KSRTC ಟಿಕೆಟ್ ನಲ್ಲೂ ಚುನಾವಣಾ ಮತದಾನ ಜಾಗೃತಿ: ಫೋಟೋ

ಬೆಂಗಳೂರು, ಏಪ್ರಿಲ್ 02: ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬ ಅಂತಲೇ ಭಾವಿಸಲಾಗುತ್ತದೆ. ಇದಕ್ಕೆ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಆರಂಭಿಸುತ್ತವೆ. ಆದರೆ ಮತದಾರರು ಮಾತ್ರ ಚುನಾವಣೆ ವೇಳೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ನಾನಾ ರೂಪದಲ್ಲಿ ಪ್ರಯತ್ನಿಸಲಾಗುತ್ತದೆ.

ಇದೀಗ ಲೋಕಸಭಾ ಚುನಾವಣೆಯಲ್ಲಿ ಮತದಾರರ ಸೆಳೆಯಲು, ಮತದಾನ ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೈ ಜೋಡಿಸಿದೆ. KSRTC ಸಾರಿಗೆ ನಿಗಮವು ಪ್ರಯಾಣಿಕರಿಗೆ ನೀಡುವ 'ಟಿಕೆಟ್' ನಲ್ಲೂ ಮತದಾನ ಜಾಗೃತಿ ಮೂಡಿಸುತ್ತಿದೆ. ಈ ಕುರಿತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

KSRTC Bus Tickets Raise Awareness for 2024 Lok Sabha Elections Voting

ನೀವು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದರೆ, ನಿಮ್ಮ ಕೈಗೆ ಸಿಗುವ ಟಿಕೆಟ್‌ನಲ್ಲಿ ಮತದಾನ ಜಾಗೃತಿಯ ವಾಕ್ಯವನ್ನು ಕಾಣಬಹುದಾಗಿದೆ. ನಿಗಮವು ಟಿಕೆಟ್ ನಲ್ಲಿ 'ಮತದಾನ ನಮ್ಮೆಲ್ಲರ ಹಕ್ಕು ದಿ: 26.04.2024 ಮತ್ತು 07.05.2024 ರಂದು ತಪ್ಪದೇ ಮತದಾನ ಮಾಡಿ' ಎಂದು ಮತದಾರರಲ್ಲಿ ಮನವಿ ಮಾಡಲಾಗಿದೆ.

ಎರಡು ಹಂತದಲ್ಲಿ ಚನಾವಣೆ: ಮತದಾನ ಮಾಡಿ

ಈ ಮೂಲಕ ಎಲ್ಲರ ಹಕ್ಕು-ಕರ್ತವ್ಯವಾಗಿರುವ ಮತದಾನ ಅವನ್ನು ತಪ್ಪದೇ ಚಲಾಯಿಸುವಂತೆ ಸಾರಿಗೆ ನಿಗಮವು ತಿಳಿಸಿದೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26 ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಂತರ ಮೇ 07ರಂದು ಬಾಕಿ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದು ಚುನಾವಣೆ ಆಯೋಗ ಘೋಷಿಸಿದೆ.

KSRTC Bus Tickets Raise Awareness for 2024 Lok Sabha Elections Voting

ಎಲ್ಲೆಡೆ ಮತದಾನ ಜಾಗೃತಿ

ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲಡೆ ಚುನಾವಣೆಯನ್ನು ಹಬ್ಬ ರೀತಿಯಲ್ಲಿ ಆಚರಿಸಲಾಗುತ್ತದೆ. ಅಂದು ಮತದಾನ ಸುಸೂತ್ರವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಅನುಕೂಲವಾಗುವಂತೆ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ರಜೆ ನೀಡಲಾಗಿರುತ್ತದೆ. ಹೀಗಿದ್ದರೂ ರಜೆಯ ಸದುಪಯೋಗ ಮಾಡಿಕೊಂಡು ಮತದಾನ ಹಾಕುವವರ ಜೊತೆಗೆ ಹಲವರು ರಜೆಗೆ ಮತದಾನ ಮಾಡದಿರುವುದು ಕಂಡು ಬರತ್ತಿದೆ.

ಹೀಗಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತದೆ. ಬಿಬಿಎಂಪಿ ನಗರದಲ್ಲಿ ಜಾಗೃತಿ ಜಾಥಾ ಮೂಲಕ ಜನರಲ್ಲಿ ಮತದಾನದ ಅರಿವು ಮೂಡಿಸುತ್ತಿದೆ. ಅದರ ಭಾಗವಾಗಿ ಸಾರ್ವಜನಿಕ ಸಾರಿಗೆಯ ಟಿಕೆಟ್‌ನಲ್ಲಿಯೂ ಇದೀಗ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+