Krishna Janmashtami: ಬೆಂಗಳೂರಿನಲ್ಲಿ ಇಸ್ಕಾನ್ ಟೆಂಪಲ್ ರಸ್ತೆ ಮಾರ್ಗ ಬದಲಾವಣೆ, ಪರ್ಯಾಯ ಮಾರ್ಗಗಳ ಬಗ್ಗೆ ತಿಳಿಯಿರಿ...

ಬೆಂಗಳೂರು ಸೆಪ್ಟೆಂಬರ್ 6: ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಸಡಗರ ಸಂಭ್ರಮ ಮುಗಿಲು ಮುಟ್ಟಿದೆ. ಬೆಳಿಗ್ಗೆಯಿಂದಲೇ ಭಕ್ತ ಸಾಗರ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ಇಂದು(ಸೆಪ್ಟೆಂಬರ್ 6) ಮತ್ತು ನಾಳೆ (ಸೆಪ್ಟೆಂಬರ್ 7) ಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ದೇವರ ದರ್ಶನ ಪಡೆಯಲು ಭಕ್ತಾಧಿಗಳು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಹೀಗಾಗಿ ಇಸ್ಕಾನ್ ಟೆಂಪಲ್ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದ್ದು ಈ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಹಾಗಾದರೆ ಪ್ರಕಟಣೆಯಲ್ಲಿ ಏನಿದೆ? ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮಲ್ಲೇಶ್ವರಂ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ಇಂದು (ಸೆಪ್ಟೆಂಬರ್ 6) ಮತ್ತು ನಾಳೆ (ಸೆಪ್ಟೆಂಬರ್ 7) ಡಾ.ರಾಜ್‌ಕುಮಾರ್ ರಸ್ತೆ ಮತ್ತು ವೆಸ್ಟ್‌ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸುವ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.

krishnajanmashtami: Know about ISKCON Temple Road route change in Bengaluru, alternate routes...

ಎಲ್ಲೆಲ್ಲಿ ಮಾರ್ಗ ಬದಲಾವಣೆ:-

ಯಶವಂತಪುರ ಕಡೆಯಿಂದ-ಓರಾಯನ್ ಮಾಲ್-ಡಾ ರಾಜ್ ಕುಮಾರ್ ರಸ್ತೆಯ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಕೆ.ಎಸ್‌.ಆರ್‌.ಟಿ.ಸಿ ಬಸ್ಸುಗಳು ಹಾಗೂ ವಾಹನಗಳಿಗೆ ಪಾರ್ಯಾಯ ಮಾರ್ಗ ಸೂಚಿಸಿಲಾಗಿದೆ.

ಮಾರಪ್ಪನಪಾಳ್ಯ-ಯಶವಂತಪುರ ಫ್ಲೈಓವರ್ ಮಾರ್ಗವಾಗಿ-ಬಿಹೆಚ್.ಇ.ಎಲ್(ಕೆ-8) ಅಂಡರ್ ಪಾಸ್ ಮೂಲಕ -ಸರ್ಕಲ್ ಮಾರಮ್ಮ ಬಳಿ ಬಲ ತಿರುವುದು ಪಡೆದು- ಮಾರ್ಗೋಸ ರಸ್ತೆ ಮಲ್ಲೇಶ್ವರಂ ಮಾರ್ಗವಾಗಿ- ಕೆ.ಸೊ ಜನರಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು- ಮಲ್ಲೇಶ್ವರಂ ಬ್ರಿಡ್ಕ್ ಅಂಡರ್ ಪಾಸ್ ಮೂಲಕ-ಲಿಂಕ್ ರಸ್ತೆಯಲ್ಲಿ ಸಂಚರಿಸಿ- ಶೇಷಾದ್ರಿಪುರಂ ಮಾರ್ಗವಾಗಿ ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್) ಕಡೆ ಸಂಚಸಿಸುವುದು.

ಯಶವಂತಪುರ ಕಡೆಯಿಂದ-ವೆಸ್ಟ್ ಆಫ್ ಕಾರ್ಡ್‌ ರಸ್ತೆ- ಇಸ್ಕಾನ್ ದೇವಸ್ಥಾನ- ಮಹಾಲಕ್ಷ್ಮೀ ಲೇಔಟ್ ಎಂಟ್ರೇನ್ಸ್‌ ಮಾರ್ಗವಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮಾಗಡಿ ರಸ್ತೆ, ವಿಜಯನಗರ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್‌ಸುಗಳು ಮತ್ತು ವಾಹನಗಳಿಗೆ ಪಾರ್ಯಾಯ ಮಾರ್ಗ ಸೂಚಿಸಿಲಾಗಿದೆ.

krishnajanmashtami: Know about ISKCON Temple Road route change in Bengaluru, alternate routes...

ಯಶವಂತಪುರ ಕಡೆಯಿಂದ ಬಂದ ಬಿಎಂಟಿಸಿ ಬಸ್ಸುಗಳು ಮತ್ತು ವಾಹನ ಸವಾರರು- ಜಿಎಸ್‌.ಎಫ್ ಸರ್ಕಲ್- ಓರಾಯನ್ ಮಾಲ್ ಮುಂಭಾಗ- ಡಾ.ರಾಜ್ ಕುಮಾರ್ ರಸ್ತೆಯ ಮೂಲಕ -ಡಾ.ರಾಜ್‌ ಕುಮಾರ್ ರಸ್ತೆ ಹತ್ತನೇ ಕ್ರಾಸ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು-ಡಯಕಾನ್ ಜಂಕ್ಷನ್ ಮಾರ್ಗವಾಗಿ- ರಾಜಾಜಿನಗರ ಒಂದನೇ ಬ್ಲಾಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು- ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸಿ ಮಾಗಡಿ ರಸ್ತೆ, ವಿಜಯನಗರ ಕಡೆಗೆ ಸಂಚರಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+