Get Updates
Get notified of breaking news, exclusive insights, and must-see stories!

ಬೆಂಗಳೂರಿನ ಹೊರೆ ತಗ್ಗಿಸಲು 5 ಸೆಟಲೈಟ್‌ ಟೌನ್‌ಗಳ ನಿರ್ಮಾಣ- ಸಿದ್ದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಯಾರಿಗೆಲ್ಲಾ ಅನುಕೂಲ?

ಬೆಂಗಳೂರು, ಜೂನ್‌ 09: ರಾಜ್ಯ ರಾಜಧಾನಿಯ ಮೇಲಿರುವ ಅಭಿವೃದ್ಧಿ ಹೊರೆಯನ್ನು ತಗ್ಗಿಸಲು ಕರ್ನಾಟಕ ಸರ್ಕಾರವು ಬೆಂಗಳೂರಿನ ಹೊರಗೆ ಐದು ಹೈಟೆಕ್ ಸೆಟಲೈಟ್‌ ಟೌನ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಈ ಮೂಲಕ ಉಪಗ್ರಹ ಪಟ್ಟಣಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಅವರು ಕರ್ನಾಟಕ ಗೃಹ ಮಂಡಳಿಗೆ (ಕೆಎಚ್‌ಬಿ) ನಿರ್ದೇಶನ ನೀಡಿದರು.

Karnataka Govt plans 5 satellite towns around Bengaluru

ಪ್ರತಿ ಉದ್ದೇಶಿತ ಉಪಗ್ರಹ ಪಟ್ಟಣವು 500 ಎಕರೆಗಳಲ್ಲಿ 1,000 ವಿಲ್ಲಾಗಳನ್ನು ಹೊಂದಿರುತ್ತದೆ. ಅದು ಸ್ವಚ್ಛ ಹಾಗೂ ಸುಂದರವಾದ ಪರಿಸರವನ್ನು ಹೊಂದಿರಲಿದೆ ಎಂದು ಜೂನ್ 7 ರಂದು ಕೆಹೆಚ್‌ಬಿ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಚಿವರು ಹೇಳಿದರು.

ಪ್ರತಿ ಉಪಗ್ರಹ ಪಟ್ಟಣವನ್ನು 2,000 ಎಕರೆಗಳಲ್ಲಿ ವಿಸ್ತರಿಸಬಹುದು. ಒಟ್ಟಾರೆಯಾಗಿ ಸುಮಾರು 1.50 ಲಕ್ಷ ನಿವೇಶನಗಳು ಮತ್ತು 25,000 ಮನೆಗಳನ್ನು ಒಳಗೊಂಡಿರುತ್ತದೆ ಎಂದು ಸಚಿವ ಜಮೀರ್‌ ತಿಳಿಸಿದರು.

'ಬೆಂಗಳೂರು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ. ನಗರದ ಹೊರವಲಯಗಳಿಗೆ ಹಲವಾರು ಕೈಗಾರಿಕೋದ್ಯಮಿಗಳು ಮತ್ತು ವಿವಿಐಪಿಗಳು ವಿದೇಶದಿಂದ ಭೇಟಿ ನೀಡುವುದರಿಂದ ವಿಲ್ಲಾಗಳಿಗೆ ಬೇಡಿಕೆ ಹೆಚ್ಚಿದೆ. ಈ ಎರಡು ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಶೀಘ್ರವಾಗಿ ಗುರುತಿಸಬೇಕು' ಎಂದು ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

Karnataka Govt plans 5 satellite towns around Bengaluru

ಮುಂದಿನ ವಾರದ ಅಂತಿಮ ಸಭೆಯ ನಂತರ ಆಯಕಟ್ಟಿನ ಸ್ಥಳಗಳು ಮತ್ತು ಹೂಡಿಕೆಯನ್ನು ನಿರ್ಧರಿಸಲಾಗುವುದು ಎಂದು ಕೆಎಚ್‌ಬಿಯ ಮೂಲಗಳು ಮನಿಕಂಟ್ರೋಲ್‌ ಪೋರ್ಟ್‌ಲ್‌ಗೆ ತಿಳಿಸಿವೆ.

ಪ್ರಸ್ತಾವನೆಯ ಪ್ರಕಾರ, ಭೂಸ್ವಾಧೀನ ವೆಚ್ಚಗಳು ಕೆಎಚ್‌ಬಿಗೆ ಹೊರೆಯಾಗದಂತೆ ಭೂಮಾಲೀಕರೊಂದಿಗೆ 50:50 ಪಾಲುದಾರಿಕೆಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು.

ಪ್ರಸ್ತುತ, ಮೂಲಗಳು ಹೇಳುವಂತೆ, ಕೆಎಚ್‌ಬಿ ಬೆಂಗಳೂರಿನ ನೈಋತ್ಯ ಭಾಗದಲ್ಲಿ ಮೈಸೂರು ರಸ್ತೆಯ ಪಕ್ಕದಲ್ಲಿ ಪ್ರತ್ಯೇಕ 2,000 ಎಕರೆ ಟೌನ್‌ಶಿಪ್ ಅನ್ನು ಯೋಜಿಸುತ್ತಿದೆ. ಹೊಸ ಟೌನ್‌ಶಿಪ್ ಅನ್ನು ಬಿಜಿಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಪಕ್ಕದಲ್ಲಿ ನಿರ್ಮಿಸಲಾಗುವುದು. 10,000 ಕ್ಕೂ ಹೆಚ್ಚು ವಸತಿ ಘಟಕಗಳನ್ನು ಇದು ಹೊಂದಿರುತ್ತದೆ.

Karnataka Govt plans 5 satellite towns around Bengaluru

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮುಂದೆ ಇನ್ನೂ 1,000 ಎಕರೆ ಟೌನ್‌ಶಿಪ್ ನಿರ್ಮಾಣಗೊಳ್ಳುತ್ತಿದೆ ಎಂದು ಇಲಾಖೆ ಈ ಹಿಂದೆ ಮನಿ ಕಂಟ್ರೋಲ್‌ಗೆ ತಿಳಿಸಿತ್ತು.

ಈ ಟೌನ್‌ಶಿಪ್‌ಗಳು ಬೆಂಗಳೂರಿನ ಟ್ರಾಫಿಕ್‌ ಹಾಗೂ ಮಾಲಿನ್ಯ ಸಮಸ್ಯೆಯನ್ನು ತಗ್ಗಿಸಲು ಸಹಕಾರಿಯಾಗಲಿವೆ ಎಂದು ನಂಬಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+