ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KIA: ನ.11ರಂದು ಟರ್ಮಿನಲ್ 2 ಉದ್ಘಾಟಿಸಲಿರುವ ಪ್ರಧಾನಿ ಮೋದಿ

|
Google Oneindia Kannada News

ಬೆಂಗಳೂರು, ನವೆಂಬರ್ 09: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಟರ್ಮಿನಲ್-2 ಅತ್ಯಾಕರ್ಷವಾಗಿ, ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಈ ಉದ್ಘಾಟನೆಯ ಬಳಿಕ ಟರ್ಮಿನಲ್‌ 2 ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಮತ್ತು ಚೆಕ್ ಇನ್ ಕೌಂಟರ್‌ಗಳ ಸಂಖ್ಯೆ ಹೆಚ್ಚಾಗಲಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋವಿಡ್ ನಂತರ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಅಸಂಖ್ಯಾತ ಪ್ರಯಾಣಿಕರ ಈ ಟರ್ಮಿನಲ್‌ ಜನರಿಗೆ ನೆರವು ಒದಗಿಸಲಿದೆ. ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಾರ್ಷಿಕವಾಗಿ 2.5 ಕೋಟಿ ಸಾಮರ್ಥ್ಯದಿಂದ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಶಕ್ತಿ ಈ ಟರ್ಮಿನಲ್‌ 2ಗೆ ಇದೆ.

ಟರ್ಮಿನಲ್ 2 ಅನ್ನು ಉದ್ಯಾನ ನಗರಿ ಬೆಂಗಳೂರಿನ ಪ್ರತೀಕ, ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರು 10,000 ಚದರ ಮೀಟರ್‌ಗಳಷ್ಟು ಹಸಿರು ಗಾರ್ಡನ್‌, ಸುಂದರ ಒಳಾಂಗಣ, ಸುವ್ಯವಸ್ಥಿತ ಉದ್ಯಾನ, ಗಿಡ ಮರಗಳನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ದೇಶಿಯ ತಂತ್ರಜ್ಞಾನ ಬಳಸಿ ಟರ್ಮಿನಲ್ 2 ನಿರ್ಮಿಸಲಾಗಿದೆ.

KIA Terminal 2 inauguration on Nov.11 by PM Narendra Modi

ಎರಡು ಹಂತದಲ್ಲಿ ಟರ್ಮಿನಲ್ ನಿರ್ಮಾಣ

ಒಟ್ಟು ಸುಮಾರು 2.5 ಲಕ್ಷ ಚದರ ಮೀಟರ್‌ಗಳಲ್ಲಿ ಟರ್ಮಿನಲ್‌ 2 ಸ್ಥಾಪಿಸಲಾಗುತ್ತಿದೆ. ಅದರಲ್ಲಿ ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಸಾರ್ವಜನಿಕ ಬಳಕೆಗೆ ನವೆಂಬರ್ 11ರ ನಂತರ ತೆರೆದುಕೊಳ್ಳಲಿದೆ. ಆದರೆ ಎರಡನೇ ಹಂತದಲ್ಲಿ ಟರ್ಮಿನಲ್‌ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಈ ಎರಡನೇ ಹಂತದ ಟರ್ಮಿನಲ್ 4.41 ಲಕ್ಷ ಚದರ ಮೀಟರ್‌ ನಲ್ಲಿ ವಿಸ್ತರಿಸಿದೆ. ಆಕರ್ಷಕವಾಗಿ, ವಿನೂತನವಾಗಿ ಕಾಣುವಂತೆ ಮಾಡಲು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ ಹಾಗೂ ಮೆರಿಲ್ ಸಂಸ್ಥೆಗಳ ಕಾರ್ಮಿಕರು ಶ್ರಮಿಸಿದ್ದಾರೆ ಎಂದು ಹೇಳಲಾಗಿದೆ.

KIA Terminal 2 inauguration on Nov.11 by PM Narendra Modi

ಈ ಹಿಂದೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟಿದ್ದರು. ಸುಂದರವಾದ ಟರ್ಮಿನಲ್‌ 2 ಅನ್ನು ಜನರ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು.

English summary
Bengaluru Kempegowda International Airport (KIA) Terminal 2 inauguration on Nov.11 by PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X