ಎನ್‌ಜಿಟಿ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಗೆ ಮೇಲ್ಮನವಿ

ಬೆಂಗಳೂರು, ಡಿಸೆಂಬರ್ 14: ಬೆಳ್ಳಂದೂರು ಕೆರೆಯ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ 75 ಕೋಟಿ ರೂ ದಂಡ ವಿಧಿಸಿರುವ ಎನ್‌ಜಿಟಿ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಮುಂದಾಗಿದೆ.

ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಭಾರಿ ದಂಡ ವಿಧಿಸಿತ್ತು. ಎನ್‌ಜಿಟಿ ನೀಡಿರುವ ತೀರ್ಪಿನಲ್ಲಿ ಹಲವು ಅನುಷ್ಠಾನಕ್ಕೆ ಯೋಗ್ಯವಲ್ಲದ ಸೂಚನೆಗಳನ್ನು ನೀಡಲಾಗಿದೆ. ಇಂತವುಗಳ ವಿರುದ್ಧ ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿಗಳು ಪ್ರತ್ಯೇಕವಾಗಿ ಅರ್ಜಿಗಳ ಮೂಲಕ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ದಂಡ ರದ್ದು ಮಾಡಲು ಮನವಿ ಸಲ್ಲಿಕೆ

ದಂಡ ರದ್ದು ಮಾಡಲು ಮನವಿ ಸಲ್ಲಿಕೆ

ಎನ್‌ಜಿಟಿ ತೀರ್ಪಿನಲ್ಲಿ ಬೆಳ್ಳಂದೂರು ಕೆರೆ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಿ ತಿಂಗಳೊಳಗಾಗಿ 500 ಕೋಟಿ ಠೇವಣಿ ಇಡಬೇಕು, ಬೆಳ್ಳಂದೂರು ಕೆರೆಯಿಂದ ಪರಿಸರಕ್ಕೆ ಆಗಿರುವ ಧಕ್ಕೆಗೆ ಪರಿಹಾರವಾಗಿ 50 ಕೋಟಿಗಳನ್ನು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ವಿಳಂಬವಾದರೆ ಶೇ.12ರಷ್ಟು ಬಡ್ಡಿ ವಿಧಿಸಬೇಕು ಎಂದು ಹೇಳಲಾಗಿದೆ.

ಕಾಂಕ್ರೀಟ್ ಕಾಲುವೆ ನಿರ್ಮಾಣ

ಕಾಂಕ್ರೀಟ್ ಕಾಲುವೆ ನಿರ್ಮಾಣ

ಎನ್‌ಜಿಟಿ ಆದೇಶದಲ್ಲಿ ರಾಜಕಾಲುವೆಯನ್ನು ಕಚ್ಚಾ ಕಾಲುವೆಯನ್ನಾಗಿಯೇ ಉಳಿಸಬೇಕು ಕಚ್ಚಾ ಕಾಲುವೆ ಬಿಟ್ಟರೆ ಪ್ರವಾಹ ಪರಿಸ್ಥಿತಿ ತಲೆದೂರುವ ಸಾಧ್ಯತೆ ಇದೆ. ಇದನ್ನೂ ಕೂಡ ಅನುಷ್ಠಾನಗೊಳಸಿಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಟಾಸ್ಕ್ ಫೋರ್ಸ್ ರಚನೆ ಆದೇಶ ಪಾಲನೆ

ಟಾಸ್ಕ್ ಫೋರ್ಸ್ ರಚನೆ ಆದೇಶ ಪಾಲನೆ

ಕೆರೆಯಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ಗುರುತಿಸಲು ಟಾಸ್ಕ್ ಫೋರ್ಸ್ ರಚನೆ, ಎನ್‌ಜಿಟಿ ಆದೇಶ ಪಾಲನೆ ಪರಿವೀಕ್ಷಿಸಲು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ, ಐಐಎಸ್‌ಸಿ ವಿಜ್ಞಾನಿ ಪ್ರಿ. ಟಿವಿ ರಾಮಚಂದ್ರನ್, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.

ಎನ್‌ಜಿಟಿ ಆದೇಶ ಏನಿತ್ತು

ಎನ್‌ಜಿಟಿ ಆದೇಶ ಏನಿತ್ತು

ಬೆಂಗಳೂರಿನ ಬೆಳ್ಳಂದೂರು ಕೆರೆ ಸೇರಿದಂತೆ ನೈಸರ್ಗಿಕ ಜಲಸಂಪನ್ಮೂಲವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಛಾಟಿ ಬೀಸಿದ್ದು 50 ಕೋಟಿ ರೂ ದಂಡ ವಿಧಿಸಿತ್ತು. ಬೆಂಗಳೂರಿನ ಕೆರೆಗಳನ್ನು ಸಂರಕ್ಷಿಸಲು ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಹಾಗೂ ರಾಜ್ಯಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಬಿಬಿಎಂಪಿಗೆ 25 ಕೋಟಿ ರೂ ದಂಡ ವಿಧಿಸಿದೆ. ಮಾತ್ರವಲ್ಲದೆ ಬೆಂಗಳೂರಿನ ಬೆಳ್ಳಂದೂರು, ಅಗರ ಮತ್ತಿತರೆ ಕೆರೆಗಳನ್ನು ಕೂಡಲೇ ಅಭಿವೃದ್ಧಿ ಪಡಿಸುವಂತೆ ತಾಕೀತು ಮಾಡಿದೆ.

ಇದೇ ವೇಳೆ ಬೆಳ್ಳಂದೂರು ಸೇರಿದಂತೆ ಇನ್ನಿತರೆ ಕೆರೆಗಳಿಗೆ ನೇರವಾಗಿ ಕೊಳಚೆ ಹಾಗೂ ವಿಷಯುಕ್ತ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀಕ್ಷ್ಣವಾಗಿ ಟೀಕಿಸಿರುವ ಎನ್‌ಜಿಟಿ ನೈಸರ್ಗಿಕ ನೀರನ್ನು ಮಲಿನಗೊಳಿಸುವುದು ಕ್ರಿಮಿನಲ್ ಅಪವಾದ ಎಂದು ಕಟುವಾದ ಮಾತಿನಿಂದ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+