KSET 2024 Hall Ticket: ಪ್ರವೇಶ ಪತ್ರ ಬಿಡುಗಡೆಗೊಳಿಸಿದ KEA: ಡೌನ್‌ಲೋಡ್ ಹೇಗೆ? ಸೂಚನೆಗಳು
ಬೆಂಗಳೂರು, ನವೆಂಬರ್ 15: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ- 2024 (KEST 2024)ಗೆ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕ ಘೋಷಣೆ ಮಾಡಿದೆ. ಇದರ ಬೆನ್ನಲ್ಲೆ ಪರೀಕ್ಷೆಗೆ ಹತ್ತು ದಿನ ಇರುವ ಮೊದಲೇ ಹಾಲ್‌ಟಿಕೆಟ್ ಬಿಡುಗಡೆ ಮಾಡಿದೆ. ಗುರುವಾರ ಹಾಲ್‌ಟಿಕೆಟ್ ಬಿಡುಗಡೆ ಮಾಡಿದ್ದು, ಈ ಪ್ರವೇಶ ಪರೀಕ್ಷೆಗೆ ಹಾಜರಾಗುವ ಪ್ರತಿಯೋಬ್ಬರು ಈ ಹಾಲ್‌ಟಿಕೆಟ್ ಕಡ್ಡಾಯವಾಗಿ ಒಯ್ಯುವಂತೆ ಪ್ರಾಧಿಕಾರ ತಿಳಿಸಿದೆ. ಅದನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆಎಸ್‌ಇಟಿ) 2024 ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆನ್‌ಲೈನ್ ಲಿಂಕ್ ಒದಗಿಸಿದೆ. ಅಭ್ಯರ್ಥಿಗಳ ನಿರೀಕ್ಷೆಯಂತೆ ಬಿಡುಗಡೆಯಾದ ಈ ಪ್ರವೇಶ ಪತ್ರವನ್ನು ನೀವು ಈ ಅಧಿಕೃತ ವೆಬ್‌ಸೈಟ್‌ಗೆ cetonline.karnataka.gov.in ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.

ಒಂದು ಗಂಟೆ ಮುಂಚಿತವಾಗಿ ನೀವು ಪರೀಕ್ಷಾ ಕೇಂದ್ರಗಳಲ್ಲಿರಬೇಕು. ಪರೀಕ್ಷಾರ್ಥಿಗಳು ಒಂದೇ ವೇಳೆ ಈ ಪ್ರವೇಶ ಪತ್ರ ಇಲ್ಲದ ಒಳಪ್ರವೇಶ ಯತ್ನಿಸಿದರೆ ಅದಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಇದನ್ನು ನೀವು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದೆ.
ಇದೇ ನವೆಂಬರ್ 24ರಂದು ಒಟ್ಟು 300 ಅಂಕಗಳ ಎರಡು ಲಿಖಿತ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕೂಡಲೇ ಕೆಇಎ ಅಧಿಕೃತ ವೆಬ್‌ಸೈಟ್ cetonline.karnataka.gov.in ಭೇಟಿ ನೀಡಬೇಕು. ಡೌನ್‌ಲೋಡ್ ಲಿಂಕ್ ಅನ್ನು ಆಕ್ಟಿವೇಟ್ ಮಾಡಬೇಕು.

ನೀವು ಕೆಸೆಟ್ ಪರೀಕ್ಷೆಗೆ ನೋಂದಾಯಿಸಿದ ನೋಂದಣಿ ಸಂಖ್ಯೆ ಅಗತ್ಯ ಲಾಗಿನ್ ರುಜುವಾತುಗಳನ್ನು ನಮೂದಿಸಿ ಸೌನ್‌ಲೋಡ್ ಮಾಡಿಕೊಳ್ಳಬೇಕು. ಇನ್ನೂ ಹಾಲ್ ಟಿಕೆಟ್ ಪಿಡಿಎಫ್ ತೆರೆಯಲು ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರ ಪಾಸ್ ವರ್ಡ್ ರೀತಿ ಬಳಸಬೇಕು ಎಂದು ಕೆಇಎ ಸೂಚನೆ ನೀಡಿದೆ.
ಎರಡು ಪರೀಕ್ಷೆ: ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ನೋಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ನವೆಂಬರ್ 24ರಂದು ಎರಡು ಪರೀಕ್ಷೆ ನಡೆಸಲಿದೆ. ಒಂದು ಪರೀಕ್ಷೆಗೆ 200 ಹಾಗೂ ಮತ್ತೊಂದು ಪ್ರಶ್ನೆ ಪತ್ರಿಕೆಗೆ 100 ಅಂಕಗಳು ಇರುತ್ತವೆ. ಅಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಮೊದಲ ಪರೀಕ್ಷೆ ನಡೆಯಲಿದೆ.
ಹಚ್ಚಿನ ಮಾಹಿತಿಗೆ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಅಗತ್ಯ ಸೂಚನೆಗಳು, ಸಮಯ, ಡ್ರೆಸ್ ಕೋಡ್ ಸೇರಿದಂತೆ ಮಹತ್ವ ದಿನಾಂಕಗಳನ್ನು ತಿಳಿಯಬಹುದು. ಡೌನ್‌ಲೋಡ್ ಮಾಡಿದ ಹಾಲ್ ಟಿಕೆಟ್ ಪ್ರತಿಯನ್ನು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಯ್ಯುವುದು ಕಡ್ಡಾಯವಾಗಿದೆ.












Click it and Unblock the Notifications