ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಲಿತರ ಬೆಂಬಲ ಕಾಂಗ್ರೆಸ್ಸಿಗಿಂತ ಬಿಜೆಪಿಗೇ ತುಸು ಹೆಚ್ಚು!

|
Google Oneindia Kannada News

ಬೆಂಗಳೂರು, ಮೇ 16: ಅಚ್ಚರಿಯ ಫಲಿತಾಂಶ ಕಂಡ ಕರ್ನಾಟಕ ವಿಧಾನಸಭೆ ಚುನಾವಣೆ ಇದೀಗ ರಾಷ್ಟ್ರ ರಾಜಕೀಯದ ಗಮನ ಸೆಳೆದಿದೆ. ಸರ್ಕಾರ ರಚಿಸುವುದು ಯಾರು ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.

ಈ ಮಧ್ಯೆ ಅಚ್ಚರಿ ಎನ್ನಿಸುವ ಸಂಗತಿಯೆಂದರೆ ಸದಾ ಕಾಂಗ್ರೆಸ್ಸಿಗರ ಬೆನ್ನೆಲುಬಾಗಿದ್ದ ದಲಿತರು ಈ ಬಾರಿ ತುಸು ಹೆಚ್ಚೇ ಬಿಜೆಪಿಗೆ ಬೆಂಬಲ ನೀಡಿದ್ದು!

ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ 6 ಬ್ರಾಹ್ಮಣರಲ್ಲಿ ಗೆದ್ದವರೆಷ್ಟು?ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ 6 ಬ್ರಾಹ್ಮಣರಲ್ಲಿ ಗೆದ್ದವರೆಷ್ಟು?

ದಲಿತರ ಮನೆಯಲ್ಲಿ ಬಿಜೆಪಿ ನಾಯಕರು ಊಟಮಾಡಿದ್ದು ವರ್ಕೌಟ್ ಆಗಿದೆಯಾ? ಅಥವಾ ದಲಿತ ಪರ ಎಂದು ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರಷ್ಟೇ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಾತೇನಾದರೂ ದಲಿತರ ಮೇಲೆ ಪ್ರಭಾವ ಬೀರಿದೆಯಾ?

14 ಮೀಸಲು ಕ್ಷೇತ್ರ ಗೆದ್ದ ಬಿಜೆಪಿ

14 ಮೀಸಲು ಕ್ಷೇತ್ರ ಗೆದ್ದ ಬಿಜೆಪಿ

ಕರ್ನಾಟಕದಲ್ಲಿರುವ ಒಟ್ಟು 36 ದಲಿತ ಮೀಸಲು ಕ್ಷೇತ್ರಗಳಲ್ಲಿ 14 ಅನ್ನು ಬಿಜೆಪಿ ಗೆದ್ದಿದ್ದರೆ, 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿಯನ್ನು ದಲಿತವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದ್ದ ಕಾಂಗ್ರೆಸ್ಸಿಗರಿಗೆ ಇದು ಸಾಕಷ್ಟು ಆಘಾತವನ್ನುಂಟುಮಾಡಿದೆ. ಕರ್ನಾಟಕದಲ್ಲಿರುವ ಶೇ.23 ರಷ್ಟು ದಲಿತರು ಕಾಂಗ್ರೆಸ್ಸಿಗೆ ಯಾವತ್ತಿನ ಬೆಂಬಲಿಗರಾಗಿದ್ದವರು. ದಲಿತರ ಉದ್ಧಾರಕ್ಕಾಗಿ ಹತ್ತು ಹಲವು ಯೋಜನೆಗಳನ್ನು ತಂದಿದ್ದೇನೆಂದು ಕಾಂಗ್ರೆಸ್ ಹೇಳಿಕೊಂಡಿದ್ದರೂ ಅದಕ್ಕೆಲ್ಲ ದಲಿತ ಮತದಾರ ಕಿವಿಗೊಟ್ಟಂತೆ ಕಾಣುತ್ತಿಲ್ಲ. ಇದು ಕಾಂಗ್ರೆಸ್ಸಿಗೆ ಅತ್ಯಂತ ಹೆಚ್ಚಿನ ಮುಖಭಂಗವನ್ನುಂಟು ಮಾಡಿದ ವಿಷಯ.

ಲಿಂಗಾಯತ ಧರ್ಮ ಒಡೆದ ಆಳುವ ನೀತಿಯೇ ಉರುಳಾಯಿತು ಕಾಂಗ್ರೆಸ್ಸಿಗೆ!ಲಿಂಗಾಯತ ಧರ್ಮ ಒಡೆದ ಆಳುವ ನೀತಿಯೇ ಉರುಳಾಯಿತು ಕಾಂಗ್ರೆಸ್ಸಿಗೆ!

ದಲಿತರ ಒಲವು ಬಿಜೆಪಿಯತ್ತ?

ದಲಿತರ ಒಲವು ಬಿಜೆಪಿಯತ್ತ?

ದಲಿತ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನ ಗೆದ್ದಿರುವುದಕ್ಕೆ ಕಾರಣವೇನು? 2013 ರಲ್ಲಿ 40 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 6 ಕ್ಷೇತ್ರಗಳನ್ನು ಮಾತ್ರ. ಆದರೆ ಈ ಬಾರಿ 14 ಕ್ಷೇತ್ರಗಳಲ್ಲಿ ಅದು ಗೆಲುವು ಸಾಧಿಸಿದೆ. ಕಾಂಗ್ರೆಸ್ 2013 ರಲ್ಲಿ 17 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ 13 ಸ್ಥಾನಗಳನ್ನು ಗೆಲ್ಲುವುದಕ್ಕಷ್ಟೇ ಶಕ್ತವಾಗಿದೆ. ಜೆಡಿಎಸ್ 7 ಕ್ಷೇತ್ರಗಳಲ್ಲಿ ಮತ್ತು ಬಿಎಸ್ಪಿ 1 ಕ್ಷೇತ್ರಗಳಲ್ಲಿ ಜಯಗಳಿಸಿವೆ.

ಬಿಜೆಪಿ ಗೆಲುವಿಗೆ ಕಾರಣವೇನು?

ಬಿಜೆಪಿ ಗೆಲುವಿಗೆ ಕಾರಣವೇನು?

6 ರಿಂದ 14 ಸ್ಥಾನಕ್ಕೇರಿದ ಬಿಜೆಪಿ ಸಾಧನೆಗೆ ಕಾರಣವೇನು? ಪ್ರಧಾನಿ ನರೇಂದ್ರ ಮೋದಿಯವರು ಕೊನೆಯ ಕ್ಷಣದಲ್ಲಿ ನಡೆಸಿದ rally ಗಳೇ? ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ, "ಕಾಂಗ್ರೆಸ್ ದಲಿತರನ್ನು ಹೇಗೆ ನಡೆಸಿಕೊಂಡಿದೆ ಎಂಬುದು ಗೊತ್ತಿದೆ. ಕಾಂಗ್ರೆಸ್ಸಿಗರಿಗೆ ದಲಿತರ ಮೇಲೆ ಅಷ್ಟೆಲ್ಲ ಕಾಳಜಿ ಇದ್ದಿದ್ದರೆ ದಲಿತರೊಬ್ಬರನ್ನು ಏಕೆ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ? ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದಿತ್ತಲ್ಲವೇ?" ಎಂದು ಪ್ರಶ್ನಿಸಿದ್ದರು. ಇದು ದಲಿತರ ಮೇಲೆ ಪ್ರಭಾವ ಬೀರದೆ ಇಲ್ಲ. ಮೋದಿಯವರ ಇದೊಂದು ಮಾತು ರಾಜ್ಯ ರಾಜಕಾರಣದಲ್ಲಿ ಅದೆಷ್ಟು ಪರಿಣಾಮ ಬೀರಿತ್ತೆಂದರೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ ನಾನು ಖುರ್ಚಿ ಬಿಟ್ಟುಕೊಡಲು ಸಿದ್ಧ ಎಂದು ಸಿದ್ದರಾಮಯ್ಯ ಉಚ್ಚರಿಸಿದ್ದರು!

ವರ್ಕೌಟ್ ಆಗದ ಭಾಗ್ಯಗಳು?

ವರ್ಕೌಟ್ ಆಗದ ಭಾಗ್ಯಗಳು?

ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದ ಭಾಗ್ಯಗಳಲ್ಲಿ ಬಹುಪಾಲು ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ(ಅಹಿಂದ)ರಿಗೇ ಆಗಿದ್ದರೂ ಅವುಗಳೆಲ್ಲ ಜನರಿಗೆ ತೃಪ್ತಿ ನೀಡಿದಂತಿಲ್ಲ. ತೃಪ್ತಿ ನೀಡಿದ್ದರೆ ದಲಿತರು ಹೀಗೆ ರೊಚ್ಚಿಗೆದ್ದು ಕಾಂಗ್ರಸ್ ವಿರುದ್ಧ ಮತ ಚಲಾಯಿಸುತ್ತಿರಲಿಲ್ಲ. ಅದೂ ಅಲ್ಲದೆ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲೂ ದಲಿತಪರ ಯೋಜನೆಗಳನ್ನು ಸಾಕಷ್ಟು ಘೋಷಿಸಿದ್ದಲ್ಲದೆ, ಚುನಾವಣೆ ಹತ್ತಿರವಾದಾಗ ನಾಯಕರು ದಲಿತರ ಮನೆಗಳಲ್ಲಿ ಊಟ ಮಾಡಿದ್ದು ಸಹ ಮತದಾರನ ಮೇಲೆ ಪ್ರಭಾವ ಬೀರಿದಂತಿದೆ.

English summary
Karnataka election results 2018: BJP has won 14 and Congress won 13 out of 36 reserved constituence fo Sceduled caste in Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X