ಹಾಟ್‌ಸ್ಪಾಟ್‌ಗಳ ಜನರ ಸಹಾಯಕ್ಕೆ ಬಂದ ರಾಜ್ಯ ಸರ್ಕಾರದ ಆಪ್ತಮಿತ್ರ
ಬೆಂಗಳೂರು, ಏಪ್ರಿಲ್ 22: ''ಸಾರ್ವಜನಿಕರು ಜ್ವರ, ಒಣಕೆಮ್ಮು, ಉಸಿರಾಟದ ತೊಂದರೆ ಅಥವಾ ಇನ್‍ಪ್ಲೂಯೆನ್ಜಾ ಮಾದರಿಯ ರೋಗ ಲಕ್ಷಣಗಳಿದ್ದಲ್ಲಿ ಆಪ್ತ ಮಿತ್ರ ಸಹಾಯವಾಣಿ "14410" ಸಂಖ್ಯೆಗೆ ಕರೆ ಮಾಡಿ ಸಲಹೆ ಹಾಗೂ ಮಾರ್ಗದರ್ಶನ ಪಡೆಯಬಹುದು'' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಬುಧವಾರ ತಮ್ಮ ಗೃಹ ಕಛೇರಿ ಕೃಷ್ಣದಲ್ಲಿ ಆಪ್ತ ಮಿತ್ರ ಸಹಾಯವಾಣಿ ಹಾಗೂ ಆಪ್ತಮಿತ್ರ ಮೊಬೈಲ್ ಆಪ್‌ಗೆ ಚಾಲನೆ ನೀಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
''ಕೋವಿಡ್ ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳಿಗೆ ಸಹಾಯವಾಣಿ ಮೂಲಕ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಕೋವಿಡ್ -19 ಸೊಂಕಿನ ಲಕ್ಷಣ ಇರುವ ವ್ಯಕ್ತಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುವ ಮೂಲಕ ರೋಗ ಹರಡುವ ಸಾಧ್ಯತೆಗಳನ್ನು ಸಹ ಕಡಿಮೆ ಮಾಡಬಹುದಾಗಿದೆ'' ಎಂದು ಹೇಳಿದರು.

ಅಪಾಯ ಹೊಂದಿರುವವರನ್ನು ಗುರುತಿಸುವುದು
ಕರ್ನಾಟಕ ರಾಜ್ಯದ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಕೊರೋನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ವಾಸಿಸುವವರನ್ನು ತಲುಪಿ ಇನ್‍ಪ್ಲೂನ್ಜಾ ತರಹ ಅನಾರೋಗ್ಯ / ತೀವ್ರ ಉಸಿರಾಟದ ಸೋಂಕು / ಕರೋನಾ ರೋಗ ಲಕ್ಷಣಗಳಂತಹ ಅಥವಾ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯ ಹೊಂದಿರುವವರನ್ನು ಗುರುತಿಸುವುದು ಆಪ್ತಮಿತ್ರ ಮೊಬೈಲ್ ಆಪ್ ಮತ್ತು ಸಹಾಯವಾಣಿ ಉದ್ದೇಶ ಹೊಂದಿದೆ.

ಟೆಲಿಮೆಡಿಸಿನ್ ಬೆಂಬಲದೊಂದಿಗೆ
ಕಡಿಮೆ ಅಪಾಯವಿರುವ ಆದರೆ, ಕೊರೋನಾ ತರಹದ ಕೆಲವು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರಿಗೆ ಕೌಂಟರ್‍ನಲ್ಲಿ ದೊರೆಯುವ ಔಷಧಿಗಳನ್ನು ಟೆಲಿಮೆಡಿಸಿನ್ ಬೆಂಬಲದೊಂದಿಗೆ ಒದಗಿಸುವುದು ಮತ್ತು ಸ್ವಯಂ - ದಿಗ್ಬಂಧನಕ್ಕೆ ಒಳಪಡುವ ಬಗ್ಗೆ ಅವರಿಗೆ ಸಮಾಲೋಚಿಸಿ ಸೂಚಿಸುವುದು ಆಪ್ತಮಿತ್ರ ಮೊಬೈಲ್ ಆಪ್ ಮತ್ತು ಸಹಾಯವಾಣಿ ಉದ್ದೇಶ ಹೊಂದಿದೆ.

ಕೊರೊನಾ ಟ್ರ್ಯಾಕಿಂಗ್
ಕಡಿಮೆ ಅಪಾಯದ ಎಲ್ಲಾ ಪ್ರಕರಣಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಅವರುಗಳನ್ನು ಹಿಂಬಾಲಿಸುವುದು, ಮಧ್ಯಮದಿಂದ ಹೆಚ್ಚಿನ ಹಂತದವರೆಗೆ ಕೊರೋನಾ ಅಪಾಯ ಹೊಂದಿರುವವರನ್ನು ನಿರ್ಧರಿಸುವುದು ಹಾಗೂ ಅವರನ್ನು ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಜ್ವರದ ಕ್ಲಿನಿಕ್ ಅಥವಾ ಕೊರೋನಾ ಸ್ಕ್ರೀನಿಂಗ್ ಕೇಂದ್ರಗಳಿಗೆ ಪಡೆಯುವುದು, ಹಾಟ್ ಸ್ಪಾಟ್‍ಗಳು, ಕ್ಲಸ್ಟರ್‍ಗಳು ಮತ್ತು ರೋಗ ಹೊರ ಹೊಮ್ಮುತ್ತಿರುವ ಪ್ರದೇಶಗಳಲ್ಲಿ ದಿಗ್ಬಂದನ ಕ್ರಮಗಳನ್ನು ಹೆಚ್ಚಿಸುವುದು ಮತ್ತು ಇದೇ ರೀತಿ ರೋಗ ಲಕ್ಷಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಪ್ರಸ್ತುತ ಲಾಕ್‌ಡೌನ್ ಸಡಿಲಗೊಳಿಸುವ ನಿರ್ಧಾರಗಳನ್ನು ತಿಳಿಯಲು ಆಪ್ತಮಿತ್ರ ಮೊಬೈಲ್ ಆಪ್ ಮತ್ತು ಸಹಾಯವಾಣಿ ಸಹಾಯವಾಗಲಿದೆ.

ಒಟ್ಟು 4 ಸ್ಥಳಗಳಲ್ಲಿ ಕಾರ್ಯಾರಂಭ
ಆಪ್ತಮಿತ್ರ ಸಹಾಯವಾಣಿ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರಿನ 4 ಕೇಂದ್ರಗಳಲ್ಲಿ, ಮೈಸೂರು ಮತ್ತು ಮಂಗಳೂರು (ಬಂಟ್ವಾಳಾ) ಸೇರಿ ಒಟ್ಟು 4 ಸ್ಥಳಗಳಲ್ಲಿ ಒಟ್ಟು 300 ಆಸನ ಸಾಮರ್ಥ್ಯ ಹೊಂದಿರುವ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಎರಡು ಹಂತದ ವ್ಯವಸ್ಥೆಯಾಗಿದ್ದು, ಮೊದಲ ಹಂತವನ್ನು ಆಯುಷ್ / ನರ್ಸಿಂಗ್ / ಫಾರ್ಮಾ ಅಂತಿಮ ವರ್ಷದ ಸ್ವಯಂಸೇವಕ ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ. ಎರಡನೇ ಹಂತವನ್ನು ಎಂಬಿಬಿಎಸ್ / ಇಂಟಿಗ್ರೇಡ್ ಮೆಡಿಸಿನ್ / ಆಯುಷ್ ಸ್ವಯಂಸೇವಕ ವೈದ್ಯರು ನಿರ್ವಹಿಸಲಿದ್ದಾರೆ.












Click it and Unblock the Notifications