-buses: Electric buses on five routes in Karnataka is unlikely to take off in Feb

ಇ-ಬಸ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಇ-ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಕೆಎಸ್‌ಆರ್‌ಟಿಸಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಪ್ರಯಾಣಿಕರು ಇಂತಹದ್ದೆ ಬಸ್‌ಗಳನ್ನು ರಾಜ್ಯದ ಹಲವೆಡೆ ಆರಂಭಿಸಲು ಒತ್ತಾಯಿಸಿದ್ದಾರೆ.

ಎಲೆಕ್ಟ್ರಿಕ್ ಬಸ್‌ಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳು ಸೇರಿಂದತೆ ಮೂಲಸೌಕರ್ಯಗಳನ್ನು ಮಾಡಲಾಗುತ್ತಿದೆ. ಖಾಸಗಿ ನಿರ್ವಾಹಕರು ಬಸ್‌ಗಳನ್ನು ವಿತರಿಸಲಿ ಎಂದು ಕಾಯುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಇನ್ನು, ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್‌ ತಿಂಗಳಿನಲ್ಲಿ ಕನಿಷ್ಠ 25 ಎಲೆಕ್ಟ್ರಿಕ್ ಬಸ್‌ಗಳು ಸಿಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ಗಳು ತಲುಪಿದ ನಂತರ, ಅವುಗಳನ್ನು ನೋಂದಾಯಿಸಬೇಕು, ಪರೀಕ್ಷಿಸಬೇಕು ಮತ್ತು ಪ್ರಯೋಗಗಳಿಗೆ ಒಳಪಡಿಸಬೇಕು. ಹೀಗಾಗಿ ಸಾರ್ವಜನಿಕರ ಸೇವೆಗೆ ಸಿಗುವುದು ವಿಳಂಬವಾಗುತ್ತದೆ ಎಂದು ಮೂಲವೊಂದು ತಿಳಿಸಿದೆ.

ಇ-ಬಸ್‌ಗಳನ್ನು ಒಂದು ಬಾರಿ ಚಾರ್ಜ್‌ ಮಾಡಿದರೇ 300 ಕಿಮೀ ಓಡುವ ಸಾಮರ್ಥ್ಯ ಹೊಂದಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಮೊದಲ ಹಂತದಲ್ಲಿ ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು-ಶಿವಮೊಗ್ಗ ವಲಯಗಳಲ್ಲಿ ಬಳಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+