• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್: 'ಪತ್ರಕರ್ತೆಯರ ಸಂಕಷ್ಟಕ್ಕೆ ಸರ್ಕಾರ ನೆರವಾಗಲಿ'

|

ಬೆಂಗಳೂರು, ಮೇ 14: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ಪತ್ರಕರ್ತೆಯರ ಅಹವಾಲುಗಳನ್ನು ಇಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ವೀಕರಿಸಿ, ಮಾನಸಿಕ ಸ್ಥೈರ್ಯ ತುಂಬಿದರು.

ಲಾಕ್‌ಡೌನ್ ಹಿನ್ನೆಲೆಯಿಂದ ಪತ್ರಕರ್ತೆಯರು ಬಾದಿತರಾಗಿದ್ದು, ಅವರಿಗೆ ಸರ್ಕಾರ ನೆರವಾಗಬೇಕು. ಅನಿವಾರ್ಯವಾಗಿ ಇತರೆ ವೃತ್ತಿಪರರಂತೆ ಪತ್ರಕರ್ತೆಯರು ಮನೆಯಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪೂರಕ ಪರಿಕರಗಳನ್ನು ಒದಗಿಸಬೇಕು ಎಂದು ಪತ್ರಕರ್ತೆಯರು ಕಾರಜೋಳ ಅವರಲ್ಲಿ ಮನವಿ ಮಾಡಿದರು.

ಬಾಣಲೆಯಿಂದ ಬೆಂಕಿಗೊ, ಸುಗಮ ಬಾಳುವೆಗೊ?

ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಕಾರ್ಯಾಗಾರ, ಶಿಬಿರ, ಕ್ಷೇತ್ರ ಪ್ರಾತ್ಯಾಕ್ಷಿಕೆಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘವು ಆಯೋಜಿಸಲು ಸಮಾಜ ಕಲ್ಯಾಣ ಇಲಾಖೆಯು ಸಹಭಾಗಿತ್ವ ನೀಡಬೇಕು. ವೃತ್ತಿ ಪರ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ, ಕೋರ್ಸುಗಳನ್ವಯ ವೃತ್ತಿಪರ ಕೋರ್ಸುಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಬೇಕು ಎಂದು ಮನವಿ ಮಾಡಿದರು.

ಮನವಿಗೆ ಡಿಸಿಎಂ ಪೂರಕವಾಗಿ ಸ್ವಂದಿಸಿ, ಪತ್ರಕರ್ತೆಯರು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಕಾರ್ಯಾಗಾರಗಳನ್ನು ಆಯೋಜಿಸಲು ಸರ್ಕಾರದಿಂದ ನೆರವು ನೀಡಲಾಗುತ್ತದೆ. ಸಂಘದ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.

ಸಂಘದ ಹಿರಿಯ ಸಲಹೆಗಾರರಾದ ಕೆ.ಎಚ್.ಸಾವಿತ್ರಿ ಸುರೇಶ್ ಕುಮಾರ್, ಅಧ್ಯಕ್ಷರಾದ ಶಾಂತಲಾ ಧರ್ಮರಾಜ್ ಅವರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕುಮಾರ ನಾಯಕ್, ಆಯುಕ್ತ, ಪೆದ್ದಪ್ಪಯ್ಯ, ಅಪರ ನಿರ್ದೇಶಕ ನಾಗೇಶ್, ಸಂಘದ ಕಾರ್ಯದರ್ಶಿ ಮಾಲತಿ ಭಟ್, ಎನ್ ವನಿತಾ, ಸೌಮ್ಯಶ್ರೀ, ಅಕ್ಷರ, ಗೋರೂರು ಪಂಕಜ ಮತ್ತಿತರರು ಉಪಸ್ಥಿತರಿದ್ದರು.

English summary
Karnataka Government Must Help For Women Journalists. Women Journalists today meets dcm govind karajola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X