Get Updates
Get notified of breaking news, exclusive insights, and must-see stories!

ಇಲ್ಲಿದೆ ಓದಿ ಯೋಗರಾಜ ಭಟ್ಟರ ಚುನಾವಣಾ ಗೀತೆ

ಇಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಬಿಡುಗಡೆಯಾಗಲಿರುವ ಕರ್ನಾಟಕದ ಮೊದಲ ಚುನಾವಣಾ ಗೀತೆಗೆ ಕನ್ನಡದ ಖ್ಯಾತ ಚಿತ್ರ ನಿರ್ದೇಶಕ, ಗೀತ ರಚನಕಾರ ಯೋಗರಾಜ್ ಭಟ್ ಸಾಗಿತ್ಯ ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಸಿದ್ಧ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಂಯೋಜನೆಯ ಈ ಗೀತೆ ಇಂದು ಸಂಜೆ 6:30 ಕ್ಕೆ ವಿಕಾಸ ಸೌಧದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.

ಈ ಸಮಾರಂಭದಲ್ಲಿ ಕರ್ನಾತಕ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಸಹ ಉಪಸ್ಥಿತರಿರುತ್ತಾರೆ. ಸಂವಿಧಾನ ನೀಡಿದ ಅತ್ಯಮೂಲ್ಯ ಮತದಾನದ ಹಕ್ಕಿನ ಕುರಿತು ಜಾಗೃತಿ ಮೂಡಿದಿ, ಮತದಾನದ ಪ್ರಮಾಣವನ್ನು ಹೆಚ್ಚಿಸುವ ಆಶಯದೊಂದಿಗೆ ಬಿಡುಗಡೆಯಾಗುತ್ತಿರುವ ಭಟ್ಟರ ಹಾಡು ಹೇಗಿದೆ... ನೀವೇ ಓದಿ ಹೇಳಿ.

Karnatakas first election anthem in kannada by well known Kannada film director Yogaraj Bhat is here

ಚುನಾವಣಾ ಗೀತೆ

ನಿನ್ನ ಬೆರಳಲಿ ನಾಡಿನ ಭವಿಷ್ಯ ಅಡಗಿಹುದೂ ಮಹನೀಯ....
ಶಾಹಿ ಚುಕ್ಕಿಯ ಧರಿಸು ಈ ದಿನ ತಪ್ಪದಲೇ ಮಹರಾಯ....
ಕರುನಾಡ ನಾಗರಿಕರೆಂದು, ಮತ ನೀಡುವಿಕೆಯಲ್ಲಿ ಮುಂದು
ಹೆಮ್ಮೆಯಿಂದ ತೋರಿ ನಿಮ್ಮ ತೋರು ಬೆರಳನ್ನಾ....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ!

ವೋಟು ನಿನ್ನ ಅಧಿಕಾರ, ನೀನೇ ಆರಿಸು ಸರಕಾರ
ವೋಟು ನೀಡದೆ ನೀನು ಕುಂತರೆ
ನಿನಗೆ ನೀನೇ ಮಾಡಿಕೊಳ್ಳುವೆ ಅಪಚಾರ....
ಅರಸ ಯಾರೇ ಆಗಿರಲಿ, ಅವನು ನಮ್ಮ ಸೇವಕನು
ಇದನು ಅರಿತರೆ ಜನ್ಮ ಸಾರ್ಥಕ
ದಾಸನು ಅಲ್ಲ ಇಲ್ಲಿ ಯಾವುದೇ ಮತದಾರ...
ಹದಿನೆಂಟು ಆದವರೆ ಬನ್ನಿ
ಯುವಶಕ್ತಿ ತೋರ್ಬೆರಳ ತನ್ನಿ
ಐದು ಕೋಟಿ ವೋಟು ನೀಡಿ
ದಾಖಲೆ ಬರೆಯೋಣ....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ
ಬನ್ನಿ ಹೊರಗೆ ಬೇಡ ಬಿಗುಮಾನ
ನಾಡು ದೊಡ್ಡದು ಸ್ವಾಮಿ ನಮಗಿನ್ನ

ಭ್ರಷ್ಟ ನಾಯಕರ ಹುಟ್ಟಿಗೆ ಕಾರಣ
ಮತ ನೀಡದ ಪ್ರಜೆಯು...
ಉತ್ತಮ ರಾಷ್ಟ್ರಕೆ ಕೆಚ್ಚಿನ ಪ್ರಜೆಯೇ
ಎಂದೆಂದಿಗು ಪ್ರಭುವು.....
ಬನ್ನಿ ಮನಸು ಮಾಡೋಣ
ಹೊಸದೇ ಕನಸು ಕಾಣೋಣ
ಇದು ಕರ್ತವ್ಯ ಇದು ಕರ್ತವ್ಯ
ರಾಷ್ಟ್ರ ರಚಿಸೋಣ.....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ
ನಮ್ಮ ವೋಟು ನಮಗೇ ಬಹುಮಾನ
ತಿರುಗಿ ನೋಡಲಿ ನಮ್ಮನು ಶತಮಾನ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+