ಏರೋ ಶೋ ಬಂದೇ ಬಿಡ್ತು, ಏರ್‌ಪೋರ್ಟ್ ರಸ್ತೆಯೂ ದುರಸ್ತಿ ಕಂಡ್ತು

ಬೆಂಗಳೂರು, ಜನವರಿ 11:ಏರೋ ಇಂಡಿಯಾ ಶೋ ಕೆಲವೇ ದಿನಗಳು ಬಾಕಿ ಇರುವಾಗ ಅಂತೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ದುರಸ್ತಿ ಕಂಡಿದೆ.

ಹೆಬ್ಬಾಳವನ್ನು ಸಂಪರ್ಕಿಸುವ ರಸ್ತೆಯು ಗುಂಡಿಗಳಿಂದ ತುಂಬಿ ಹೋಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ರಸ್ತೆಯನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆದರೆ ಇರುವ ಅಪವಾದವೇನೆಂದರೆ ಪ್ರತಿ ವರ್ಷವೂ ಏರೋ ಇಂಡಿಯಾ ಶೋ ಆರಂಭವಾಗುವ ಕೆಲವೇ ದಿನಗಳ ಹಿಂದೆ ರಸ್ತೆಯನ್ನು ಸರಿಪಡಿಸಲಾಗುತ್ತಿದೆ. ಏರೋ ಶೋಗೆ ಬರುವ ವಿಐಪಿಯನ್ನು ಮೆಚ್ಚಿಸಲು ಕೆಲಸ ಮಾಡಲಾಗುತ್ತದೆ ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದಲ್ಲ .

ಸಾರ್ವಜನಿಕರಿಗೆ ಅನುಮತಿ ಇಲ್ಲ

ಸಾರ್ವಜನಿಕರಿಗೆ ಅನುಮತಿ ಇಲ್ಲ

ಸಾಮಾನ್ಯವಾಗಿ ಏರೋ ಶೋ ಸಂದರ್ಭದಲ್ಲಿ ಟ್ರಾಫಿಕ್ ಹೆಚ್ಚಾಗುತ್ತದೆ. ಆದರೆ ಈ ಬಾರಿ ಸಾರ್ವಜನಿಕರಿಗೆ ಶೋಗೆ ಅನುಮತಿ ಇಲ್ಲ.
ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ ಇಡೀ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದೆ. ಏರ್ ಶೋ ನೋಡಲು ಭಾರತ ಮಾತ್ರವಲ್ಲದೇ ವಿದೇಶದಿಂದ ಕೂಡ ಜನರು ಬರುತ್ತಾರೆ.
ಆದರೆ ಈ ಬಾರಿ ಏರ್ ಶೋ ವೀಕ್ಷಿಸಲು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದು, ಕೇವಲ ಬ್ಯುಸಿನೆಸ್ ವಿಸಿಟರ್ಸ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಭಾರೀ ನಿರಾಸೆ ಉಂಟಾಗಿದೆ.

ಕೆಆರ್‌ಪುರಂ-ಕೋಲಾರ ರಸ್ತೆ ಸರಿಪಡಿಸಲು ಮನವಿ

ಕೆಆರ್‌ಪುರಂ-ಕೋಲಾರ ರಸ್ತೆ ಸರಿಪಡಿಸಲು ಮನವಿ

ಏರ್‌ಪೋರ್ಟ್ ರಸ್ತೆಯನ್ನು ಸರಿಪಡಿಸಲಾಗುತ್ತಿದೆ, ಹಾಗೆಯೇ ಕೆಆರ್ ಪುರಂನಿಂದ ಕೋಲಾರಕ್ಕೆ ಹೋಗುವ ರಸ್ತೆಯನ್ನೂ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ಈ ರಸ್ತೆಯಲ್ಲೂ ಕೂಡ ಹಲವು ವಿವಿಐಪಿಗಳು ಓಡಾಡುತ್ತಾರೆ ಎಂದು ಹೇಳಿದ್ದಾರೆ.

ಫೆಬ್ರವರಿ 3 ರಿಂದ 5ರವರೆಗೆ ಏರೋ ಇಂಡಿಯಾ ಶೋ

ಫೆಬ್ರವರಿ 3 ರಿಂದ 5ರವರೆಗೆ ಏರೋ ಇಂಡಿಯಾ ಶೋ

ಕೊರೊನಾ ಸೋಂಕಿನ ಭೀತಿಯ ನಡುವೆಯೂ ಏರೋ ಇಂಡಿಯಾ 2021 ರ ಕಾರ್ಯಕ್ರಮ ಫೆಬ್ರವರಿ 3 ರಿಂದ 5 ರವರೆಗೆ ನಿಗದಿ ಯಾಗಿದೆ. ಪ್ರತಿ ವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್ ಇಂಡಿಯಾ ಶೋವನ್ನು ಕೊರೊನಾ ಕಾರಣಕ್ಕೆ ಮೂರು ದಿನಕ್ಕೆ ಇಳಿಕೆ ಮಾಡಲಾಗಿದೆ.

Recommended Video

    Drug case ಅಲ್ಲಿ Adithya Alva ಅಂದರ್ !! | Oneindia Kannada
    ಲೋಹದ ಹಕ್ಕಿಗಳ ಹಾರಾಟಕ್ಕೂ ಕೊರೊನಾ ಭೀತಿ

    ಲೋಹದ ಹಕ್ಕಿಗಳ ಹಾರಾಟಕ್ಕೂ ಕೊರೊನಾ ಭೀತಿ

    ಇಂತಹ ಲೋಹದ ಹಕ್ಕಿಗಳ ಹಾರಾಟಕ್ಕೂ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಲೋಹದ ಹಕ್ಕಿಗಳ ಹಾರಾಟ ಕಣ್ ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+