ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹಣ ಹಂಚಿದ ಬಿಜೆಪಿ: ವಿಡಿಯೋ ಹಂಚಿಕೊಂಡು ಕಿಡಿಕಾರಿದ ಕಾಂಗ್ರೆಸ್
ಬೆಂಗಳೂರು, ಮೇ.10: ಬುಧವಾರ ರಾಜ್ಯಾಧ್ಯಂತ ವಿಧಾನಸಭಾ ಚುನಾವಣೆಗಾಗಿ ಮತದಾರರು ಮತ ಚಲಾಯಿಸುತ್ತಿದ್ದು, ಹಲವೆಡೆ ಅಕ್ರಮಗಳು ಕಂಡು ಬಂದಿವೆ. ಮತಗಟ್ಟೆಗಳಲ್ಲಿ ಹಲವು ದೊಷಗಳು ವರದಿಯಾಗಿವೆ. ಇದರ ಜೊತೆಗೆ ಮತದಾರರು ಇವಿಎಂಗಳನ್ನೇ ಹೊಡೆದುಹಾಕಿರುವ ಘಟನೆಯು ನಡೆದಿದೆ. ಇನ್ನು ಮತಗಟ್ಟೆಯ ಸುತ್ತಮುತ್ತ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಬಂದಿವೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್ ನ ಬಿಜೆಪಿ ಅಧ್ಯಕ್ಷ ನಾಗೇಂದ್ರ ವಿರುದ್ಧ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ ಎಚ್.ಎಸ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆ ಮಾಡಿ ಚುನಾವಣಾ ಆಯೋಗ, ಕರ್ನಾಟಕ ಬಿಜೆಪಿ ಮತ್ತು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧ ಕಿಡಿಕಾರಿದ್ದಾರೆ.

"ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್ ನ ಬಿಜೆಪಿ ಅಧ್ಯಕ್ಷ ನಾಗೇಂದ್ರ ಎಂಬುವರು ಬಹಿರಂಗವಾಗಿ ದುಡ್ಡು ಹಂಚುತ್ತಿದ್ದಾರೆ! 40% ಕಮಿಷನ್ ಕಳ್ಳತನದ ಅಬಕಾರಿ ದುಡ್ಡಲ್ಲಿ ಮತ ಕೊಳ್ಳುತ್ತಿದ್ದೀರ ಗೋಪಾಲಯ್ಯ ಅವರೇ..?@ECISVEEP ಹೀಗೆ ಬಹಿರಂಗ ಹಣ ಹಂಚುತ್ತಿರುವವರ ವಿರುದ್ಧ ಕ್ರಮ ಯಾವಾಗ ಕೈಗೊಳ್ಳುವಿರಿ..?" ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ ಎಚ್.ಎಸ್ ವಿಡಿಯೋ ಹಂಚಿಕೊಂಡಿದ್ದಾರೆ.
ಮುಂದಯವರಿದು, "ಮತದಾನ ಸರ್ವಶ್ರೇಷ್ಠ ದಾನ ಅದನ್ನೂ ಹಣ ಕೊಟ್ಟು ಕೊಳ್ಳುವ ಇಂಥ ನೀಚರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು..! ಕರ್ನಾಟಕ ಬಿಜೆಪಿ ಮತದಾರರಿಗೆ ಹಣದ ಆಮಿಷ ಒಡ್ಡಿ ಮತ ಪಡೆಯಲು ನಾಚಿಕೆ ಆಗಬೇಕು ನಿಮಗೆ!!" ಎಂದು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ದ ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.
36 ಸೆಕೆಂಡ್‌ಗಳ ವಿಡಿಯೋದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್ ನ ಬಿಜೆಪಿ ಅಧ್ಯಕ್ಷ ನಾಗೇಂದ್ರಅವರು ಮೊಬೈಲ್‌ನಲ್ಲಿ ಮಾತನಾಡುತ್ತಾ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಮತ ಚಲಾಯಿಸದ ಮತದಾರರು ತಮ್ಮ ಚುನಾವಣಾ ಚೀಟಿಯನ್ನು ತೋರಿಸಿ ಹಣ ಪಡೆಯುತ್ತಿರುವುದು ಕಾಣಬಹುದು.












Click it and Unblock the Notifications