ಯಡಿಯೂರಪ್ಪ, ನಿರಾಣಿ ಕೊರಳಿಗೆ ಉರುಳಾದ ಡಿನೋಟಿಫಿಕೇಷನ್ ಕೇಸ್

ಬೆಂಗಳೂರು, ಸೆ. 30: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳ ಎಂಬುವರು ಸೋಮವಾರ(ಸೆ.30)ದಂದು ದೂರು ನೀಡಿದ್ದಾರೆ.

"2009ರಲ್ಲಿ ಬೆಂಗಳೂರಿನ ಹೊರ ವಲಯದ ಆನೇಕಲ್ ನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಸೇರಿದ 9.20 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪವನ್ನು ಅಂದಿನ ಕೈಗಾರಿಕಾ ಸಚಿವ ನಿರಾಣಿ, ಯಡಿಯೂರಪ್ಪ ಮೇಲೆ ಹೊರೆಸಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ" ಎಂದು ದಿನೇಶ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಶ್ರೀರಾಂಪುರ, ಆರ್ ಎಂ ವಿ ಬಡಾವಣೆ ಹಾಗೂ ಕೆಂಪಾಪುರದಲ್ಲಿ ಕ್ರಮವಾಗಿ 11 ಎಕರೆ 25 ಗುಂಟೆ, ನಾಗರಬಾವಿಯಲ್ಲಿ 5 ಎಕರೆ 13 ಗುಂಟೆ ಜಾಗವನ್ನು ಯಡಿಯೂರಪ್ಪ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಎಸ್ವೈ ವಿರುದ್ಧ ಪ್ರಕರಣಗಳು ದಾಖಲಾಗಿತ್ತು. ಬೆಂಗಳೂರಿನ ದೇವನಹಳ್ಳಿಯಲ್ಲಿ ಕೆಐಎಡಿಬಿ ಮೂಲಕ ನಕಲಿ ದಾಖಲೆ ಸೃಷ್ಟಿಸಿ 26 ಎಕರೆ ಭೂಮಿಯನ್ನು ತಮ್ಮ ಕಂಪನಿಗೆ ನಿರಾಣಿ ಪಡೆದಿದ್ದಾರೆ. ಇದಕ್ಕೂ ಮೊದಲು 26 ಎಕರೆ ಭೂಮಿಯನ್ನು ಹಾರ್ಡ್‌ವೇರ್ ಪಾರ್ಕ್‌ಗಾಗಿ ಮೀಸಲಿಡಲಾಗಿತ್ತು ಎಂಬ ಕೂಡಾ ಈ ಹಿಂದೆ ದೂರುಗಳು ಕೇಳಿ ಬಂದಿದ್ದವು.

KIADB denotification: Complaint filed against CM Yediyurappa and Murugesh nirani

ಎಚ್ ಆರ್ ನಿರಾಣಿ, ಶರಣ ಬಸಯ್ಯ, ಕರಿಯಣ್ನನವರ್, ಬೇಗೂರು ರುದ್ರಮೂರ್ತಿ,ಪೂರ್ಣಚಂದ್ರ, ಆರ್ ವಿ ವಡ್ನಾಳ್, ಶಾಂತ ಸುಬೀರ ಬೇಲೂರು, ಮೋಹನ್ ಎಂ, ಹೀರೇಮಠ ಮತ್ತು ಎಂ ರೋಷಯ್ಯ ಎಂಬುವರ ಮೇಲೆ ಆರೋಪವನ್ನು ಹೊರೆಸಲಾಗಿತ್ತು. ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿ ಮೂಲಕ ರಾಜ್ಯದ ವಿವಿಧ ಪ್ರದೇಶದಲ್ಲಿ ವಶಪಡಿಸಿಕೊಂಡಿದ್ದ 1, 690ಕ್ಕೂ ಹೆಚ್ಚು ಎಕರೆ ಭೂಮಿಯನ್ನು ತಮ್ಮ ಕುಟಂಬ ಸದಸ್ಯರ ಮತ್ತು ಆಪ್ತರ ಒಡೆತನದ ಕಂಪೆನಿಗಳಿಗೆ ನಿಯಮ ಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ನಿರಾಣಿ ಅವರ ಮೇಲೆ ಆರೋಪವಿತ್ತು.

ಆದರೆ ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಅಂದಿನ ಬೃಹತ್ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಅವರಿಗೆ ಲೋಕಾಯುಕ್ತ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಅವರು ನಿರಾಣಿ ಮೇಲಿದ್ದ ಪ್ರಕರಣಗಳನ್ನು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+