Karnataka Rail: ರಾಜಧಾನಿಯಿಂದ ಈ ಜಿಲ್ಲೆಗಳಿಗೆ ವಿಶೇಷ ರೈಲು ಸೇವೆ: ಕೆಲವು ರೈಲುಗಳು ಭಾಗಶಃ ರದ್ದು!

Special Trains Announced: ನೈಋತ್ಯ ರೈಲ್ವೆಯು (SWR) ಕರ್ನಾಟಕದ ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ ನೀಡಿದೆ. ವರ್ಷಾಂತ್ಯದ ಕ್ರಿಸ್‌ಮಸ್ ಆಚರಣೆ ಮತ್ತು ಹೊಸ ವರ್ಷದ ಪ್ರಯುಕ್ತ ಜನರಿಗೆ ಒಂದಷ್ಟು ರಜೆಗಳು ಸಿಗಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆಗೆ ಸಂಚರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರ ಬೇಡಿಕೆ ಹಾಗೂ ಸಂಭವನೀಯ ದಟ್ಟಣೆ ತಡೆಗೆ ಬೆಂಗಳೂರಿನ ಯಶವಂತಪುರದಿಂದ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಅಲ್ಲದೇ ಅರಸಿಕರೆ ಜಂಕ್ಷನ್ ವ್ಯಾಪ್ತಿಯಲ್ಲಿನ ಕಾಮಗಾರಿ ಕಾರಣಕ್ಕೆ ಡಿಸೆಂಬರ್ 14 ರಿಂದ 27ರವರೆಗೆ ವಿವಿಧ ಕೆಲವು ರೈಲುಗಳು ಭಾಗಶಃ ರದ್ದಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿಗೆ ವಿಶೇಷ ರೈಲುಗಳ ಬಗ್ಗೆ ತಿಳಿಯುವುದಾದರೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಏಕಮಾರ್ಗ ಎಕ್ಸ್‌ಪ್ರೆಸ್ ರೈಲುಗಳನ್ನು SWR ಘೋಷಿಸಿದೆ. ಹಬ್ಬದ ವೇಳೆ ಜನರಿಗೆ ಆರಾಮದಾಯಕ ಸಂಚಾರ ನೀಡುವ ಉದ್ದೇಶದಿಂದ ಯಶವಂತಪುರ-ವಿಜಯಪುರ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ-ಯಶವಂತಪುರ ನಡುವೆ ವಿಶೇಷ ರೈಲುಗಳನ್ನು ಬಿಡಲಾಗಿದೆ. ಈ ರೈಲುಗಳ ವೇಳಾಪಟ್ಟಿ ಮಾಹಿತಿ ಇಲ್ಲಿದೆ..

Karnataka Rail Special Trains From Bengaluru to SSS Hubballi and Vijayapura During Christmas 2025

ಡಿಸೆಂಬರ್ 24 ರಂದು ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06277) ಬುಧವಾರ ರಾತ್ರಿ 9.50ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡುತ್ತದೆ. ತುಮಕೂರು, ಅರಸಿಕರೆ, ದಾವಣಗೆರೆ, ಹರಿಹರ, ಹುಬ್ಬಳ್ಳಿ ದಕ್ಷಿಣ, ಬಾದಾಮಿ, ಬಾಗಲಕೋಟೆ ಹಾಗೂ ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದ್ದು, ಮರು ದಿನ ಬೆಳಗ್ಗೆ 9.00ಕ್ಕೆ ವಿಜಯಪುರ ನಿಲ್ದಾಣ ತಲುಪುತ್ತದೆ. ಜನರಲ್ಲಿ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ಎಸಿ ತ್ರಿ ಟೈರ್ ಸೇರಿದಂತೆ ಈ ವಿಶೇಷ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದೆ.

ಮತ್ತೊಂದು ಎಸ್‌ಎಸ್‌ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (07379) ಇದೇ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿದೆ. ಡಿಸೆಂಬರ್ 24 ಬುಧವಾರ ಮಧ್ಯಾಹ್ನ 12.00ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುತ್ತದೆ. ಅಲ್ಲಿಂದ ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಅರಸಿಕರೆ ಮತ್ತು ತುಮಕೂರು ಮಾರ್ಗವಾಗಿ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬರಲಿದೆ. ಈ ರೈಲು ಸಹ 16 ಬೋಗಿಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರು ಐಆರ್‌ಸಿಟಿ ಆಪ್, ಇಲ್ಲವೇ ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 139ಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗಶಃ ರದ್ದಾದ ರೈಲುಗಳು (ಡಿ.14 ರಿಂದ 27)

ಇದೇ ಡಿಸೆಂಬರ್ 14 ರಿಂದ 27ರವರೆಗೆ (ಶುಕ್ರವಾರ ಹೊರತುಪಡಿಸಿ) ಅರಸೀಕೆರೆ ಯಾರ್ಡ್‌ನಲ್ಲಿ ಪ್ಲಾಟ್‌ಫಾರ್ಮ್‌ ಶೆಲ್ಟ‌ರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಈ ಮಾಗದಲ್ಲಿ ಓಡಾಡಬೇಕಿದ್ದ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಗಮನಿಸಿ ಪ್ರಯಾಣದ ಯೋಜನೆ ರೂಪಿಸಿಕೊಳ್ಳಬೇಕಿದೆ.

* ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್‌ ರೈಲಿನ (16214) ಸಂಚಾರ ಡಿಸೆಂಬರ್ 14 ರಿಂದ 26ರವರೆಗೆ ಬೀರೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಂಡಿದೆ. ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ.

* ಅರಸೀಕೆರೆ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲಿನ (16213) ಸಂಚಾರ ಇದೇ ಡಿಸೆಂಬರ್ 15 ರಿಂದ 27 ರವರೆಗೆ, ಅರಸೀಕೆರೆ ಮತ್ತು ಬೀರೂರು ನಡುವೆ ಭಾಗಶಃ ರದ್ದಾಗಿದೆ. ನಿಗದಿತ ಸಮಯಕ್ಕೆ ಬೀರೂರು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ.

* ಅರಸೀಕೆರೆ-ಮೈಸೂರು ಪ್ಯಾಸೆಂಜ‌ರ್ ರೈಲು (56267) ಸಂಚಾರ ಡಿಸೆಂಬರ್ 15 ರಿಂದ 27 ರತನಕ ಅರಸೀಕೆರೆ ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದ್ದು, ಹಾಸನದಿಂದ ಸೂಕ್ತ ಸಮಯಕ್ಕೆ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+