ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಾಸಮತ : ಎಲ್ಲ ಕಣ್ಣು 20 ಲಿಂಗಾಯತ ಶಾಸಕರ ಮೇಲೆ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಕಣ್ಣು ಲಿಂಗಾಯತರ ಮೇಲೆ | Oneindia Kannada

ಬೆಂಗಳೂರು, ಮೇ 19 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತಕ್ಕೆ ಗಂಟೆಗಣನೆ ಶುರುವಾಗಿರುವಾಗ ಎಲ್ಲರ ಕಣ್ಣುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿರುವ 20 ಲಿಂಗಾಯತ ಶಾಸಕರ ಮೇಲಿದೆ.

ಅವರು ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಜಯಿಸುವಂತೆ ಮಾಡುತ್ತಾರಾ? ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೇ ಮತ ಹಾಕಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯದಂತೆ ಮಾಡುತ್ತಾರಾ? ಕಾಂಗ್ರೆಸ್ಸಿನಲ್ಲಿ 18 ಲಿಂಗಾಯತ ಶಾಸಕರಿದ್ದರೆ, ಜೆಡಿಎಸ್ ನಲ್ಲಿ ಇಬ್ಬರಿದ್ದಾರೆ.

ವಿಶ್ವಾಸಮತದ ಗೆಲುವಿಗಾಗಿ ಲಿಂಗಾಯತ ಮಠಗಳ ಮೊರೆಹೊಕ್ಕ ಬಿಜೆಪಿ ವಿಶ್ವಾಸಮತದ ಗೆಲುವಿಗಾಗಿ ಲಿಂಗಾಯತ ಮಠಗಳ ಮೊರೆಹೊಕ್ಕ ಬಿಜೆಪಿ

ಇದು ಕರ್ನಾಟಕದ ಜನತೆಗೆ ಚಿದಂಬರ ರಹಸ್ಯವಾಗಿ ಕಾಡುತ್ತಿದೆ. ಲಿಂಗಾಯತ ನಾಯಕರು ಬಿಜೆಪಿಗೆ ಅಡ್ಡಮತ ಹಾಕಿ ಬಿಜೆಪಿಯನ್ನು ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂದು ಭಾರತೀಯ ಜನತಾ ಪಕ್ಷ ಬಲವಾಗಿ ನಂಬಿದೆ. ಒಂದು ರೀತಿಯಲ್ಲಿ ಈ ಲಿಂಗಾಯತ ಶಾಸಕರು ವಿಚಿತ್ರ ಧರ್ಮಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.

ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು

Karnataka Floor Test : All eyes on 20 Lingayat MLAs of Congress-JD(S)

ಒಂದು ಕಡೆ ಅವರು ವಿರೋಧ ಪಕ್ಷಗಳಲ್ಲಿದ್ದರೆ ಮತ್ತೊಂದೆಡೆ ಲಿಂಗಾಯತ ನಾಯಕನನ್ನು ಬೆಂಬಲಿಸಬೇಕಾ ಬೇಡವಾ ಎಂಬ ಸಂದಿಗ್ಧತೆ. ಪಕ್ಷಕ್ಕೆ ಮತ್ತು ಆ ಪಕ್ಷದ ನಾಯಕರ ಆದೇಶಕ್ಕೆ ತಲೆಬಾಗಿದರೆ ಮತ್ತು ಆಮಿಷಗಳಿಗೆ ಬಲಿಯಾಗದಿದ್ದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬಲುಕಷ್ಟ.

ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು? ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?

ವಿಚಿತ್ರ ದ್ವಂದ್ವದಲ್ಲಿ ಲಿಂಗಾಯತ ನಾಯಕರು ಮುಳುಗಿದ್ದಾರೆ. ಒಂದು ವೇಳೆ ಅವರು ಯಡಿಯೂರಪ್ಪನವರಿಗೆ ಬೆಂಬಲ ನೀಡಿ ಅಡ್ಡಮತದಾನ ಮಾಡಿದರೆ ಅವರ ರಾಜಕೀಯ ಜೀವನವೇ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗದಂತೆ ತಡೆದರೆ ಲಿಂಗಾಯತ ಮತದಾರರು ಸಿಟ್ಟಾಗಲೂಬಹುದು.

ರಾಜಕೀಯವಾಗಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದ್ದು ತಮ್ಮ ಸಾಧನೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳಬಹುದು. ಆದರೆ, ಇದು ಲಿಂಗಾಯತರನ್ನು ಕೆರಳಿಸಿರುವುದು ಸುಳ್ಳಲ್ಲ. ಏಕೆಂದರೆ, ಶೇ.60ಕ್ಕಿಂತಲೂ ಹೆಚ್ಚು ಮತದಾರರು ಯಡಿಯೂರಪ್ಪನವರ ಮೇಲೆ ವಿಶ್ವಾಸವಿಟ್ಟು ಅವರ ಪಕ್ಷಕ್ಕೆ ಮತಹಾಕಿದ್ದಾರೆ.

ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ? ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ?

ತಕ್ಕ ಶಾಸ್ತಿಯೆಂಬಂತೆ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರಮುಖ ನಾಯಕರಾದ ವಿನಯ್ ಕುಲಕರ್ಣಿ, ಡಾ. ಶರಣ ಪ್ರಕಾಶ್ ಪಾಟೀಲ ಮತ್ತು ಬಸವರಾಜ ರಾಯರೆಡ್ಡಿ ಅವರನ್ನು ಮತದಾರರು ಸೋಲಿಸಿ ಮನೆಗೆ ಕಳಿಸಿದ್ದಾರೆ.

ಶಾಸಕರು ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ವಿಶ್ವಾಸಮತದಲ್ಲಿ ಮತದಾನ ಮಾಡಬೇಕಾಗಿ ಯಡಿಯೂರಪ್ಪನವರು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ ಯಡಿಯೂರಪ್ಪ.

ಈಗ ತೆಗೆದುಕೊಳ್ಳುವ ಯಾವುದೇ ನಿರ್ಧಾರ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು 2014ರಲ್ಲಿ ತನ್ನದಾಗಿಸಿಕೊಂಡಿತ್ತು.

English summary
Karnataka Floor Test : All eyes on 20 Lingayat MLAs of Congress-JD(S). Will they back the Congress-JD(S) combine or go with the BJP and not prevent a Lingayat leader from continuing as Chief Minister? The BJP is hopeful that these Lingayat MLAs would cross-vote and save the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X