ಕೆಂಪೇಗೌಡ ಲೇಔಟ್ ಸೈಟ್ ಹಂಚಿಕೆದಾರರಿಂದ ಮೆಟ್ರೋ ಸಂಪರ್ಕಕ್ಕೆ ಮನವಿ
ಬೆಂಗಳೂರು, ಜನವರಿ 7: ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನವನ್ನು ಪಡೆದವರು ನಮ್ಮ ಮೆಟ್ರೋ ಸಂಪರ್ಕಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯ ಚಲ್ಲಘಟ್ಟದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಡಿಪೋವನ್ನು ನಿಲ್ದಾಣವನ್ನಾಗಿ ಪತಿವರ್ತಿಸುವಂತೆ ನಿವೇಶನದ ಹಂಚಿಕೆ ಪಡೆದಿರುವ ನಾಗರಿಕರು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ , ನಗರಾಭಿವೃದ್ಧಿ ಇಲಾಖೆ ಹಾಗೂ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಿದ್ದಾರೆ.
ನಗರದ ಪಶ್ಚಿಮ ಭಾಗದ ನೈಸ್ ರೋಡ್ ಆಚೆ ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ಉದ್ದಕ್ಕೂ ಬಡಾವಣೆ ನಿರ್ಮಾಣವಾಗಬೇಕು. ಭವಿಷ್ಯದಲ್ಲಿ ಈ ಪ್ರದೇಶ ಸಾಕಷ್ಟು ಬೆಳವಣಿಗೆ ಕಾಣಲಿದೆ.

ಹೀಗಾಗಿ ಈಗಲೇ ಮೆಟ್ರೋ ಸೌಲಭ್ಯಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಲೇಔಟ್ ಮೂಡಿಬರಲಿರುವ ಕಾರಣ ಸಮೂಹ ಸಾರಿಗೆ ಭಾಗವಾಗಿ ಮೆಟ್ರೋ ಸೌಲಭ್ಯಕ್ಕೆ ಆಧ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು, ಟ್ವಿಟ್ಟರ್,ಫೇಸ್‌ಬುಕ್ ಮೂಲಕ ಜನಾಭಿಪ್ರಾಯ ಮೂಡಿಸು ಪ್ರಯತ್ನವೂ ಚಾಲ್ತಿಯಲ್ಲಿದೆ.
ಕೆಂಪೇಗೌಡ ಬಡಾವಣೆಯ ಮೈಸೂರು ರಸ್ತೆ ಸಮೀಪ ಚಲ್ಲಘಟ್ಟದಲ್ಲಿ ಮೆಟ್ರೋ ಡಿಪೋ ನಿರ್ಮಿಸಲು ಭೂಮಿ ಮಂಜೂರಾಗಿದೆ. ಎರಡನೇ ಹಂತದಲ್ಲಿ ಕೆಂಗೇರಿ ನಿಲ್ದಾಣದಿಂದ ನೇರವಾಗಿ ರೈಲುಗಳು ಚೆಲ್ಲಘಟ್ಟ ಡಿಪೋಗೆ ಬರಲಿವೆ. ರೈಲು ದುರಸ್ತಿ, ನಿರ್ವಹಣೆಗಾಗಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಡಾವಣೆಗೆ ಸುರಂಗ ಮಾರ್ಗದ ಮೂಲಕ ಒಂದಿಷ್ಟು ಹಣ ನೀಡಲಿದೆ.












Click it and Unblock the Notifications