ಬಿಬಿಎಂಪಿ ವಿಭಜನೆ ಸುಗ್ರೀವಾಜ್ಞೆಯಲ್ಲೇನಿದೆ?

ಬೆಂಗಳೂರು, ಏ. 20 : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಸರ್ಕಾರ ಬಿಬಿಎಂಪಿ ವಿಭಜನೆ ಸುಗ್ರವಾಜ್ಞೆಯನ್ನು ಸದನದಲ್ಲಿ ಮಂಡಿಸಿದೆ. ಆಡಳಿತದ ದೃಷ್ಟಿಯಿಂದ ಪಾಲಿಕೆ ವಿಭಜನೆ ಅನಿವಾರ್ಯ ಎಂದು ಸರ್ಕಾರ ಪಟ್ಟು ಹಿಡಿದೆ. ಆದರೆ, ಪ್ರತಿಪಕ್ಷಗಳು ಮಾತ್ರ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿವೆ.

ಸೋಮವಾರ ಸದನದಲ್ಲಿ ವಿಧೇಯವಕನ್ನು ಮಂಡನೆ ಮಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಉತ್ತಮ ಆಡಳಿತಕ್ಕಾಗಿ 198 ವಾರ್ಡ್‌ನ ಬಿಬಿಎಂಪಿಯನ್ನು ವಿಭಜನೆ ಮಾಡುವುದು ಅನಿವಾರ್ಯ. ಸರ್ಕಾರ ರಚನೆ ಮಾಡಿದ್ದ ವಿ.ಎಸ್.ಪಾಟೀಲ್ ನೇತೃತ್ವದ ಸಮಿತಿಯೂ ವಿಭಜನೆ ಮಾಡುವುದು ಉತ್ತಮ ಎಂದು ವರದಿ ನೀಡಿದೆ ಎಂದರು. [ಬಿಬಿಎಂಪಿ ವಿಭಜನೆ : ವಿಶೇಷ ಅಧಿವೇಶನದ ಮುಖ್ಯಾಂಶಗಳು]

BBMP

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198 ಸದಸ್ಯರು ಇರುವುದರಿಂದ ಮಿನಿ ಸದಸದಂತೆ ಆಗಿದೆ. ಆದ್ದರಿಂದ ಪಾಲಿಕೆ ವಿಭಜನೆ ಮಾಡುತ್ತಿದ್ದೇವೆ. ವಿಭಜನೆ ನಿರ್ಧಾರ ನಮ್ಮ ಚಿಂತನೆಯಲ್ಲ ಹಿಂದಿನ ಬಿಜೆಪಿ ಸರ್ಕಾರವೂ ಪಾಲಕೆ ವಿಭಜನೆ ಮಾಡುವ ಕುರಿತು ಚಿಂತನೆ ನಡೆಸಿತ್ತು ಎಂದು ಸದನಕ್ಕೆ ವಿವರಣೆ ನೀಡಿದರು.[ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ತಡೆ]

ಐದು ವರ್ಷಗಳ ಪಾಲಿಕೆ ಅವ್ಯವಹಾರದಲ್ಲಿ ಸಾಕಷ್ಟು ಅವ್ಯವಹಾರಗಳಾಗಿವೆ. ತೆರಿಗೆ ಸಂಗ್ರಹದ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಪಾಲಿಕೆಯನ್ನು ವಿಭಜನೆ ಮಾಡಿದರೆ ಉತ್ತಮವಾಗಿ ಆಡಳಿತ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸುಗ್ರೀವಾಜ್ಞೆಯ ಪ್ರಮುಖ ಅಂಶಗಳು

* ಬಿಬಿಎಂಪಿ ಹೆಸರನ್ನು ಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ಎಂದು ನಾಮಕರಣ
* ಸದ್ಯ ಪಾಲಿಕೆಯಲ್ಲಿರುವ 12 ಸ್ಥಾಯಿ ಸಮಿತಿಗಳ ಕಡಿತ
* ವಿಭಜಿತ ಪಾಲಿಕೆಗಳಲ್ಲಿ ಕೇವಲ 4 ಸ್ಥಾಯಿ ಸಮಿತಿಗಳು
* ಶೇ 10 ರಷ್ಟು ನಾಮನಿರ್ದೇಶಿತರ ಸದಸ್ಯರ ಸಂಖ್ಯೆ ಕಡಿತ
* ವಿಭಜನೆಯಾದರೆ 7 ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ
* ರಾಜ್ಯಪಾಲರ ಒಪ್ಪಿಗೆ ಸಿಕ್ಕರೆ ಅಧಿಸೂಚನೆ
* ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+