Kempegowda Airport: ವಿಮಾನ ನಿಲ್ದಾಣದ ಬಳಿ ಬೃಹತ್‌ ಅಡುಗೆ ಮನೆ ನಿರ್ಮಾಣ-ವಿಶೇಷತೆ ಏನು ಗೊತ್ತಾ?-ಮಾಹಿತಿ, ವಿವರ

ಬೆಂಗಳೂರು, ಮಾರ್ಚ್‌, 19: ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದಿ ದಿನಕ್ಕೆ ಬೆಳವಣಿಗೆ ಆಗುತ್ತಲೇ ಇದೆ. ಇನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಲೇ ಇವೆ. ಇದೀಗ ಈ ವಿಮಾನ ನಿಲ್ದಾಣದ ಬಳಿ ಬೃಹದಾಕಾರದ ಅಡುಗೆ ಮನೆಯೊಂದು ನಿರ್ಮಾಣವಾಗಿದೆ. ಹಾಗಾದರೆ ಈ ಅಡುಗೆ ಮನೆಯ ವಿಶೇಷತೆ ಏನು ಹಾಗೂ ಇದರ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಹಲವು ಸೇವೆ ಒದಗಿಸುವ, ಸಿಂಗಾಪುರ ಮೂಲದ "ಸ್ಯಾಟ್‌" ಸಂಸ್ಥೆಯು 2.2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ, ದಿನವೊಂದಕ್ಕೆ ಬರೋಬ್ಬರಿ 1.7 ಲಕ್ಷ ಸಿದ್ಧ ಆಹಾರ ತಯಾರಿಸಬಹುದಾದ ಸಾಮರ್ಥ್ಯ ಹೊಂದಿರುವ ಅಡುಗೆ ಮನೆಯನ್ನು ನಿರ್ಮಾಣ ಮಾಡಿದೆ.

Kempegowda Airport Huge kitchen Construction near Bengaluru Airport know details

40 ಸಾವಿರ ಕೆ.ಜಿ. "ರೆಡಿ ಟು ಈಟ್‌" ಆಹಾರ ಉತ್ಪನ್ನಗಳನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಆಹಾರವನ್ನು ಸುಲಭವಾದ ರೀತಿಯಲ್ಲಿ ಪ್ಯಾಕ್‌ ಮಾಡಲಾಗುತ್ತಿದೆ. ರೆಸ್ಟೊರೆಂಟ್‌ಗಳು, ಕೆಫೆಗಳು, ವಿಮಾನಯಾನ ಸಂಸ್ಥೆಗಳು ಸೇರಿದಂತೆ ದೇಶಿ ಹಾಗೂ ವಿದೇಶಿಯ ಮಾರುಕಟ್ಟೆಗಳಿಗೆ ಇಲ್ಲಿಂದ ಆಹಾರ ಉತ್ಪನ್ನವು ರವಾನೆ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಎಸ್‌ಎಫ್‌ಎಸ್‌ಐ ನಿರ್ದೇಶಕ ಮತ್ತು ಸಿಇಒ ಸಾಗರ್‌ ಮಾಹಿತಿ ನೀಡಿದ್ದು, ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಜೊತೆಗೆ ರುಚಿಕರ ಮತ್ತು ಪೌಷ್ಟಿಕ ಆಹಾರ ಉತ್ಪನ್ನಗಳನ್ನು ಸ್ಮಾರ್ಟ್‌ ತಂತ್ರಜ್ಞಾನದ ನೆರವಿನಿಂದ ಉತ್ಪಾದನೆ ಮಾಡಲಾಲಾಗುತ್ತದೆ ಎಂದು ತಿಳಿಸಿದ್ದಾರೆ.

"ಸ್ಯಾಟ್ಸ್‌" ಫುಡ್‌ ಸೊಲ್ಯೂಷನ್ಸ್‌ನ ಸಿಇಒ ಸ್ಟಾನ್ಲಿಗೋಹ್‌ ಅವರು, ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಉದ್ಯಮವು ಸುಮಾರು ಎರಡು ದಶಕಗಳಿಂದಲೂ ಇದೆ. ರೆಡಿ ಟು ಈಟ್‌ ಉತ್ಪನ್ನಕ್ಕೆ ಇಲ್ಲಿ ಬೇಡಿಕೆ ಹೆಚ್ಚುತ್ತಿದೆ" ಎಂದು ತಿಳಿಸಿದರು. ಇನ್ನು ಕಂಪನಿಯ ಪ್ರಕಾರ, 2021 ಮತ್ತು 2026ರ ನಡುವೆ ಭಾರತದಲ್ಲಿ ರೆಡಿ ಟು ಈಟ್‌ ಆಹಾರ ಮಾರಾಟ ಪ್ರಮಾಣ ಶೇಕಡಾ 45ರಷ್ಟು ಹೆಚ್ಚಲಿದೆ.

ಜೀವನ ಶೈಲಿಯಲ್ಲಿನ ಬದಲಾವಣೆ, ನಗರೀಕರಣ, ಆದಾಯದಲ್ಲಿನ ಏರಿಕೆ ಈ ಎಲ್ಲಾಅಂಶಗಳ ಹಿನ್ನೆಲೆ 2028ರ ವೇಳೆಗೆ 81 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಸಿದ್ಧ ಆಹಾರ ಸೇವಿಸುವ ನಿರೀಕ್ಷೆ ಇದೆ. ಕಂಪನಿಯು 230 ಸಿಬ್ಬಂದಿ ನೇಮಕ ಮಾಡಿಕೊಂಡಿದೆ. ಇನ್ನು ಹೆಚ್ಚಿನವರು ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶದವರು ಆಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+