• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯರಾತ್ರಿಯಿಂದ ಕೆ. ಆರ್. ಮಾರುಕಟ್ಟೆ ಓಪನ್; ಸಿದ್ಧತೆ ಹೇಗಿದೆ?

|

ಬೆಂಗಳೂರು, ಆಗಸ್ಟ್ 31: ಇಂದು ಮಧ್ಯರಾತ್ರಿಯಿಂದ ಬೆಂಗಳೂರು ನಗರದ ಕೆ. ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆ ಬಾಗಿಲು ತೆರೆಯಲಿದೆ. ವ್ಯಾಪಾರಿಗಳು ಮತ್ತು ಜನರಿಗೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

   ಇಡೀ ಪ್ರಪಂಚದಲ್ಲೇ ಇಷ್ಟು ಪ್ರಕರಣಗಳು ಯಾವ ದೇಶದಲ್ಲೂ ಪತ್ತೆಯಾಗಿಲ್ಲ | Oneindia Kannada

   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆ. ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯನ್ನು ಆರಂಭಿಸಲು ಒಪ್ಪಿಗೆ ನೀಡಿದೆ. ಸೆಪ್ಟೆಂಬರ್ 1ರಿಂದ ಮಾರುಕಟ್ಟೆ ಆರಂಭವಾಗಲಿದೆ. ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು.

   ಸೆ.1ರಿಂದ ಕೆ. ಆರ್. ಮಾರ್ಕೆಟ್ ಓಪನ್; ನಿಯಮ ಪಾಲನೆ ಕಡ್ಡಾಯ

   ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾರುಕಟ್ಟೆ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರುಕಟ್ಟೆಯಲ್ಲಿ ಮಾಡಿಕೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಿದರು.

   ಕೆ. ಆರ್. ಮಾರುಕಟ್ಟೆ ತೆರೆಯುವಂತೆ ಪ್ರತಿಭಟನೆ

   ಬೆಂಗಳೂರು ನಗರದಲ್ಲಿ ಭಾನುವಾರವೂ 2821 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಸೋಂಕಿತರು ಇರುವ ನಗರ ಬೆಂಗಳೂರು. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,27,263.

   ಸೆಪ್ಟೆಂಬರ್ 1ರಿಂದ ಕೆ. ಆರ್. ಮಾರುಕಟ್ಟೆ ಓಪನ್

   ಜೀವ ಮತ್ತು ಜೀವನ

   ಜೀವ ಮತ್ತು ಜೀವನ

   ಜುಲೈ ಮತ್ತು ಆಗಸ್ಟ್ ತಿಂಗಳನ್ನು ಹೋಲಿಕೆ ಮಾಡಿ ನೋಡಿದಾಗ ಜುಲೈನಲ್ಲಿ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ 1.85% ಇತ್ತು. ಅದು ಈಗ ಕಡಿಮೆ ಆಗಿ 1,53% ಆಗಿದೆ. ನಗರಲ್ಲಿ ಪಾಸಿಟಿವಿಟಿ ರೇಟ್ ಜುಲೈನಲ್ಲಿ ಶೇ 24% ಇತ್ತು, ಈಗ ಅದು 15% ಆಗಿದೆ. ಜೀವ ಬಹುಮುಖ್ಯವಾದುದು, ಜೀವನ ಕೂಡ ಅತ್ಯಮೂಲ್ಯವಾಗಿದೆ. ಆದ್ದರಿಂದ, ಮಾರುಕಟ್ಟೆ ಓಪನ್ ಮಾಡಲು ಬಿಬಿಎಂಪಿ ಒಪ್ಪಿಗೆ ನೀಡಿದೆ.

   ಮಧ್ಯರಾತ್ರಿಯಿಂದ ಮಾರುಕಟ್ಟೆ ಓಪನ್

   ಮಧ್ಯರಾತ್ರಿಯಿಂದ ಮಾರುಕಟ್ಟೆ ಓಪನ್

   ಮಾರುಕಟ್ಟೆಯಲ್ಲಿ ಹೆಚ್ಚು ಜನ ಸೇರಿದರೆ ಸೋಂಕು ಹರಡಬಹುದೆಂದು ಬಂದ್ ಮಾಡಲಾಗಿತ್ತು. ಇಂದು ಮಧ್ಯರಾತ್ರಿಯಿಂದ ಮಾರುಕಟ್ಟೆ ಪುನಃ ಓಪನ್ ಆಗಲಿದೆ. ಬಿಬಿಎಂಪಿ ಅನೇಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು.

   15 ಜನ ಮಾರ್ಷಲ್ ನಿಯೋಜನೆ

   15 ಜನ ಮಾರ್ಷಲ್ ನಿಯೋಜನೆ

   ಮಾರುಕಟ್ಟೆಯಲ್ಲಿ 15 ಜನ ಮಾರ್ಷಲ್‌ಗಳನ್ನು ನೇಮಿಸಲಾಗಿದೆ. ನಿಯಮ ಉಲ್ಲಂಘಿಸದಂತೆ ಅವರು ನೋಡಿಕೊಳ್ಳಲಿದ್ದಾರೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುತ್ತಾರೆ. 3 ಕೋಟಿ ವೆಚ್ಚದಲ್ಲಿ ಕಟ್ಟಡಕ್ಕೆ ಅಗ್ನಿನಿರೋಧಕ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಅಗ್ನಿಶಾಮಕ ದಳ ಕಾರ್ಯ ನಿರ್ವಹಿಸಲಿದೆ.

   ರೈತರು ಪ್ರತಿಭಟನೆ ಮಾಡಿದ್ದರು

   ರೈತರು ಪ್ರತಿಭಟನೆ ಮಾಡಿದ್ದರು

   ಕಳೆದ ವಾರ ರೈತರು ಕೆ. ಆರ್. ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಮಾರುಕಟ್ಟೆಯನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದರು.

   English summary
   BBMP commissioner N.Manjunatha Prasad visited K. R. Market to inspect preparations to open markets from September 1, 2020. Masks are mandatory for all. Vendors & visitors will have to strictly follow social distancing.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X