ರಾಜ್ಯಾದ್ಯಂತ ಇಂದಿನಿಂದ ಲೋಡ್ ಶೆಡ್ಡಿಂಗ್
ಬೆಂಗಳೂರು, ಮೇ .5:ಎರಡು ವಾರದ ಹಿಂದೆಯಷ್ಟೇ ಈ ಬಾರಿ ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಹೇಳಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಈಗ ಉಲ್ಟಾ ಡೈಲಾಗ್ ಹೊಡೆದಿದ್ದು ಇಂದಿನಿಂದಲೇ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಹೇಳಿದ್ದಾರೆ.[ಲೋಡ್ ಶೆಡ್ಡಿಂಗ್ ಮಾಡೋಲ್ಲ, ಸಚಿವರ ಭರವಸೆ]
ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿರುವ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಸಚಿವರು ಸಮರ್ಥನೆ ನೀಡಿದ್ದಾರೆ.
ಈ ಹಿಂದೆ 8522 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದರೆ, ಈಗ ಕೇವಲ 7527 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ. ಈ ವಿದ್ಯುತ್‌ನಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೂ ಸುಮಾರು 650 ಮೆಗಾವಾಟ್ ವಿದ್ಯುತ್ ರವಾನೆ ಮಾಡಬೇಕಿದೆ. ಒಟ್ಟು 1165 ಮೆಗಾವ್ಯಾಟ್ ವಿದ್ಯುತ್ ಕೊರತೆ ರಾಜ್ಯದಲ್ಲಿರುವುರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿದ್ಯುತ್ ಕಂಪೆನಿಗಳು ಲೋಕಸಭಾ ಚುನಾವಣೆ ನಡೆಯುವ ಮೊದಲೇ ಲೋಡ್‌ಶೆಡ್ಡಿಂಗ್ ಹೇರುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದವು. ಆದರೆ ಆ ಸಮಯದಲ್ಲಿ ಈ ಸಲಹೆಯನ್ನು ತಡೆ ಹಿಡಿದ ಸರ್ಕಾರ ಈಗ ಲೋಡ್ ಶೆಡ್ಡಿಂಗ್ ಹೇರಲು ಮುಂದಾಗಿದೆ.











Click it and Unblock the Notifications