Breaking: 15000 ಶಿಕ್ಷಕರ ನೇಮಕಾತಿ ಫಲಿತಾಂಶ: 1:2 ದಾಖಲಾತಿ ಪರಿಶೀಲನಾ ಪಟ್ಟಿ ಶೀಘ್ರವೇ ಪ್ರಕಟ
ಬೆಂಗಳೂರು, ಸೆಪ್ಟೆಂಬರ್ 27: ಶಿಕ್ಷಕರಾಗಬೇಕು ಎಂಬ ಬಯಕೆಯಿಂದ ಸಿಇಟಿ ಪರೀಕ್ಷೆಯನ್ನು ಬರೆದಿದ್ದ ಭಾವಿ ಶಿಕ್ಷಕರು ತಮ್ಮ ಆಯ್ಕೆಯನ್ನು ಖಚಿತ ಪಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಕೆಲವೇ ಗಂಟೆಗಳಲ್ಲಿ ಬೆಂಗಳೂರು ವಿಭಾಗದ 1:2 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.
15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:2 ಅಭ್ಯರ್ಥಿಗಳ ಬೆಂಗಳೂರು ವಿಭಾಗದ ದಾಖಲಾತಿ ಪರಿಶೀಲನೆ ಪಟ್ಟಿಯನ್ನು ಇಂದು ಪ್ರಕಟಿಸಲಾಗುತ್ತದೆ.
ಇನ್ನು ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ ಸಂಜೆ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ದಾಖಲಾತಿ ಪರಿಶೀಲನೆ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಭಾವಿ ಶಿಕ್ಷಕರು ಈ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ. https://schooleducation.kar.nic.in/index.html
15000 ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಶನಿವಾರ ಮತ್ತು ಮೇ22 ಭಾನುವಾರ ನಡೆದಿತ್ತು. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 1,06,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.

1:2 ಅಭ್ಯರ್ಥಿಗಳ ಆಯ್ಕೆಗೆ ದಾಖಲೆಯೇ ಮುಖ್ಯ
ಒಂದು ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ತತ್ಸಮಾನವಾಗಿ ಆಯ್ಕೆಯಾಗಿರುತ್ತಾರೆ. ಈ ಇಬ್ಬರ ದಾಖಲೆಗಳನ್ನು ಪರಿಶೀಲನೆಯನ್ನು ಮಾಡಲಾಗುತ್ತದೆ. ಮೊದಲ ವ್ಯಕ್ತಿ ಮತ್ತು ಎರಡನೇ ವ್ಯಕ್ತಿ ಗಳಿಸಿರುವ ಅಂಕಗಳ ಆಧಾರ ಮತ್ತು ಮೀಸಲಾತಿ ಆಧಾರದಲ್ಲಿಯೇ ಆಯ್ಕೆ ಮಾಡಲಾಗಿರುತ್ತದೆ. ಮೊದಲ ವ್ಯಕ್ತಿಯ ದಾಖಲೆಗಳಲ್ಲಿ ಲೋಪದೋಷವಿದ್ದರೆ ಎರಡನೇ ವ್ಯಕ್ತಿಗೆ ಅದೃಷ್ಟ ಖುಲಾಯಿಸುತ್ತದೆ. ಈಗ ಆಯ್ಕೆಯಾದ ಇಬ್ಬರು ವ್ಯಕ್ತಿಗಳ ದಾಖಲೆಯಲ್ಲಿ ಲೋಪದೋಷವಿದ್ದರೆ ಮತ್ತೊಬ್ಬ ವ್ಯಕ್ತಿಗೆ ಅವಕಾಶ ಸಿಗುತ್ತದೆ. ಆಯ್ಕೆ ಪಟ್ಟಿಯಲ್ಲಿ ಸೆಲೆಕ್ಟ್ ಆದ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕಿದೆ.












Click it and Unblock the Notifications