ಸರ್ಕಾರದಿಂದ ಬಿಬಿಎಂಪಿಗೆ ಅಧಿಕ ಸಂಖ್ಯೆಯಲ್ಲಿ ಸಿವಿಲ್ ಎಂಜಿನಿಯರ್ಸ್ ನೇಮಕ ಶೀಘ್ರ
ಬೆಂಗಳೂರು, ಸೆಪ್ಟಂಬರ್ 04: ಬರೋಬ್ಬರಿ ಒಂದು ದಶಕದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಒಟ್ಟು ಸುಮಾರು 150 ಮಂದಿ ಸಿವಿಲ್ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಬರುವ ದಿನಗಳಲ್ಲಿ ನಗರದ ವಿವಿಧ ವಿಭಾಗಗಳ ಕೆಲಸಗಳು ಸುಧಾರಣೆಗೆ ಸರ್ಕಾರ ನಿರ್ಧಾರ ಸಹಾಯವಾಗಲಿದೆ.
ಸುಮಾರು 13 ವರ್ಷಗಳ ನಂತರ ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ಬಿಬಿಎಂಪಿಗೆ 150 ಸಿವಿಲ್ ಎಂಜಿನಿಯರ್‌ಗಳನ್ನು ನೇಮಕವಾಗಲಿದ್ದಾರೆ. ಹಾಲಿ ಬಿಬಿಎಂಪಿ ಅಸ್ತಿತ್ವದಲ್ಲಿರುವ ಅಧಿಕಾರಿಗಳು/ಸಿಬ್ಬಂದಿಯ ಮೇಲೆ ಇರುವ ಹೊರೆ ಕಡಿಮೆ ಆಗಲಿದೆ. ಅದಷ್ಟೇ ಅಲ್ಲದೇ ಸೇವಾ ಜವಾಬ್ದಾರಿಯನ್ನು ಸುಧಾರಣೆ ಇದು ನೆರವಾಗಲಿದೆ ಎಂದು ಡಿಎಚ್ ವರದಿ ಮಾಡಿದೆ.

ಇತ್ತೀಚೆಗೆ ಕೆಪಿಎಸ್‌ಸಿಯು ಹೊರಡಿಸಿದ ಆದೇಶದಲ್ಲಿ ನಗರಾಭಿವೃದ್ಧಿ ಇಲಾಖೆ (ಯುಡಿಡಿ) 100 ಸಹಾಯಕ ಎಂಜಿನಿಯರ್‌ಗಳು ಹಾಗೂ 50 ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ ಅನುಮೋದನೆ ನೀಡಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಆದೇಶದಂತೆ ಇಲಾಖೆಯು ಬಿಬಿಎಂಪಿಗೆ KPSC ಮೂಲಕ ನೇಮಕಗೊಂಡ ಎಂಜಿನಿಯರ್‌ಗಳಿಗೆ ಅನುಗುಣವಾಗಿ ಹೊರಗುತ್ತಿಗೆ ಪಡೆದ ಎಂಜಿನಿಯರ್‌ಗಳನ್ನು ಅಗ್ನಿಶಾಮಕಕ್ಕೆ ನಿಯೋಜಿಸಲು ಸೂಚಿಸಿದೆ.
2009-10ರಲ್ಲಿ ಆಗಿದ್ದ ನೇಮಕಾತಿ
ಈ ಹಿಂದೆ 2009-10ರಲ್ಲಿ ಬಿಬಿಎಂಪಿಗೆ 120 ಖಾಯಂ ಇಂಜಿನಿಯರ್‌ಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಅದೇ ಕೊನೆ ಮತ್ತೆ ನೇಮಕಾತಿ ನಡೆದಿರಲಿಲ್ಲ. ನಂತರ ಅಲ್ಪಾವಧಿಗೆ ನಿಯೋಜಿತ ಎಂಜಿನಿಯರ್‌ಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಈ ಮಧ್ಯೆ ಪಾಲಿಕೆಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KEONICS) ಮೂಲಕ ಗುತ್ತಿಗೆ ಆಧಾರದಲ್ಲಿ ಸಿವಿಲ್ ಎಂಜಿನಿಯರ್‌ಗಳ ನೇಮಕಾತಿ ಆರಂಭಿಸಿತ್ತು. ಇದೆಲ್ಲ ಮನಗಂಡು ಸರ್ಕಾರ ತುರ್ತು ಸ್ಪಂದಿಸಿ ಕೆಪಿಎಸ್‌ಸಿ ಮೂಲಕ ಕಿರಿಯ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಬೇರೆ ಬೇರೆ ಇಲಾಖೆಗಳಿಂದ ನಿಯೋಜನೆಗೊಳ್ಳುವ ಇಂಜಿನಿಯರ್‌ಗಳು ಬಿಬಿಎಂಪಿಯಲ್ಲಿ ಅಗತ್ಯ ಅರ್ಹತೆ ಪೂರೈಸದೆ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಅವರಿಗೆ ಪಾಲಿಕ ಸಭೆ, ಸಂದರ್ಶನ ನಡೆಸಿಲ್ಲ. ಅಂತವರು ಇಲ್ಲಿ ಖಾಯಂ ಸಿಬ್ಬಂದಿಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ.
ಕಾಲೇಜುಗಳಿಂದ ಅರ್ಜಿಗಳು
ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಅಧಿಕವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗು ನಿರೀಕ್ಷೆಗಳು ಇವೆ. ನೇಮಕಾತಿ ಮಾರ್ಗಸೂಚಿಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. 2009-2010ರಲ್ಲಿ ಸರ್ಕಾರವು ಲಿಖಿತ ಪರೀಕ್ಷೆ ನಡೆಸದೇ ಕಟ್-ಆಫ್ ಮಾರ್ಕ್ಸ್ ನಿಗದಿ ಮಾಡಿ ನೇರ ಸಂದರ್ಶನ ಮೂಲಕ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಇದೀಗ ಮಾರ್ಗಸೂಚಿ ಹೊರಡಿಸಿದ ಮೇಲೆ ಈ ಬಾರಿ ನೇಮಕ ಪ್ರಕ್ರಿಯೆ ಹೇಗಿರಲಿದೆ ಎಂದು ತಿಳಿಯಲಿದೆ.












Click it and Unblock the Notifications