ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಸ್‌ ಆಸ್ಪತ್ರೆ:ಸಿಗದ ಭರವಸೆ,ಮುಗಿಯದ ಪ್ರತಿಭಟನೆ,ರೋಗಿಗಳ ಗೋಳು

By Nayana
|
Google Oneindia Kannada News

Recommended Video

ಕಿಮ್ಸ್ ಆಸ್ಪತ್ರೆಯಲ್ಲಿ ನಿಲ್ಲದ ವೈದ್ಯರ ಪ್ರತಿಭಟನೆ | ರೋಗಿಗಳ ಗೋಳು ಹೇಳತೀರದು | Oneindia Kannada

ಬೆಂಗಳೂರು, ಜು.19: ಕಿಮ್ಸ್‌ ಆಸ್ಪತ್ರೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಗುರುವಾರವೂ ವೈದ್ಯರ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು ತೀವ್ರ ಸ್ವರೂಪ ಪಡೆದುಕೊಂಡಿದೆ.

ಪ್ರತಿಭಟನಾ ಸ್ಥಳದಲ್ಲೇ ಹೊರ ರೋಗಿಗಳ ತಪಾಸಣೆ ನಡೆಸುವ ಮೂಲಕ ವೈದ್ಯರು ಮುಷ್ಕರ ಮುಂದುವರೆಸಿದ್ದಾರೆ. ಮುಷ್ಕರಿಂದ ರೋಗಿಗಳಿಗೆ ತೊಂದರೆ ಆಗದಂತೆ ಆಸ್ಪತ್ರೆ ಹೊರಗಡೆ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಡಳಿತ ಮಂಡಳಿ ತಮ್ಮ ಬೇಡಿಕೆ ಇಡೇರಿಸುವ ವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು: ಕಿಮ್ಸ್‌ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಸ್ಥಗಿತ ಬೆಂಗಳೂರು: ಕಿಮ್ಸ್‌ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಸ್ಥಗಿತ

ಸಾರ್ವಜನಿಕರ ಆಕ್ರೋಶ : ಕಳೆದ ಮೂರು ದಿನಗಳಿಂದ ವೈದ್ಯರು ಮುಷ್ಕರ ನಡೆಸುತ್ತಿರುವುದರಿಂದ ರೋಗಿಗಳು ದಿನಗಟ್ಟಲೆ ಚಿಕಿತ್ಸೆಗಾಗಿ ಪರದಾಡುವಂತಾಗಿದೆ, ಕಿಮ್ಸ್‌ ಆಸ್ಪತ್ರೆಗೆ ದಿನಕ್ಕೆ ಸಾವಿರಾರು ಮಂದಿ ರೋಗಿಗಳ ಆಗಮಿಸುತ್ತಾರೆ ಆದರೆ ಒಪಿಡಿ ಬಂದ್‌ ಮಾಡಿರುವುದರಿಂದ ರೋಗಿಗಳಿಗೆ ತೊಂದರೆಯುಂಟಾಗುತ್ತಿದೆ.

Kims employees protest continues

ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು, ಎಲ್ಲಕ್ಕಿಂತ ,ಮುಖ್ಯವಾಗಿ ವೈದ್ಯರು ರೋಗಿಗಳ ಬಗ್ಗೆ ನಿರ್ಲಕ್ಷ್ಯ, ಅಸಡ್ಡೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಜಾಗದಲ್ಲಿಯೇ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದು ತಮ್ಮ ಉದಾರತೆ ಎಂಬ ಧಾಟಿಯಲ್ಲಿ ವೈದ್ಯರು ಮಾತನಾಡುತ್ತಿದ್ದಾರೆ ಆದರೆ ಬಿಸಿಲಿನಲ್ಲಿ ಕಾದು ನಿಂತರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

English summary
Employees of kims continuing there protest from 5 days. Now they are planning to set up direct fight with management through no confidence against directors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X