ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭವಾನಿ ಸಿಂಗ್ ಮೇಲೆ ನ್ಯಾ. ಕುಮಾರಸ್ವಾಮಿ ಅಸಮಾಧಾನ

By Kiran B Hegde
|
Google Oneindia Kannada News

ಬೆಂಗಳೂರು, ಜ. 6: ಜಯಲಲಿತಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈ ಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್. ಕುಮಾರಸ್ವಾಮಿ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಭವಾನಿ ಸಿಂಗ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈ ಕೋರ್ಟ್‌ನಲ್ಲಿ ಮಂಗಳವಾರ ಜಯಲಲಿತಾ ಪ್ರಕರಣದ ವಿಚಾರಣೆ ನಡೆಯಿತು. ಆಗ ಜಯಲಲಿತಾ ಅವರು ದತ್ತುಪುತ್ರ ಸುಧಾಕರನ್ ಮದುವೆಯಲ್ಲಿ ಕೋಟ್ಯಂತರ ರು. ಹಣ ಖರ್ಚು ಮಾಡಿದ್ದಾರೆ ಎಂಬ ಆರೋಪವನ್ನು ವಕೀಲ ಕುಮಾರ್ ನಿರಾಕರಿಸಿದರು. ಮದುವೆಯ ವ್ಯವಹಾರಗಳು ಚೆಕ್ ಮೂಲಕವೇ ನಡೆದಿವೆ. ಆದ್ದರಿಂದ ಮದುವೆ ವೆಚ್ಚಕ್ಕೆ ಚೆಕ್‌ ಪ್ರಬಲ ಸಾಕ್ಷಿಯಾಗಿದೆ ಎಂದು ಸಮರ್ಥಿಸಿಕೊಂಡರು.

jaya

ಆಗ ಈ ಕುರಿತು ಭವಾನಿ ಸಿಂಗ್ ಅವರ ಪ್ರತಿಕ್ರಿಯೆಯನ್ನು ನ್ಯಾಯಮೂರ್ತಿಗಳು ಬಯಸಿದರು. ಆದರೆ, ಯಾವುದೇ ಸೂಕ್ತ ಉತ್ತರ ನೀಡದ ಭವಾನಿ ಸಿಂಗ್ "ಜಯಾ ಪರ ವಕೀಲರ ಹೇಳಿಕೆಯನ್ನು ನಿಮಗೆ ಇಷ್ಟ ಬಂದರೆ ದಾಖಲಿಸಿಕೊಳ್ಳಿ" ಎಂದು ಹೇಳಿದರು. [ಜಯಲಲಿತಾ ಕೇಸಲ್ಲಿ ಭಾರೀ ಸಂಕಷ್ಟ ಎದುರಿಸಿದ್ದೇನೆ]

ನಂತರ ನ್ಯಾಯಮೂರ್ತಿಗಳು "1991ಕ್ಕಿಂತ ಮೊದಲು ಜಯಲಲಿತಾ ಆಸ್ತಿ ಎಷ್ಟಿತ್ತು ಎಂಬುದರ ಕುರಿತು ನಿಮ್ಮ ಹತ್ತಿರ ವಿವರಗಳಿವೆಯೇ?" ಎಂದು ಭವಾನಿ ಸಿಂಗ್ ಅವರಲ್ಲಿ ಪ್ರಶ್ನಿಸಿದರು.

ಆಗಲೂ ಭವಾನಿ ಸಿಂಗ್ ಸರಿಯಾಗಿ ಪ್ರತಿಕ್ರಿಯಿಸದೆ ಮೌನವಾಗಿ ಉಳಿದರು. ಆಗ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವರ್ತನೆಯ ಕುರಿತು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.

English summary
Karnataka High Court Special Judge Kumarasamay upset over the special public prosecutor Bhawani Singh's long silent during the Jayalalithaa appeal case tiral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X