ಕೆಪಿಎಸ್‌ಸಿ ನೇಮಕ: ಪರ ವಿರೋಧ ಪ್ರತಿಭಟನೆ

ಬೆಂಗಳೂರು, ಜು.22: ಕೆಪಿಎಸ್‌ಸಿ ನೇಮಕಾತಿ ಸಂಬಂಧವಾಗಿ ಫ್ರೀಡಂ ಪಾರ್ಕ್‌‌‌ನಲ್ಲಿ ಮಂಗಳವಾರ ಎರಡು ಬಣಗಳ ಪ್ರತಿಭಟನೆ ನಡೆಯಿತು.

ಒಂದು ಕಡೆಯಲ್ಲಿ 2011ನೇ ಸಾಲಿನ ಗೆಜೆಟೆಡ್‌‌ ಪ್ರೊಬೇಷನರ್ಸ್‌ ಹುದ್ದೆಗೆ ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿ‌ಗಳು ತಮ್ಮ ನೇಮಕಾತಿ ಆದೇಶವನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೆ, ಇನ್ನೊಂದು ಕಡೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ‌ಗಳ ಜಾಗೃತ ವೇದಿಕೆಯವರು ಕೆಪಿಎಸ್‌‌ಸಿಯ ಬ್ರಹ್ಮಾಂಡ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ಎರಡು ಪ್ರತಿಭಟನೆಗಳ ವಿವರವನ್ನು ಸ್ಲೈಡ್‌ನಲ್ಲಿ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಕೆಪಿಎಸ್‌ಸಿ ಪ್ರತಿಭಟನೆಯ ಮತ್ತಷ್ಟು ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಭೇಟಿ ನೀಡಿ: ಗ್ಯಾಲರಿ

 ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ:

ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ:

ಕೆಪಿಎಸ್‌ಸಿ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದರೋ ಅವರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಲಿ. ಉಳಿದ ಅಮಾಯಕ ಪ್ರತಿಭಾವಂತ ಅಭ್ಯರ್ಥಿ‌ಗಳಿಗೆ ಕೂಡಲೇ ಕೆಪಿಎಸ್‌ಸಿ ಷರತ್ತುಬದ್ದ ನೇಮಕಾತಿ ಆದೇಶವನ್ನು ನೀಡಿ ನಮ್ಮ ಸಮಸ್ಯೆಯನ್ನು ನಿವಾರಿಸಬೇಕಿದೆ.

ಮಹೇಂದ್ರ,2011ನೇ ಸಾಲಿನ ಗೆಜೆಟೆಡ್‌‌ ಪ್ರೊಬೇಷನರ್ಸ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ‌

 ನಾಲ್ಕನೇಯ ದಿನಕ್ಕೆ ಕಾಲಿಟ್ಟ ಉಪವಾಸ:

ನಾಲ್ಕನೇಯ ದಿನಕ್ಕೆ ಕಾಲಿಟ್ಟ ಉಪವಾಸ:

ಫ್ರೀಡಂ ಪಾರ್ಕ್‌ನಲ್ಲಿ 2011ನೇ ಸಾಲಿನ ಗೆಜೆಟೆಡ್‌‌ ಪ್ರೊಬೇಷನರ್ಸ್‌ ಹುದ್ದೆಗೆ ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿ‌ಗಳು ನಡೆಸುವ ಉಪವಾಸ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ.

ಕ್ರಿಮಿನಲ್‌ ಕೇಸ್ ಹಾಕಿ:

ಕ್ರಿಮಿನಲ್‌ ಕೇಸ್ ಹಾಕಿ:

ಕರ್ನಾಟಕ ರಾಜ್ಯ ಹಿಂದುಳಿದ ವರ್ಗ‌ಗಳ ಜಾಗೃತ ವೇದಿಕೆಯ ಆಗ್ರಹಗಳು
* ಭ್ರಷ್ಟಾಚಾರದಲ್ಲಿ ಭಾಗಿಯಾದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು.
*ಅನ್ಯಾಯಕ್ಕೆ ಒಳಗಾದ ಪ್ರತಿಭಾವಂತ ಅಭ್ಯರ್ಥಿ‌ಗಳಿಗೆ ನ್ಯಾಯ ಒದಗಿಸಿಕೊಡಬೇಕು.
*ಕೆಪಿಎಸ್‌ಸಿ ನೇಮಕವನ್ನು ಯುಪಿಎಸ್‌ಸಿ ಮಾದರಿಯಲ್ಲಿ ಸುಧಾರಣೆ ಮಾಡುವವರೆಗೂ ಆಯೋಗಕ್ಕೆ ಯಾವುದೇ ನೇಮಕಾತಿ ಜವಾಬ್ದಾರಿಯನ್ನು ವಹಿಸಬಾರದು.

 ನೇಮಕವನ್ನು ರದ್ದುಗೊಳಿಸಿ:

ನೇಮಕವನ್ನು ರದ್ದುಗೊಳಿಸಿ:

"1998-99 ಮತ್ತು 2004ರಲ್ಲಿ ನಡೆದ ನೇಮಕಾತಿಯಲ್ಲಿ ಶೇ 20ಕ್ಕಿಂತ ಹೆಚ್ಚಿನ ಅಕ್ರಮ ನಡೆದಿದ್ದರೆ ಎಲ್ಲಾ ಅಧಿಕಾರಿಗಳನ್ನು ವಜಾ ಮಾಡಬೇಕು. ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಶೇ 20ಕ್ಕಿಂತ ಅಕ್ರಮ ನಡೆದಿದ್ದರೆ ವಜಾ ಮಾಡಬಹದು ಎಂದು ಹೇಳಿದೆ. ಈ ಅವಧಿಯಲ್ಲಿ ನೇಮಕವಾದ ಹಲವು ಅಧಿಕಾರಿಗಳು ಸದ್ಯ ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡುತ್ತಿದ್ದು ಇವರನ್ನು ವಜಾ ಮಾಡಬೇಕು"

ಕೆ.ಎಸ್‌.ಶಿವರಾಮು, ರಾಜ್ಯಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗ‌ಗಳ ಜಾಗೃತ ವೇದಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+