ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಮಿಕಂಡಕ್ಟರ್, ಎಫ್‌ಎಂಸಿಜಿಗಳಿಗೆ ಪಿಎಲ್‍ಐ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ : ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15 : ಕರ್ನಾಟಕ ಸೆಮಿಕಂಡಕ್ಟರ್ ಹಾಗೂ ಎಫ್‍ಎಂಸಿಜಿಗಳಿಗೆ ಪಿಎಲ್‍ಐ(ಉತ್ಪಾದನಾ ಆಧಾರಿತ ಪ್ರೋತ್ಸಾಹಕ)ಗಳನ್ನು ನೀಡುತ್ತಿರುವ ಮೊದಲ ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಘು ಉದ್ಯೋಗ ಭಾರತಿ ಹಾಗೂ ಕರ್ನಾಟಕ ಐ.ಎಂ.ಎಸ್ ಪ್ರತಿಷ್ಠಾನದ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ-2022 ನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆಯನ್ನು ಸರ್ಕಾರ ಮನಗಂಡಿದೆ. ಸರ್ಕಾರ ಕೈಗಾರಿಕಾ ಸ್ನೇಹಿಯಾದ ನೀತಿಗಳು, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಎಬಿಸಿ ಪಾಲಿಸಿ, ಮುಂದಿನ ಐದು ವರ್ಷಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಚೆನ್ನೈ ಬಾಂಬೆ ಕಾರಿಡಾರ್‍ನಲ್ಲಿ ಕೈಗಾರಿಕಾ ಟೌನ್, ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ, ಬೆಳಗಾವಿಗಳಲ್ಲಿ ಕೈಗಾರಿಕಾ ಅಭಿವೃದ್ಧಿ. ಗುಲ್ಬರ್ಗಾ, ಯಾದಗಿರಿ, ಮೈಸೂರುಗಳಲ್ಲಿ ಕೈಗಾರಿಕಾ ಪಾರ್ಕ್‍ಗಳ ಸ್ಥಾಪನೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಆಗುತ್ತಿದೆ. 400 ಅಂತರರಾಷ್ಟ್ರೀಯ ಮಟ್ಟದ ಆರ್‍ ಅಂಡ್‌ ಡಿ ಕೇಂದ್ರಗಳಿವೆ. 400 ಫಾರ್ಚುನ್ ಕಂಪನಿಗಳು ಬೆಂಗಳೂರಿನಲ್ಲಿವೆ. ಇಲ್ಲಿನ ಎಕೋಸಿಸ್ಟಂ ಅತ್ಯುತ್ತಮವಾಗಿದೆ ಎಂದು ಸಿಎಂ ಹೇಳಿದರು.

ರಾಜ್ಯದಲ್ಲಿ ಸಂಶೋಧನಾ ನೀತಿಯಿದ್ದು, ಯಾವುದೇ ಸಂಶೋಧನಾ ಕಾರ್ಯಗಳಿಗೆ ಉತ್ತೇಜನ ನೀಡಲಾಗುತ್ತದೆ. ವಿಜ್ಞಾನವನ್ನು ಸಾಮಾನ್ಯ ನಾಗರಿಕನೂ ಬಳಸುವಂತಾಗ ಮಾತ್ರ ವಿಜ್ಞಾನದ ಮಹತ್ವ ಹೆಚ್ಚುತ್ತದೆ. ಸೆಮಿಕಂಡಕ್ಟರ್ ನೀತಿ, ಆರ್ ಎಂಡ್ ಡಿ ನೀತಿ, ಉದ್ಯೋಗ ನೀತಿಗಳು ರಾಜ್ಯದಲ್ಲಿದೆ. ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಅಭಿವೃದ್ಧಿಶೀಲ ದೇಶಗಳಿಗೆ ರಫ್ತು

ಅಭಿವೃದ್ಧಿಶೀಲ ದೇಶಗಳಿಗೆ ರಫ್ತು

ದೇಶವೊಂದು ಮುನ್ನಡೆಯಲು ತನ್ನ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಸ್ವಾವಲಂಬನೆಯ ದೇಶ ಸ್ವಾಭಿಮಾನಿ ದೇಶ. ಸ್ವಾತಂತ್ರ್ಯ ಬಂದಾಗ ಎಲ್ಲರಿಗೂ ಆಹಾರ ಕೊಡುವ ಸ್ಥಿತಿ ಇರಲಿಲ್ಲ. ಆದರೆ ಈಗ 130 ಕೋಟಿ ಜನಸಂಖ್ಯೆಗೂ ಆಹಾರ ಉತ್ಪಾದಿಸಿ ಸ್ವಾಭಿಮಾನಿ ದೇಶವಾಗಿ ಹೊರಹೊಮ್ಮಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಘೋಷಿಸಿ ಅದಕ್ಕೆ ತಕ್ಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಲಘು ಉದ್ಯೋಗಕ್ಕೆ ಸಹಾಯ ಮಾಡುವ ಮುದ್ರಾ ಯೋಜನೆಯನ್ನು ಜಾರಿಗೊಳಿಸಿದರು. ಎಂ.ಎಸ್. ಎಂ.ಇ ಗಳಿಗೆ ವಿಶೇಷ ಒತ್ತು ನೀಡಿ ಆತ್ಮನಿರ್ಭರ್ ಭಾರತ್ ಕಾರ್ಯಕ್ರಮ ಜೋಡಿಸಿದ್ದಾರೆ. ಆತ್ಮನಿರ್ಭರ್ ಅಂದರೆ ಸ್ವಾವಲಂಬನೆ. ಅದನ್ನು ಸಾಧಿಸಲು ಬೃಹತ್ ಮತ್ತು ಸಣ್ಣ ಉದ್ಯಮಗಳ ನಡುವೆ ಸಂಬಂಧ ವನ್ನು ಬೆಳೆಸಿ, ಬೃಹತ್ ಉದ್ಯಮಗಳಿಗೆ ಅಗತ್ಯವಿರುವುದೆಲ್ಲವೂ ಇದೇ ದೇಶದಲ್ಲಿ ತಯಾರಾಗಬೇಕು. ವಿದೇಶದಿಂದ ಯಾವುದೇ ವಸ್ತು ಆಮದು ಆಗಬಾರದೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದರು. ಹಿಂದೆ ರಕ್ಷಣಾ ಕ್ಷೇತ್ರದಲ್ಲಿ ಶೇ 90 ರಷ್ಟು ಸಾಮಾಗ್ರಿಗಳು ವಿದೇಶಗಳಿಂದ ಬರುತ್ತಿತ್ತು. ಕೇವಲ 7 ವರ್ಷಗಳ ನರೇಂದ್ರ ಮೋದಿಯವರ ಆಡಳಿತದ ಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಶೇ. 60 ರಷ್ಟು ರಕ್ಷಣಾ ಸಾಮಾಗ್ರಿಗಳು ಭಾರತದಲ್ಲಿಯೇ , ಭಾರತೀಯರಿಂದ ಉತ್ಪಾದನೆಯಾಗುತ್ತಿದೆ. ದೊಡ್ಡಮಟ್ಟದ ಆರ್ ಅಂಡ್ ಡಿ ಅಗತ್ಯವಿದೆ. ಉತ್ಪಾದನೆಯು ಹಲವಾರು ಪರೀಕ್ಷೆಗಳಿಗೆ ಒಳಪಡಬೇಕು. ಅತಿ ಶೀಘ್ರ ದಲ್ಲಿಯೇ ಶೇ 90 ರಷ್ಟು ಉತ್ಪಾದನೆ ಆಗಲಿದ್ದು, ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಕೈಗಾರಿಕೋದ್ಯಮಿಗಳಿಗೆ ಅಪರಿಮಿತ ಅವಕಾಶಗಳು

ಕೈಗಾರಿಕೋದ್ಯಮಿಗಳಿಗೆ ಅಪರಿಮಿತ ಅವಕಾಶಗಳು

ಆಮದು ಮಾಡಿಕೊಳ್ಳುವ ದೇಶದಿಂದ ರಪ್ತು ಮಾಡುವ ದೇಶವಾಗಿ ಬದಲಾಗಿದ್ದೇವೆ. ಈ ಬದಲಾವಣೆ ನಮ್ಮ , ಚಿಂತನೆ, ದೂರದೃಷ್ಟಿ, ಅನುಷ್ಠಾನದಿಂದ ಪ್ರಾರಂಭವಾಗುತ್ತದೆ. ಇದು ಭಾರತದ ಸಾಮರ್ಥ್ಯವನ್ನು ಬಿಂಬಿಸುತ್ತದೆ ಎಂದರು. ಬದಲಾವಣೆಯ ಯುಗದಲ್ಲಿ ನಾವಿದ್ದೇವೆ. ಕೈಗಾರಿಕೆಗಳನ್ನು ಸ್ಥಾಪಿಸಿರುವವರು , ಅದನ್ನು ವಿಸ್ತರಿಸ ಬಯಸುವವರಿಗೆ ಇದು ಸಕಾಲ. ದೇಶದ ಬದಲಾವಣೆಯಲ್ಲಿ ಭಾಗಿಯಾಗಲು ಅವಕಾಶವಿದೆ. ದೇಶದ ಬದಲಾವಣೆ ದಿಕ್ಕು ಊರ್ಧ್ವಮುಖಿಯಾಗಿದೆ. ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಕೈಗಾರಿಕೋದ್ಯಮಿಗಳ ಬೆಳವಣಿಗೆ ಅಪರಿಮಿತ ಅವಕಾಶಗಳಿವೆ. ಜನರ ತಾಂತ್ರಿಕತೆ, ಕೌಶಲ್ಯ, ಇವುಗಳ ಬಗ್ಗೆ ಪ್ರಧಾನಮಂತ್ರಿಗಳಿಗೆ ವಿಶ್ವಾಸವಿದೆ. ಜನಸಂಖ್ಯೆ ಶಾಪವಲ್ಲ ಬದಲಿಗೆ ಜನಸಂಖ್ಯಾ ಲಾಭಾಂಶ ವನ್ನು ಪ್ರತಿಪಾದಿಸಿದರು. ಶೇ. 46 ರಷ್ಟು ಯುವಕರಿರುವ ದೇಶದ ಶಕ್ತಿಯನ್ನು ಕೌಶಲ್ಯಾಭಿವೃದ್ಧಿಯ ಮೂಲಕ ಬಳಸಿಕೊಳ್ಳಬೇಕೆಂದು ಪ್ರಧಾನಿಗಳು ಕರೆ ನೀಡಿದ್ದಾರೆ ಎಂದು ಸಿಎ‍ ತಿಳಿಸಿದ್ದಾರೆ.

130000 ಕೋಟಿ ರೂ.ಗಳ ಒಪ್ಪಂದಕ್ಕೆ ಸರ್ಕಾರ ಸಹಿ

130000 ಕೋಟಿ ರೂ.ಗಳ ಒಪ್ಪಂದಕ್ಕೆ ಸರ್ಕಾರ ಸಹಿ

ಕಚ್ಚಾವಸ್ತುಗಳು, ಇಂಧನಗಳು ದೇಶದ ಅಭಿವೃದ್ಧಿಗೆ ಪ್ರಮುಖವಾಗಿವೆ. ಕಲ್ಲಿದ್ದಿಲು, ಫಾಸಿಲ್ ಇಂಧನಗಳ ಸುಸ್ಥಿರ ಬಳಕೆ ಹಾಗೂ ಗಣಿಗಾರಿಕೆಯ ಅವಶ್ಯಕತೆ ಇದೆ. ಕೇಂದ್ರ ಸಚಿವ ಪ್ರಲ್ಹಾದ ಸಚಿವರು ಹೊಸ ನೀತಿಯನ್ನು ಜಾರಿಗೆ ತರುವ ಮೂಲಕ ಕಲ್ಲಿದ್ದಲು ಗಣಿಗಳ ಗರಿಷ್ಟ ಹಾಗೂ ವೈಜ್ಞಾನಿಕ ಬಳಕೆಗೆ ದಾರಿಮಾಡಿಕೊಟ್ಟಿದ್ದಾರೆ. ಕಲ್ಲಿದ್ದಲಿನ ಲಾಜಿಸ್ಟಿಕ್ಸ್ ನ್ನು ಪರಿಣಾಮಕಾರಿಯಾಗಿ ಮಾಡಬೇಕು. ಇವೆಲ್ಲ ಅಂಶಗಳು ದೇಶದ ಸಂಯೋಜಿತ ಬೆಳವಣಿಗೆಯ ಭಾಗವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಪರಿಶ್ರಮದಿಂದ ರಾಜ್ಯದಲ್ಲಿನ ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಇಂಧನ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ. ಕಲ್ಲಿದ್ದಲಿನ ಹಾಗೂ ವಿದ್ಯುಚ್ಛಕ್ತಿಯ ಬೇಡಿಕೆ ಹಾಗೂ ರಾಜ್ಯಗಳ ಇಂಧನ ಬಳಕೆಯ ಪ್ರಮಾಣದ ಬಗ್ಗೆ ಮಾಹಿತಿಯಿರುವ ಕೇಂದ್ರ ಸಚಿವರು ಕರ್ನಾಟಕಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಮುಂಬರುವ 5 -10 ವರ್ಷದೊಳಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಇದರಿಂದ ಸಾಂಪ್ರದಾಯಿಕ ಇಂಧನಗಳ ಬಳಕೆ ಗಣನೀಯವಾಗಿ ಕಡಿಮೆಯಾಗಲಿದೆ. ಸೌರಶಕ್ತಿ, ನೈಸರ್ಗಿಕ, ಹೈಡ್ರೋಜನ್, ಎಥನಾಲ್ ಇಂಧನಗಳ ಉತ್ಪಾದನೆ ರಾಜ್ಯ ಸರ್ಕಾರ ಒತ್ತು ನೀಡಿದ್ದು, ನವೀಕರಿಸಬಹುದಾದ ಇಂಧನದ ಉತ್ಪಾದನೆಗೆ 130000 ಕೋಟಿ ರೂ.ಗಳ ಒಪ್ಪಂದಕ್ಕೆ ಸರ್ಕಾರ ಸಹಿ ಮಾಡಿದೆ.ಹೆಚ್ಚಿನ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವುದರಿಂದ ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಕ್ರಮಗಳಿಂದ ಕೇವಲ ಇಂಧನವನ್ನು ಉಳಿಸುವುದಷ್ಟೇ ಅಲ್ಲ, ಪರಿಸರವನ್ನೂ ಉಳಿಸಿದಂತಾಗುತ್ತದೆ. ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒತ್ತು ನೀಡಲಾಗಿದೆ. ಅಮೋನಿಯಾ ಕೃಷಿ, ಕೈಗಾರಿಕೆ ಹಾಗೂ ಇತರೆ ಕ್ಷೇತ್ರಗಳಲ್ಲಿ ಬಳಕೆಯಾಗುತ್ತದೆ ಎಂದು ಸಿಎಂ ಹೇಳಿದರು.

ನವಕರ್ನಾಟಕದಿಂದ ನವಭಾರತ ನಿರ್ಮಾಣ

ನವಕರ್ನಾಟಕದಿಂದ ನವಭಾರತ ನಿರ್ಮಾಣ

ಲಘು ಉದ್ಯೋಗ ಭಾರತೀಯ ಮೂಲಕ ಸರ್ಕಾರ ಹಾಗೂ ಲಘು ಉದ್ಯೋಗದಾರರನ್ನು ಸಂಯೋಜಿಸುವ ವೇದಿಕೆಯಾಗಿದೆ. ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆಯಾಗಬೇಕು. ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸದಾ ಮುನ್ನಡೆಯಬೇಕು. ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಸೂಕ್ತ ಸ್ಥಳವಾಗಿದ್ದು, ಸಣ್ಣ ಕೈಗಾರಿಕೆಗಳು, ಲಘು ಉದ್ಯೋಗಿಗಳು ರಾಜ್ಯದ ಅಭಿವೃಧ್ಧಿಗೆ ಕೊಡುಗೆ ನೀಡಿವೆ. ನವಕರ್ನಾಟಕದಿಂದ ನವಭಾರತವನ್ನು ನಿರ್ಮಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆಯನ್ನು ನೀಡಿದರು.

English summary
Chief Minister Basavaraja Bommai said that Karnataka is the first state to offer PLI (Production Based Incentives) to semiconductors and FMCGs, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X