Electric Bike: ಇಂದಿನಿಂದ ಯುರೊಪ್ ದೇಶಗಳಿಗೆ ದೇಶದ ಮೊದಲ 'ಇವಿ ಬೈಕ್' ರಫ್ತು

ಬೆಂಗಳೂರು, ಸೆಪ್ಟಂಬರ್ 24: ಭಾರತದಲ್ಲಿ ಎಲೆಕ್ಟ್ರಿಕ್ ವಲಯದಲ್ಲಿ ಕ್ರಾಂತಿಗಳು ಸಂಭವಿಸುತ್ತಿವೆ. ಇವಿ ಬಳಕೆ ಹೆಚ್ಚಾದಂತೆಲ್ಲ ಉತ್ಪಾದನಾ ವಲಯಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಇದೀಗ ದೇಶದ ಮೊದಲ 'ಅಲ್ಟ್ರಾವಯಲೆಟ್ ಇ.ವಿ.‌ ಮೋಟಾರ್ ಸೈಕಲ್- ಎಫ್77' ವಿದೇಶಗಳಿಗೆ ಇಂದಿನಿಂದ ರಫ್ತಾಗುತ್ತಿದೆ. ಈ ರಪ್ತು ಕಾರ್ಯಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು.

ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯಲೆಟ್ ಇ.ವಿ.‌ ಮೋಟಾರ್ ಸೈಕಲ್- ಎಫ್77 ತಯಾರಿಸಿದ್ದಾರೆ. ಈ ಇವಿ ಬೈಕ್ ಯುರೋಪಿಯನ್ ದೇಶಗಳಿಗೆ ರಫ್ತು ವಹಿವಾಟಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಮಂಗಳವಾರ ಚಾಲನೆ ಕೊಟ್ಟರು.

Karnataka Started Export of Own Manufactured Ultraviolet Electric Motorcycle F77

ಯೂರೋಪ್ ದೇಶಗಳಿಗೆ ರಫ್ತು

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಇವಿ ಮೋಟಾರ್ ಸೈಕಲ್ ಉತ್ಪಾದನೆ ಮಾಡಲಾಗಿದೆ. ಎಲ್ಲ ಪರಿಶೀಲನೆ ಬಳಿಕ ಅತ್ಯಾಕರ್ಷಕ ಸ್ವದೇಶಿ, ಕನ್ನಡಿಗರು ತಯಾರಿಸಿದ ಈ ಬೈಕ್ ಯೂರೋಪ್ ದೇಶಗಳಿಗೆ ರಫ್ತು ಮಾಡಲು ಸಚಿವರು ಹಸಿರು ನಿಶಾನೆ ತೋರಿಸಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯು ಆಗಿದೆ.

ಇದೇ ವೇಳೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಯೂರೋಪಿನ ಹಲವು ರಾಷ್ಟ್ರಗಳಿಗೆ ನಡೆಯಲಿರುವ ಈ ರಫ್ತು ವಹಿವಾಟು ಕರ್ನಾಟಕ ಮತ್ತು ಭಾರತದಲ್ಲಿ ಕ್ರಾಂತಿಕಾರಿ ಮೈಲುಗಲ್ಲಾಗಿದೆ. ಇದು ನಮಗೊಂದು ರೀತಿ ಬೈಕ್ ವಲಯದಲ್ಲಿ ಟೆಸ್ಲಾ ರೀತಿಯದ್ದಾಗಿದೆ ಎಂದು ಅವರು ಬಣ್ಣಿಸಿದರು.

Karnataka Started Export of Own Manufactured Ultraviolet Electric Motorcycle F77

ಕನ್ನಡಿಗರಿಗೆ ಸರ್ಕಾರ ಸಂಪೂರ್ಣ ಸಹಕಾರ

ಕನ್ನಡಿಗರಾದ ನಾರಾಯಣ ಸುಬ್ರಹ್ಮಣ್ಯ ಮತ್ತು ನೀರಜ್ ರಾಜಮೋಹನ್ ಸೇರಿಕೊಂಡು ಸ್ಥಾಪಿಸಿರುವ ಕಂಪನಿಗೆ ಸರ್ಕಾರವು ಸಂಪೂರ್ಣ ಸಹಕಾರ ಕೊಡಲಿದೆ. ಇದಕ್ಕಾಗಿ ನಾವು ನಿಯಮಗಳಿಗೆ ಅಂಟಿಕೊಳ್ಳದೆ ಒಂದು ಹೆಜ್ಜೆ ಮುಂದಿಡಲೂ ಸಿದ್ಧ. ಕಂಪನಿಯ ಮುಖ್ಯಸ್ಥರನ್ನು ನಾನು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಅವರು ಆಶ್ವಾಸನೆ ನೀಡಿದರು.

ಅಲ್ಟ್ರಾವಯಲೆಟ್ ಇವಿ ಮೋಟಾರು ಸೈಕಲ್‌ ಜರ್ಮನಿ, ಟರ್ಕಿ, ಸ್ಪೇನ್ ದೇಶಗಳಿಗೆ ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಬೆಂಗಳೂರಿನ ಖ್ಯಾತಿಗೆ ಇನ್ನೊಂದು ಗರಿ ಮೂಡಿದೆ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುವೆ ಎಂದು ಅವರು ನುಡಿದರು.

ಕಂಪನಿಯ ಸಿಇಒ ಮತ್ತು ಸಂಸ್ಥಾಪಕ ನಾರಾಯಣ ಸುಬ್ರಹ್ಮಣ್ಯ, ಸಹ ಸಂಸ್ಥಾಪಕ ನೀರಜ್ ರಾಜಮೋಹನ್ ಅವರು ರಫ್ತು ವಹೀವಾಟು ಚಾಲನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+