Bengaluru's Major Shopping Places: ಬೆಂಗಳೂರಿನಲ್ಲಿರುವ ಪ್ರಮುಖ ಶಾಪಿಂಗ್ ಸ್ಥಗಳ ವಿವರ
Bengaluru's Major Shopping Streets: ಸಾಮಾನ್ಯವಾಗಿ ರಜೆ ಸಿಕ್ಕರೆ ಸಾಕು ಬೆಂಗಳೂರಿನ ಬಹುತೇಕ ಮಂದಿ ಶಾಪಿಂಗ್ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಇಂತಹ ವಿಚಾರಗಳಲ್ಲಿ ತುಸು ಮುಂದೆಯೇ ಇರುತ್ತಾರೆ. ಹಾಗಾದರೆ, ನಗರದಲ್ಲಿನ ರಸ್ತೆ ಬದಿ ಇರುವ ಪ್ರಮುಖ ಶಾಪಿಂಗ್ ಸ್ಥಳಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕಮರ್ಷಿಯಲ್ ಸ್ಟ್ರೀಟ್: ಅತ್ಯಂತ ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾದ ಕಮರ್ಷಿಯಲ್ ಸ್ಟ್ರೀಟ್ ಶಾಪಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ. ಇಲ್ಲಿನ ರಸ್ತೆ ಬದಿ ಸಿಗುವ ಉಡುಪುಗಳು, ಆಭರಣಗಳು, ಕ್ರೀಡಾ ಸಾಮಾಗ್ರಿಗಳು, ಪಾದರಕ್ಷೆಗಳಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಲು ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಲೇ ಇರುತ್ತಾರೆ.

ಜಯನಗರ 4th ಬ್ಲಾಕ್: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣದ ಎದುರು ಇದ್ದು, ಇದು ವ್ಯಾಪಾರಿಗಳಿಗೆ ಅತ್ಯುತ್ತಮ ಸ್ಥಳವಾಗಿದೆ. ಕಲಾಕೃತಿಗಳು, ಕುಂಬಾರಿಕೆ ಮತ್ತು ಶಿಲ್ಪಗಳು, ಆಟಿಕೆಗಳು, ಪಾದರಕ್ಷೆಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಬಹುದು. ಶಾಪಿಂಗ್ ಮಾಡಿದ ನಂತರ ರಿಫ್ರೆಶ್ ಆಗಲು ಯೋಗ್ಯವಾದ ಸ್ಟ್ರೀಟ್‌ಫುಡ್‌ಗಳು ಸಹ ಇಲ್ಲಿ ಸಿಗಲಿವೆ.
ಚಿಕ್ಕಪೇಟೆ: ನಗರದ ಚಿಕ್ಕಪೇಟೆಗೆ ಹೆಚ್ಚಿನ ಜನರು ಭೇಟಿ ನೀಡುತ್ತಲೇ ಇರುತ್ತಾರೆ. ಇದು ಕಡಿಮೆ ದರದಲ್ಲಿ ತಮ್ಮಿಷ್ಟದ ಬಟ್ಟೆಗಳನ್ನು ಕೊಂಡುಕೊಳ್ಳುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಉತ್ತಮ ರೇಷ್ಮೆ ಸೀರೆಗಳು ಸಹ ಇಲ್ಲಿ ಕಡಿಮೆ ದರಕ್ಕೆ ದೊರೆಯಲಿವೆ. ಆದ್ದರಿಂದ ಇಲ್ಲಿಗೆ ಬರೀ ಬೆಂಗಳೂರು ಅಲ್ಲದೆ, ಬೇರೆ ಬೇರೆ ಊರುಗಳಿಂದಲೂ ಬಂದು ಜನರು ಬಟ್ಟೆಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ.
ಬ್ರಿಗೇಡ್ ರಸ್ತೆ: ಕಡಿಮೆ ಬಜೆಟ್‌ನಲ್ಲಿ ಇಲ್ಲಿ ನಿಮ್ಮಿಷ್ಟದ ವಸ್ತುಗಳನ್ನು ಶಾಪಿಂಗ್ ಮಾಡಲಿ ಬ್ರಿಗೇಡ್ ರಸ್ತೆ ಸೂಕ್ತವಾಗಿದೆ. ಅಲ್ಲದೆ, ಇಲ್ಲಿ ಹಲವು ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಟ್ರೀಟ್ ಫುಡ್‌ಗಳನ್ನು ಸಹ ಕಾಣಬಹುದಾಗಿದೆ.
ಗಾಂಧಿ ಬಜಾರ್: ಬಸವನಗುಡಿ ಭಾಗದಲ್ಲಿ ಗಾಂಧಿ ಬಜಾರ್ ಮಾರುಕಟ್ಟೆ ಸಾಂಪ್ರದಾಯಿಕ ಧಾರ್ಮಿಕ ವಸ್ತುಗಳು, ಬಟ್ಟೆಗಳಿಗೆ ಹೆಸರುವಾಸಿ ಆಗಿದೆ. ಹಬ್ಬಗಳ ಸಮಯದಲ್ಲಿ ಗಾಂಧಿ ಬಜಾರ್ ಜನಜಂಗುಳಿಯಿಂದ ಕೂಡಿರುತ್ತದೆ. ಯಾಕೆಂದರೆ ಅಷ್ಟೊಂದು ಜನ ಇಲ್ಲಿಗೆ ಶಾಪಿಂಗ್ ಮಾಡಲು ಬಂದಿರುತ್ತಾರೆ.
ಮಲ್ಲೇಶ್ವರಂ: ಇನ್ನು ಬೆಂಗಳೂರಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಒಂದಾದ ಮಲ್ಲೇಶ್ವರಂ ಹೂವಿನ ಮಾರುಕಟ್ಟೆ, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ತರಕಾರಿಗಳಿಗೆ ಹೆಸರುವಾಸಿ ಆಗಿದೆ. ಅಲ್ಲದೆ, ಇದು ಹತ್ತಿರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದಾಗಿದೆ.












Click it and Unblock the Notifications