ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಏಪ್ರಿಲ್ 18: ಕರ್ನಾಟಕ ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಕೆಎಸ್‌ಆರ್‌ಟಿಸಿ ನಿರ್ವಹಣಾ ನಿರ್ದೇಶಕ ಶಿವಯೋಗಿ ಕಳಸದ್ ಸೇರಿದಂತೆ ಒಮ್ಮೆಲೆ 17 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದ ಐಎಎಸ್ ಅಧಿಕಾರಿಗಳುವರ್ಗಾವಣೆಯಾದ ಐಎಎಸ್ ಅಧಿಕಾರಿಗಳು
* ಜಿ. ಕಲ್ಪನಾ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ
* ಶ್ರೀವತ್ಸ ಕೃಷ್ಣ- ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
* ಆಮ್ಲಾನ್ ಆದಿತ್ಯ ಬಿಸ್ವಾಸ್- ವಿಶೇಷಾಧಿಕಾರಿ, ಐಎಂಎ, ಬೆಂಗಳೂರು (ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಹುದ್ದೆಯ ಹೆಚ್ಚುವರಿ ಹೊಣೆ)
* ಮನೀಷ್ ಮೌದ್ಗಿಲ್- ಆಯುಕ್ತರು, ಸರ್ವೇ ಮತ್ತು ಭೂದಾಖಲೆಗಳು
* ಶಿವಯೋಗಿ ಕಳಸದ್- ಕಾರ್ಯದರ್ಶಿ, ಕೃಷಿ ಇಲಾಖೆ
* ಅನ್ಬು ಕುಮಾರ್- ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ
* ಎನ್. ವಿ. ಪ್ರಸಾದ್- ಕಾರ್ಯದರ್ಶಿ, ಸಾರಿಗೆ ಇಲಾಖೆ
* ಸತ್ಯವತಿ ಜಿ - ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ, ಬೆಂಗಳೂರು (ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆ)
* ರೇಜು ಎಂ.ಟಿ - ಕಾರ್ಯದರ್ಶಿ, ಮಹಿಳೆ, ಮಕ್ಕಳ ಅಭಿವೃದ್ಧಿ, ವಿಶೇಷ ಚೇತನರ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಇಲಾಖೆ
* ದೀಪಾ. ಎಂ- ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಬೆಂಗಳೂರು
* ಪಲ್ಲವಿ ಅಕುರಾತಿ- ರಾಜ್ಯ ಯೋಜನಾ ನಿರ್ದೇಶಕಿ, ಸರ್ವ ಶಿಕ್ಷಣ ಅಭಿಯಾನ, ಬೆಂಗಳೂರು
* ವೆಂಕಟೇಶ್ ಕುಮಾರ್- ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ
* ರಾಕೇಶ್ ಕುಮಾರ್ ಕೆ. - ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ
* ರವೀಂದ್ರ ಪಿ.ಎನ್. - ವಿಶೇಷ ಆಯುಕ್ತರು (ಯೋಜನೆಗಳು), ಬಿಬಿಂಎಂಪಿ, ಬೆಂಗಳೂರು
* ಅವಿನಾಶ್ ಮೆನನ್ ರಾಜೇಂದ್ರ- ಜಿಲ್ಲಾಧಿಕಾರಿ, ರಾಮನಗರ
* ಚಂದ್ರಶೇಖರ ನಾಯಕ: ಜಿಲ್ಲಾಧಿಕಾರಿ, ರಾಯಚೂರು
* ವಿಜಯ್ ಮಹಾಂತೇಶ್ ಬಿ. ದಾನಮ್ಮನವರ್- ಜಿಲ್ಲಾಧಿಕಾರಿ, ವಿಜಯಪುರ
Recommended Video













Click it and Unblock the Notifications