Bengaluru Aiport: CISF ಸಿಬ್ಬಂದಿಯಿಂದ ತಪ್ಪಿದ ದೊಡ್ಡ ಅಪರಾಧ: ಚಾಕು ಸಹಿತ ವ್ಯಕ್ತಿ ವಶಕ್ಕೆ: ವಿಡಿಯೋ ವೈರಲ್
Bengaluru Aiport Video Viral: ಬೆಂಗಳೂರಿನಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಇಲ್ಲದಂತಾಗುತ್ತಿದೆ. ದರೋಡೆ, ಕಳ್ಳತನ ಸೇರಿ ಇನ್ನಿತರ ಅಪರಾಧ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಲೆ ಇವೆ. ಇದೀಗ ಹೆಚ್ಚು ಭದ್ರತೆ ಇರುವ ಬೆಂಗಳೂರು ಏರ್‌ಪೋರ್ಟ್‌ನಲ್ಲೇ ಚಾಕು ಹಿಡಿದಿದ್ದ ವ್ಯಕ್ತಿಯನ್ನು ಪೊಲೀಸರು ಅಟ್ಟಾಡಿಸಿ ಹಿಡಿದಿದ್ದಾರೆ. ಕೇಂದ್ರ ಕೈಗಾರಿಕೆ ಭದ್ರಾತಾ ಪಡೆ (Central Industrial Security Force-CISF) ಅವರ ಸಮಯ ಪ್ರಜ್ಞೆಯಿಂದ ಭಾರೀ ಅಪರಾಧವೊಂದು ಆರಂಭದಲ್ಲೇ ಹತ್ತಿಕ್ಕಲು ಸಾಧ್ಯವಾಗಿದೆ.
ಬೆಂಗಳೂರಿನ ಶಾಂತಿನಗರದಲ್ಲಿ ಇತ್ತೀಚೆಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ದರೋಡೆ ಮಾಡಿದ್ದ ಘಟನೆ ನಡೆದಿತ್ತು. ಅದರ ಬೆನ್ನಲ್ಲೆ ವ್ಯಕ್ತಿಯೊಬ್ಬ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಆವರಣದಲ್ಲಿ ಕ್ಯಾಬ್ ಚಾಲಕ ಮೇಲೆ ಚಾಕು ಸಮೇತ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಚಾಕು ಹಿಡಿದು ಓಡಾಡಿ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿ ಕಾಣಿಸುತ್ತವೆ. ಇದನ್ನು ನೋಡಿದ ಜನರು ಏರ್‌ಪೋರ್ಟ್ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನವೆಂಬರ್ 16 ರಂದು ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 1ರಲ್ಲಿ ಈ ಘಟನೆ ನಡೆದಿದೆ. ಅಂದು ಮಧ್ಯರಾತ್ರಿಯ ಸುಮಾರಿಗೆ, ಟರ್ಮಿನಲ್ ಒಂದರ ಪ್ರವೇಶ ಧ್ವಾರದಲ್ಲಿ ಟ್ಯಾಕ್ಸಿ ಚಾಲಕರ ಮೇಲೆ ಉದ್ದನೆಯ ಚಾಕು ಹಿಡಿದ ವ್ಯಕ್ತಿಯೊಬ್ಬ ದಾಳಿ ಮಾಡಿದರು. ಎಎಸ್‌ಐ ಸುನಿಲ್ ಕುಮಾರ್ ಮತ್ತು ತಂಡವು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಆತನ ಕೈಯಲ್ಲಿದ್ದ ಚಾಕುವನ್ನು ವಶಪಡಿಸಿಕೊಂಡು ಕೆಐಎ ಪೊಲೀಸರಿಗೆ ಒಪ್ಪಿಸಿದರು. ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸಿಐಎಸ್‌ಎಫ್ ಸಿಬ್ಬಂದಿ ತಿಳಿಸಿದ್ದಾರೆ.
ಸಿಐಎಸ್‌ಎಫ್ ವಶಕ್ಕೆ ಪಡೆಯುವ ಮುನ್ನ ಟರ್ಮಿನಲ್ 1ರಲ್ಲಿ ಕ್ಯಾಬ್ ಚಾಲನ ಮೇಲಿನ ದಾಳಿ ಬಳಿಕ ಓಡಾಡಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ರಕ್ಷಣಾ ಸಿಬ್ಬಂದಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತನಿಖೆಯನ್ನು ಬೆಂಗಳೂರು ಏರ್‌ಪೋರ್ಟ್ ಪೊಲೀಸರು ಕೈಗೊಂಡಿದ್ದಾರೆ.
Bengaluru: Timely intervention by CISF averted a major crime at Bengaluru airport on Nov 16. Around midnight, a man with a long knife charged at taxi drivers at T1 arrivals. ASI Sunil Kumar & team swiftly overpowered him, recovered the weapon & handed him to KIA Police. No… pic.twitter.com/0GGt7Eyag7
— ChristinMathewPhilip (@ChristinMP_) November 17, 2025
ವಿಡಿಯೋ ನೋಡಿದ ನೆಟ್ಟಿಗರು ಭದ್ರತಾ ಸಿಬ್ಬಂದಿ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಗ್ರಿಗ್ರೇಟರ್ ಆಪ್ ಮೂಲಕ ಕ್ಯಾಬ್ ಚಾಲಕರು ಇಂತಹ ಕಾರಣದಿಂದ ಯಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದಿಲ್ಲ. ಇಂತಹ ಘಟನೆಗಳೂ ನಡೆಯುತ್ತಿದ್ದು, ಇದು ಬೆಂಗಳೂರಿನ ಪರಿಸ್ಥಿತಿ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications