ಕವಲುದಾರಿಯಲ್ಲಿ ಕನ್ನಡಿಗ: ಅರಿಮೆ ಮಾತುಕತೆ
ಬೆಂಗಳೂರು, ಡಿಸೆಂಬರ್ 12 : ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಭಾನುವಾರ(ಡಿಸೆಂಬರ್ 17 )ರಂದು ಕವಲುದಾರಿಯಲ್ಲಿ ಕನ್ನಡಿಗ ಎನ್ನುವ ಶೀರ್ಷಿಕೆಯಲ್ಲಿ ಅರಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡಪರ ಚಿಂತಕರಾದ ಆನಂದ ಜಿ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಕನ್ನಡಿಗ ಇಂದು ಕವಲುದಾರಿಯಲ್ಲಿದ್ದಾನೆ. ಹೊರಗಿನ ಸಿದ್ಧಾಂತಗಳ ಗಾಳಿಗುದ್ದಾಟದಲ್ಲಿ ಕನ್ನಡಿಗನ ಬದುಕು, ಏಳಿಗೆಯ ವಿಷಯಗಳು ಮೂಲೆಗುಂಪಾಗಿವೆ. ಕನ್ನಡಿಗರ ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತಿದೆ. ಕನ್ನಡಿಗರನ್ನು ಒಡೆದು ಆಳುವ ದನಿಗಳು ಹೆಚ್ಚುತ್ತಿವೆ. ಈ ಹೊತ್ತಲ್ಲಿ ಕನ್ನಡಿಗರ ಮುಂದಿನ ಇಂದಿನ ಸಮಸ್ಯೆಗಳು.

ಅವುಗಳಿಗೆ ಬೇಕಿರುವ ಪರಿಹಾರದ ಆಲೋಚನೆಗಳ ಕುರಿತು ಒಳನೋಟಗಳುಳ್ಳ "ಕನ್ನಡಿಗ - ಮರೆವು, ಅರಿವು" ಅನ್ನುವ ಹೊಸತೊಂದು ಪುಸ್ತಕವನ್ನು ಕನ್ನಡ ಪರ ಚಿಂತಕ ಆನಂದ್ ಬರೆದಿದ್ದಾರೆ. ಈ ಪುಸ್ತಕದಲ್ಲೇನಿದೆ, ಅದರ ಆಶಯಗಳೇನು ಅನ್ನುವ ಕುರಿತು ಮುನ್ನೋಟದ ಮಾತುಕತೆ ಮುನ್ನೋಟ ಕಾರ್ಯಕ್ರಮದಲ್ಲಿ ಅವರು ಮಾತನಾಡಲಿದ್ದಾರೆ.
ಏನು- ಕವಲುದಾರಿಯಲ್ಲಿ ಕನ್ನಡಿಗ ಮಾತುಕತೆ
ಎಲ್ಲಿ- ಮುನ್ನೋಟ ಬುಕ್ ಸ್ಟೋರ್, ನಂ67 , ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ.
ಯಾವಾಗ- 17 ಡಿಸೆಂಬರ್ , ಭಾನುವಾರ ಬೆಳಿಗ್ಗೆ 11.30












Click it and Unblock the Notifications