ಬೆಂಗಳೂರಿನಲ್ಲಿ ಕೇರಳದ ಯುವತಿ ಮೇಲೆ ಅತ್ಯಾಚಾರ, ಆರೋಪಿಗಳ ಬಂಧನ
ಬೆಂಗಳೂರು, ನ. 29: ಕೇರಳ ಮೂಲದ 22 ವರ್ಷದ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೊಬೈಲ್ ಆಪ್ ಆಧಾರಿತ ರ‍್ಯಾಪಿಡೋ ಬೈಕ್ ಚಾಲಕ ಮತ್ತು ಆತನ ಸಹಚರರನ್ನು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ರ‍್ಯಾಪಿಡೋ ಬೈಕ್ ಚಾಲಕ 26 ವರ್ಷದ ಶಹಾಬುದ್ದೀನ್ ಮತ್ತು ಆತನ ಸಹಚರ 24 ವರ್ಷದ ಅಖ್ತರ್ ಎಂಬುವರನ್ನು ಬಂಧಿಸಲಾಗಿದ್ದು, ಘಟನೆಗೆ ಸಹಕರಿಸಿದ್ದ, ವಿಷಯ ಮುಚ್ಚಿಟ್ಟ ಅವರ ಸ್ನೇಹಿತೆಯನ್ನು ಬಂಧಿಸಲಾಗಿದೆ.
ಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮತಾಂತರಕ್ಕೆ ಒತ್ತಡ ಆರೋಪ: ವ್ಯಕ್ತಿ ಬಂಧನ
ಬಿಟಿಎಂ ಲೇಔಟ್‌ನಲ್ಲಿ ತನ್ನ ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಇರುವ ನೀಲಾದ್ರಿ ನಗರಕ್ಕೆ ಸಂತ್ರಸ್ತ ಯುವತಿ ರ‍್ಯಾಪಿಡೋ ಬುಕ್ ಮಾಡಿದ್ದರು. ಈ ವೇಳೆ ಆಕೆ ಪಾನಮತ್ತಳಾಗಿರುವುದನ್ನು ಗಮನಿಸಿದ ಚಾಲಕ, ಆಕೆಯನ್ನು ಮನೆಗೆ ಬಿಡದೇ ತನ್ನ ರೂಮ್‌ಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ ಆತ ತನ್ನ ಸ್ನೇಹಿತನನ್ನು ಕರೆದುಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ನಡೆದಾಗ ರೂಮ್‌ನಲ್ಲಿ ಮತ್ತೊಬ್ಬ ಯುವತಿ ಇದ್ದರು. ಆದರೆ, ಆಕೆ ಕೃತ್ಯವನ್ನು ನೊಡುತ್ತಾ ಸುಮ್ಮನಿದ್ದರು ಎನ್ನಲಾಗಿದೆ. ಮರುದಿನ ಬೆಳಗ್ಗೆ ಸಂತ್ರಸ್ತ ಯುವತಿಗೆ ಪ್ರಜ್ಞೆ ಬಂದಾಗ, ಆಕೆಯ ಮೇಲಾಗಿರುವ ಅತ್ಯಾಚಾರ ಮತ್ತು ವಿಪರೀತ ನೋವಿನಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಹತ್ತಿರದ ಸೇಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಎಲೆಕ್ಟ್ರಾನಿಕ್ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಯುವತಿಯ ದೂರಿನ ಆಧಾರದ ಇಬ್ಬರು ಯುವಕರು ಮತ್ತು ಒಬ್ಬ ಯುವತಿಯನ್ನು ಬಂಧಿಸಲಾಗಿದೆ.