ಇನ್ಮುಂದೆ ಆಸ್ತಿ ಪತ್ರ ಫೋರ್ಜರಿ ಮಾಡಿದ್ರೆ ಸಿಕ್ಕಿ ಬೀಳ್ತೀರ ಹುಷಾರ್!

ಬೆಂಗಳೂರು, ಆಗಸ್ಟ್ 28: ಆಸ್ತಿ ನೋಂದಣಿಗಳ ಫೋರ್ಜರಿ ತಡೆಗೆ ಕಾವೇರಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ನಗರ ಪ್ರದೇಶಗಳಲ್ಲಿ ದಾಖಲೆ ಪತ್ರಗಳನ್ನು ಆಧರಿಸಿ ನಡೆಯುತ್ತಿರುವ ಆಸ್ತಿ ನೋಂದಣಿಯಿಂದ ಬಹಳಷ್ಟು ವಂಚನೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಸಚಿವ ಯು.ಟಿ. ಖಾದರ್ ಮಾತನಾಡಿ, ನಗರ ಪ್ರದೇಶಗಳಲ್ಲಿ ದಾಖಲೆ ಪತ್ರಗಳನ್ನು ಆಧರಿಸಿ ನಡೆಯುತ್ತಿರುವ ಆಸ್ತಿ ನೋಂದಣಿ ಯಿಂದ ಬಹಳಷ್ಟು ವಂಚನೆ ನಡೆಯುತ್ತಿದೆ. ಇದನ್ನು ತಪ್ಪಿಸಲು ನಗರಾಭಿವೃದ್ಧಿ ಇಲಾಖೆಇ ಇ-ಖಾತಾ ಸಾಫ್ಟ್‌ ವೇರ್ ನೊಂದಿಗೆ ಕಾವೇರಿ ಸಾಫ್ಟ್‌ ವೇರ್ ಜೋಡಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾವೇರಿ ಮತ್ತು ಇ-ಖಾತಾ ಸಾಫ್ಟ್‌ ವೇರ್‌ಗಳ ಜೋಡಣೆಯಿಂದ ಆಸ್ತಿ ನೋಂದಣಿಗೆ ಸಬ್ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲಲ್ಇಸಿದ ಕೂಡಲೇ ನೋಂದಣಿ ಮಾಡಬೇಕಾದ ಆಸ್ತಿ ಯಾರ ಹೆಸರಿನಲ್ಲಿದೆ ಈ ಹಿಂದೆ ಯಾವ ರೀತಿ ಪರಭಾರೆ ಆಗಿದೆ ಎಂಬ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ನಕಲಿ ದಾಖಲೆಗಳ ಮೂಲಕ ಆಸ್ತಿ ಮಾರಾಟ ತಪ್ಪಲಿದೆ ಎಂದು ಹೇಳಿದರು.

Kaveri and e-Khata softwares will be synced soon

ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಸುಮಾರು 14 ಕಚೇರಿಗಳಿಂದ ಅನುಮತಿ ಪಡೆಯಬೇಕಿದೆ. ಇದನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗುತ್ತಿದೆ. ಮನೆ ನಿರ್ಮಾಣ ಪರವಾನಗಿ ಹೊಸ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಮತ್ತಿತರೆ ಉದ್ದೇಶಕ್ಕೂ ಕಾವೇರಿ ಸಾಫ್ಟ್‌ ವೇರ್ ಜೋಡಣೆ ಅನುಕೂಲವಾಗಲಿದೆ. ಬೆಂಗಳೂರು ನಗರದಲ್ಲಿ ಲಕ್ಷ ಮನೆಗಳ ನಿರ್ಮಿಸುವ ಕಾರ್ಯ ಇನ್ನು ಮೂರು ತಿಂಗಳಲ್ಲಿ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+