Kempegowda airport: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟೀನ್-ಯಾವಾಗಿನಿಂದ? ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 24: ಕಾಂಗ್ರೆಸ್ ಸರ್ಕಾರವು ಬಡವರ ಹಸಿವು ನೀಗಿಸಲೆಂದೇ ರಾಜ್ಯ ರಾಜಧಾನಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದಿದಿದೆ. ಹಾಗೆಯೇ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲು ಮುಂದಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಟೀ, ಕಾಫಿ ಕುಡಿಯಬೇಕೆಂದರೆ 200 ರೂಪಾಯಿಯಿಂದ 500 ರೂಪಾಯಿ ಬಿಚ್ಚಬೇಕಾಗುತ್ತದೆ. ಇನ್ನು ಒಂದು ತಿಂಡಿ ತಿನ್ನಬೇಕೆಂದರೆ 1,000 ರೂಪಾಯಿವರೆಗೂ ಕೊಡಬೇಕು ಅಂತಾ ತೆತ್ತಬೇಕಿದ್ದ ಪ್ರಯಾಣಿಕರಿಗೆ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ.

ವಿಮಾನ ನಿಲ್ದಾಣದಲ್ಲಿ ಕೇವಲ 5 ರೂಪಾಯಿ ತಿಂಡಿ ಮತ್ತು 10 ರೂಪಾಯಿಗೆ ಊಟವನ್ನು ನೀಡುವ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ಸಚಿವ ಸಂಪುಟದ ಸಭೆಯನ್ನು ನಿರ್ಣಯ ಕೈಗೊಂಡಿದೆ. ಈಗಾಗಲೇ ನಗರದಲ್ಲಿ 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ರಾಜ್ಯಾದ್ಯಂತ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೇವಲ 5 ರೂಪಾಯಿಗೆ ತಿಂಡಿ ಮತ್ತು10 ರೂಪಾಯಿಗೆ ಊಟವನ್ನು ನೀಡಲಾಗುತ್ತಿದೆ.
ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದಿರಾ ಕ್ಯಾಂಟೀನ್‌ನ ಊಟ ಮತ್ತು ತಿಂಡಿಯ ಮೆನುವನ್ನು ಬದಲಾವಣೆ ಮಾಡಿದ್ದಾರೆ. ಈಗ ರಾಗಿ ಮುದ್ದೆ, ಮಂಗಳೂರು ಬನ್ಸ್ ಸೇರಿ ವಿವಿಧ ಊಟವನ್ನು ಕೊಡಲಾಗುತ್ತಿದೆ. ಅಲ್ಲದೆ ಇಂದಿರಾ ಕ್ಯಾಂಟೀನ್ ಊಟವನ್ನು ದುಬಾರಿ ಆಹಾರ ಮಾರಾಟ ಮಾಡುವ ಸ್ಥಳಗಳಲ್ಲಿಯೂ ಆರಂಭಿಸಬೇಕು ಎನ್ನುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿದುಬಂದಿದೆ.
ಜನಸಾಮಾನ್ಯರು, ಮಧ್ಯಮ ವರ್ಗದವರು, ಉದ್ಯಮಿಗಳು ಸೇರಿದಂತೆ ರಾಜ್ಯ, ಹೊರ ರಾಜ್ಯ, ವಿದೇಶಗಳಿಂದ ಬಂದು ಹೋಗುವ ತಾಣವಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ನಿರ್ಧಾರ ಮಾಡಿದೆ. ಇದು ಪ್ರಮುಖವಾಗಿ ಇಲ್ಲಿನ ಸಾಮಾನ್ಯ ವರ್ಗದವರಿಗೆ, ಕಾರ್ಮಿಕರಿಗೆ ತುಂಬಾ ಉಪಯುಕ್ತ ಆಗಲಿದೆ.
ಶಿಘ್ರದಲ್ಲೇ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಮಿಕರಿಗೆ, ವಾಹನ ಚಾಲಕರಿಗೆ ಹಾಗೂ ಸುತ್ತಲಿನ ಜನರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದೊಂದಿಗೆ ವಿಮಾನ ನಿಲ್ದಾಣದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಗುರುತಿಸಲಾದ ಸ್ಥಳದಲ್ಲಿ ನೂತನವಾಗಿ 2 ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದು ತಮ್ಮ ಎಂದು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications