Breaking: ಪೊಲೀಸ್ ವಿರೋಧಿಯಾಗಿದ್ದ KSP (DP) ನಿಯಮ ತಿದ್ದುಪಡಿಗೆ ಬ್ರೇಕ್!

ಬೆಂಗಳೂರು, ಸೆಪ್ಟೆಂಬರ್ 20: ಕರ್ನಾಟಕ ರಾಜ್ಯ ಪೊಲೀಸ್ KSP(DP)Amendment Rules 2022 Draft ರೂಲ್ಸ್ ಅನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಪೊಲೀಸರ ವಿರೋಧಿ ನೀತಿಗೆ ಇಲಾಖೆಯ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ Karnataka State Police (DP)Amendment Rules 2022ಗೆ ಸರ್ಕಾರ ತಾತ್ಕಾಲಿಕ ವಿರಾಮವನ್ನು ಹಾಕಿದೆ.

ಪೊಲೀಸ್ ಇಲಾಖೆಯಲ್ಲಿ ಸರ್ವಾಧಿಕಾರಿ ಧೋರಣೆ ತರಲು ಇಲಾಖೆ ಮುಂದಾಗಿತ್ತು. ಇದೇ 07-09-2022 ರಂದು ಗೃಹ ಇಲಾಖೆ ಅಧೀನ ಕಾರ್ಯದರ್ಶಿಗಳು KSP (DP) ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ KSP(DP)Amendment Rules 2022 draft ರೂಲ್ಸ್ ಅನ್ನು ಕರ್ನಾಟಕ ರಾಜ್ಯಪತ್ರ ದಲ್ಲಿ ಪ್ರಕಟಿಸಿ ಇದಕ್ಕೆ ಕೇವಲ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಆದರೆ ಇದಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಸರ್ಕಾರ KSP (DP) ನಿಯಮಗಳಿಗೆ ತಿದ್ದುಪಡಿಗೆ ಬ್ರೇಕ್ ಹಾಕಿದೆ.

ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ಎಂಬ ಟ್ವಿಟ್ಟರ್‌ನಲ್ಲಿ "ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದಂತೆ ಕರ್ನಾಟಕ ರಾಜ್ಯ ಪೊಲೀಸ್ KSP(DP)Amendment Rules 2022 Draft ರೂಲ್ಸ್ ಅನ್ನು ಕರ್ನಾಟಕ ರಾಜ್ಯಪತ್ರ ದಲ್ಲಿ ಪ್ರಕಟಿಸಿದ್ದು ಮೇಲ್ಮನವಿ ಅವಕಾಶವನ್ನು ತೆಗೆದುಹಾಕುವ ಬಗ್ಗೆ ಹಲವಾರು ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ".

Karnataka State Police (DP) Amendment Rules 2022 temporarily halted

"ಕರಡು ಪ್ರತಿಯಲ್ಲಿ ಟೈಪಿಂಗ್ ದೋಷವಿರುವುದು ಕಂಡು ಬಂದಿದ್ದು ಅದನ್ನು ಸರಿಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವಂತೆ ದೊಡ್ಡ ಅಥವಾ ಸಣ್ಣ ಶಿಕ್ಷೆಗಳಿಗೆ ಮೇಲ್ಮನವಿಯನ್ನು ತೆಗೆದುಹಾಕುವಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ".

Karnataka State Police (DP) Amendment Rules 2022 temporarily halted

"ಸರ್ಕಾರವು ಮುಂದಿನ ದಿನಗಳಲ್ಲಿ ಸರಿಯಾದ ಆವೃತ್ತಿಯನ್ನು ಪ್ರಕಟಿಸುವವರಿಗೆ ಕಾಯುವಂತೆ ವಿನಂತಿಸಲಾಗಿದೆ" ಎಂದು ಮೂರು ಟ್ವೀಟ್‌ಗಳನ್ನು ಮಾಡಿದೆ.

ಪೊಲೀಸ್ ವಿರೋಧಿ ನೀತಿಯನ್ನು ಹೊಂದಿದ್ದ ಕಾಯ್ದೆಗೆ ಈ ಮೂಲಕ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+