Gandaberunda: ಕರ್ನಾಟಕ ಶಾಸಕರಿಗೆ ಗಂಡಬೇರುಂಡ ಬ್ಯಾಡ್ಜ್‌ಗಳು!
ಕರ್ನಾಟಕದ ಅಧಿಕೃತ ಲಾಂಛನ ಗಂಡಬೇರುಂಡ ಇನ್ನು ಶಾಸಕರ ಹೆಗಲಿನಲ್ಲಿ ರಾರಾಜಿಸಲಿದೆ. ಕರ್ನಾಟಕದ ಉಭಯ ಸದನಗಳ ಶಾಸಕರು ಇನ್ನು ಮುಂದೆ ಅಧಿವೇಶನಗಳಿಗೆ ಹಾಜರಾಗುವಾಗ ಗಂಡಬೇರುಂಡ ಲಾಂಛನವನ್ನು ಧರಿಸಲಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಿಂದ ಶಾಸಕರು ಮತ್ತು ಎಂಎಲ್‌ಸಿಗಳು ತಮ್ಮ ಭುಜದ ಎಡಭಾಗದಲ್ಲಿ ಬ್ಯಾಡ್ಜ್‌ಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಶಾಸಕರು ರಾಜ್ಯ ಮತ್ತು ದೇಶದ ಹೊರಗೆ ಪ್ರಯಾಣಿಸುವಾಗ ಅವುಗಳನ್ನು ಧರಿಸಬೇಕೆಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 4 ರಂದು ಬೆಳಗಾವಿ ಅಧಿವೇಶನ ಆರಂಭವಾಗಲಿದೆ.

"ನಾವು ಇದನ್ನು ಎಲ್ಲಾ ಶಾಸಕರಿಗೆ ಕಡ್ಡಾಯ ಮಾಡಲು ಸಾಧ್ಯವಿಲ್ಲ. ಆದರೆ ಈ ಬ್ಯಾಡ್ಜ್ ಖಂಡಿತವಾಗಿಯೂ ಸೌಂದರ್ಯ ಮತ್ತು ಸೊಗಸಾದ ನೋಟವನ್ನು ನೀಡುತ್ತದೆ. ಇದು ರಾಜ್ಯದ ಲಾಂಛನವನ್ನು ಹೊಂದಿರುವುದರಿಂದ ಪ್ರತಿಯೊಬ್ಬ ಶಾಸಕರಿಗೂ ಹೆಮ್ಮೆಯಾಗುತ್ತದೆ," ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸ್ಪೀಕರ್ ಯು.ಟಿ. ಖಾದರ್ ಕಲ್ಪನೆ
ಇತ್ತೀಚೆಗೆ ಹೊರರಾಜ್ಯದಿಂದ ಚುನಾಯಿತ ಪ್ರತಿನಿಧಿಗಳು ಅವರನ್ನು ಭೇಟಿಯಾದಾಗ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಬ್ಯಾಡ್ಜ್ ಕಲ್ಪನೆ ಬಂದಿತ್ತು. ವಿದೇಶಿ ಪ್ರತಿನಿಧಿಗಳು ವಿಶಿಷ್ಟ ಬ್ಯಾಡ್ಜ್ ಧರಿಸಿರುವುದನ್ನು ಅವರು ಗಮನಿಸಿದರು ಮತ್ತು ರಾಜ್ಯದ ಶಾಸಕರಿಗೂ ಇದೇ ರೀತಿಯ ಬ್ಯಾಡ್ಜ್‌ಗಳನ್ನು ಪಡೆಯಲು ಚಿಂತನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ಯಾಡ್ಜ್ ಅನ್ನು ಹೆಚ್ಚಾಗಿ ಚಿನ್ನದ ಲೇಪನದೊಂದಿಗೆ ಹಿತ್ತಾಳೆಯಿಂದ ತಯಾರಿಸಲಾಗುತ್ತದೆ. ಗಂಡಬೇರುಂಡ ಹಿಂದೂ ಪುರಾಣಗಳಲ್ಲಿ ಎರಡು ತಲೆಯ ಪಕ್ಷಿಯಾಗಿದ್ದು ಇದನ್ನು ಭಗವಾನ್ ವಿಷ್ಣುವಿನ ರೂಪವೆಂದು ನಂಬಲಾಗಿದೆ. ಈ ಲಾಂಛನವನ್ನು ಅಂದಿನ ಮೈಸೂರು ರಾಜ್ಯವು ಬಳಸುತ್ತಿತ್ತು ಮತ್ತು 50 ವರ್ಷಗಳ ಹಿಂದೆ ಮೈಸೂರು ರಾಜ್ಯವು ಕರ್ನಾಟಕವಾದ ನಂತರವೂ ರಾಜ್ಯ ಲಾಂಛನವಾಗಿ ಮುಂದುವರೆಯಿತು. ಆರಂಭದಲ್ಲಿ ಶಾಸಕರಿಗೆ ಬ್ಯಾಡ್ಜ್‌ಗಳನ್ನು ಪಡೆಯುವ ಆಲೋಚನೆ ಇತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಶಾಸಕರಿಗೆ ಬ್ಯಾಡ್ಜ್‌ಗಳನ್ನು ಪಡೆಯುವ ಆಲೋಚನೆ ಇತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ವಿಧಾನಪರಿಷತ್ ಸದಸ್ಯರು ಆಸಕ್ತಿ ತೋರಿದ ನಂತರ ಅವರಿಗೂ ಬ್ಯಾಡ್ಜ್‌ಗಳನ್ನು ತಯಾರಿಸಲಾಗುತ್ತಿದೆ. "ಪ್ರತಿ ಬ್ಯಾಡ್ಜ್‌ಗೆ ಸುಮಾರು 2,800 ರೂಪಾಯಿ ವೆಚ್ಚವಾಗುತ್ತದೆ ಮತ್ತು ಪ್ರತಿ ಶಾಸಕರು ಮೂರು ಸೆಟ್‌ಗಳನ್ನು ಪಡೆಯುತ್ತಾರೆ. ಇದರ ಸಂಪೂರ್ಣ ವೆಚ್ಚ ಸುಮಾರು 20 ಲಕ್ಷ ರೂ. ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ" ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಸೋಮವಾರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಗಂಡಬೇರುಂಡ ಹೊಂದಿದ್ದ ಸರವನ್ನು ಧರಿಸಿ ಗಮನ ಸೆಳೆದಿದ್ದರು. ಇನ್ಫೋಸಿಸ್ ಸ್ಥಾಪಕರಾದ ನಾರಾಯಣಮೂರ್ತಿ - ಸುಧಾಮೂರ್ತಿ ಅವರ ಮಗಳಾದ ಅಕ್ಷತಾ ಅವರು ಕರ್ನಾಟಕದ ನಂಟು ಹೊಂದಿದ್ದು, ಗಂಡಬೇರುಂಡ ಧರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications