ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ ಏಪ್ರಿಲ್. 09: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ಇದುವರೆಗೂ ತನ್ನ ಮೊದಲ ಪಟ್ಟಿ ಕೂಡ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆ ವಿಪಕ್ಷಗಳ ವ್ಯಂಗ್ಯ ಎದುರಿಸುತ್ತಿದ್ದೆ. ಮಹತ್ವದ ಸಭೆಗಳ ನಡುವೆಯೇ ಸೋಮವಾರ (ಏಪ್ರಿಲ್ 10) ರಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ.

ನವದೆಹಲಿ ಸುದ್ದಿಗಾರರ ಜೊತೆಗೆ ಮಾತನಾಡ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಶನಿವಾರ ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ ಸರ್ವೆ ಸೇರಿದಂತೆ ಎಲ್ಲಾ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

Karnataka Election 2023: Monday BJP Candidates 1st list will be Released; Basavaraj Bommai

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜ್ಯ ನಾಯಕರೊಂದಿಗೆ ಸಂಭಾವ್ಯ ಹೆಸರುಗಳ ಕುರಿತು ಶನಿವಾರ ಚರ್ಚೆ ನಡೆಸಲಾಗಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದೆ. ಇದಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಸಂಸದೀಯ ಮಂಡಳಿ ಭಾನುವಾರ ಸಭೆ ಸೇರಲಿದೆ.

ಶನಿವಾರ ನಡದ ಸಭೆಗೂ ಮುನ್ನ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಲ್ಲಾ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸುತ್ತೇವೆ. ಜಿಲ್ಲೆ ಮತ್ತು ಕ್ಷೇತ್ರವಾರು ವಿವರಗಳು ಮತ್ತು ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳು ನಮ್ಮ ಬಳಿ ಇವೆ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ರಾಷ್ಟ್ರೀಯ ನಾಯಕರೊಂದಿಗೆ ವಿವರವಾದ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದರು.

ಭಾನುವಾರ ವಿವಿಧ ಕಾರ್ಯಕ್ರಮಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ. ಬಂಡೀಪುರಕ್ಕೆ ಭೇಟಿ ಕೊಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ.

Karnataka Election 2023: Monday BJP Candidates 1st list will be Released; Basavaraj Bommai

ಹೀಗಾಗಿ, ಭಾನುವಾರ ರಾತ್ರಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆ ನಡೆದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಸೋಮವಾರ ಪಟ್ಟಿ ಪ್ರಕಟಗೊಳಿಸುವ ಸಂಭವವಿದೆ. ಸಭೆಯಲ್ಲಿ 75 ವರ್ಷ ವಯಸ್ಸಾದವರಿಗೆ ಟಿಕೆಟ್‌ ನೀಡಬೇಕೆ ಅಥವಾ ಬೇಡವೆ? ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಶಾಸಕರಾದವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಬೇಕೆ ಅಥವಾ ಬೇಡವೆ ಎಂಬ ಅಂಶಗಳು ಸೇರಿದಂತೆ ಹಲವು ವಿಷಯಗಳನ್ನು ಚರ್ಚೆ ನಡೆಸುವ ಸಾಧ್ಯತೆಯಿದೆ.

*ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ*

ನಿಪ್ಪಾಣಿ: ಶಶಿಕಲಾ ಜೊಲ್ಲೆ

ಕುಡಚಿ (SC): ಪಿ.ರಾಜೀವ್

ರಾಯಬಾಗ (SC): ದುರ್ಯೋಧನ ಮಹಾಲಿಂಗಪ್ಪ ಐಹೊಳೆ

ಅರಭಾವಿ: ಬಾಲಚಂದ್ರ ಜಾರಕಿಹೊಳಿ

ಮುದ್ದೇಬಿಹಾಳ: ಎ.ಎಸ್ ಪಾಟೀಲ್ ನಡಹಳ್ಳಿ

ದೇವರ ಹಿಪ್ಪರಗಿ: ಸೋಮನಗೌಡ ಬಿ ಪಾಟೀಲ್ ಸಾಸನೂರ

ಬಿಜಾಪುರ ನಗರ: ಬಸನಗೌಡ ಪಾಟೀಲ್ ಯತ್ನಾಳ್

ಸಿಂದಗಿ: ರಮೇಶ ಭೂಸನೂರು

ಗೋಕಾಕ್: ರಮೇಶ್ ಜಾರಕಿಹೊಳಿ

ಬೆಳಗಾವಿ ಉತ್ತರ : ಅನಿಲ್ ಎಸ್ ಬೆನಕೆ

ಬೆಳಗಾವಿ ದಕ್ಷಿಣ : ಅಭಯ ಪಾಟೀಲ

ಔರಾದ್ (SC) : ಪ್ರಭು ಚೌಹಾಣ್

ರಾಯಚೂರು: ಡಾ.ಶಿವರಾಜ್ ಪಾಟೀಲ್

ದೇವದುರ್ಗ (ಎಸ್‌ಟಿ): ಶಿವನಗೌಡ ನಾಯಕ್

ಗಂಗಾವತಿ: ಪರಣ್ಣ ಮುನವಳ್ಳಿ

ಯಲಬುರ್ಗಾ: ಹಾಲಪ್ಪ ಆಚಾರ್

ಶಿರಹಟ್ಟಿ (SC): ರಾಮಪ್ಪ ಲಮಾಣಿ

ಕಿತ್ತೂರು: ಮಹಾಂತೇಶ್ ದೊಡ್ಡಗೌಡರ್

ರಾಮದುರ್ಗ: ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ

ಮುಧೋಳ (SC): ಗೋವಿಂದ ಎಂ. ಕಾರಜೋಳ

ತೇರದಾಳ: ಸಿದ್ದು ಸವದಿ

ಬಿಳಗಿ : ಮುರುಗೇಶ್ ನಿರಾಣಿ

ಬಾಗಲಕೋಟೆ : ವೀರಣ್ಣ ಚರಂತಿಮಠ

ಹುನಗುಂದ: ದೊಡ್ಡನಗೌಡ ಪಾಟೀಲ

ಸುರಪುರ (ST): ರಾಜುಗೌಡ

ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್

ಸಿರ್ಸಿ : ವಿಶ್ವೇಶ್ವರ ಹೆಗಡೆ ಕಾಗೇರಿ

ಶಿಗ್ಗಾಂವ್ : ಬಸವರಾಜ ಬೊಮ್ಮಾಯಿ

ಬ್ಯಾಡಗಿ : ವಿರೂಪಾಕ್ಷಪ್ಪ

ಬಳ್ಳಾರಿ ಹಿರೇಕೆರೂರು : ಬಿ.ಸಿ ಪಾಟೀಲ್ -

ವಿಜಯನಗರ : ಆನಂದ್ ಸಿಂಗ್

ಸಿರುಗುಪ್ಪ (ಎಸ್‌ಟಿ) : ಎಂ.ಎಸ್.ಸೋಮಲಿಂಗಪ್ಪ

ಬಳ್ಳಾರಿ ನಗರ : ಜಿ.ಸೋಮಶೇಖರ ರೆಡ್ಡಿ

ಚಿತ್ರದುರ್ಗ : ಜಿ.ಎಚ್.ತಿಪ್ಪಾರೆಡ್ಡಿ

ಹೊಸದುರ್ಗ: ಗೂಳಿಹಟ್ಟಿ ಡಿ.ಶೇಖರ್

ಜಗಳೂರು (ಎಸ್‌ಟಿ) : ಎಸ್ ವಿ ರಾಮಚಂದ್ರ

ಸೇಡಂ: ರಾಜಕುಮಾರ್ ಪಾಟೀಲ್

ಗುಲ್ಬರ್ಗ ಗ್ರಾಮಾಂತರ (SC): ಬಸವರಾಜ ಮತ್ತಿಮೂಡ್

ಗುಲ್ಬರ್ಗ ದಕ್ಷಿಣ: ದತ್ತಾತ್ರೇಯ ಸಿ.ಪಾಟೀಲ

ಆಳಂದ: ಸುಭಾಷ್ ಗುತ್ತೇದಾರ್

ರೋಣ: ಕಳಕಪ್ಪ ಬಂಡಿ

ನರಗುಂದ: ಸಿಸಿ ಪಾಟೀಲ್

ನವಲಗುಂದ: ಶಂಕರ ಪಾಟೀಲ ಮುನೇನಕೊಪ್ಪ

ಧಾರವಾಡ: ಅಮೃತ್ ದೇಸಾಯಿ

ಹುಬ್ಬಳ್ಳಿ-ಧಾರವಾಡ ಕೇಂದ್ರ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಅರವಿಂದ ಬೆಲ್ಲದ್

ಕಲಘಟಗಿ : ಸಿಎಂ ನಿಂಬಣ್ಣನವರ್

ಕಾರವಾರ : ರೂಪಾಲಿ ನಾಯ್ಕ್

ಕುಮಟಾ: ದಿನಕರ ಶೆಟ್ಟಿ

ಭಟ್ಕಳ : ಸುನೀಲ್ ನಾಯ್ಕ ಸಿ

ಹೊನ್ನಾಳಿ : ಎಂ.ಪಿ.ರೇಣುಕಾಚಾರ್ಯ

ಹಾಸನ : ಪ್ರೀತಂ ಜೆ.ಗೌಡ

ಬೆಳ್ತಂಗಡಿ : ಹರೀಶ್ ಪೂಂಜಾ

ಮಂಗಳೂರು ನಗರ ಉತ್ತರ : ಭರತ್ ಶೆಟ್ಟಿ

ಮಂಗಳೂರು ನಗರ ದಕ್ಷಿಣ : ಡಿ.ವೇದವ್ಯಾಸ್ ಕಾಮತ್

ಬಂಟ್ವಾಳ :ರಾಜೇಶ್ ನಾಯ್ಕ್

ಮಡಿಕೇರಿ : ಅಪ್ಪಚ್ಚು ರಂಜನ್

ವಿರಾಜಪೇಟೆ : ಕೆ ಜಿ ಬೋಪಯ್ಯ

ನಂಜನಗೂಡು (ಎಸ್‌ಸಿ) :ಹರ್ಷವರ್ಧನ್ ಬಿ.

ಕೃಷ್ಣರಾಜ :ಎಸ್.ಎ.ರಾಮದಾಸ್

ಶಿವಮೊಗ್ಗ ಗ್ರಾಮಾಂತರ (SC) : ಕೆ ಬಿ ಅಶೋಕ್ ನಾಯ್ಕ್

ತೀರ್ಥಹಳ್ಳಿ : ಆರಗ ಜ್ಞಾನೇಂದ್ರ

ಶಿಕಾರಿಪುರ : ಬಿ.ವೈ.ವಿಜಯೇಂದ್ರ

ಸೊರಬ : ಕುಮಾರ್ ಬಂಗಾರಪ್ಪ

ಕಾರ್ಕಳ : ವಿ.ಸುನೀಲ್ ಕುಮಾರ್

ತರೀಕೆರೆ : ಡಿ.ಎಸ್ ಸುರೇಶ್

ಕಡೂರು : ಬೆಳ್ಳಿಪ್ರಕಾಶ್

ಚಿಕ್ಕನಾಯಕನಹಳ್ಳಿ : ಜೆಸಿ ಮಾಧುಸ್ವಾಮಿ

ತಿಪಟೂರು : ಬಿ.ಸಿ.ನಾಗೇಶ್

ತುರುವೇಕೆರೆ : ಎಎಸ್ ಜಯರಾಮ್

ತುಮಕೂರು ನಗರ: ಜಿಬಿ ಜ್ಯೋತಿ ಗಣೇಶ್

ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್

ಯಲಹಂಕ : ಎಸ್ ಆರ್ ವಿಶ್ವನಾಥ್

ಕೃಷ್ಣರಾಜಪುರಂ : ಬೈರತಿ ಬಸವರಾಜ

ಯಶವಂತಪುರ : ಎಸ್ ಟಿ ಸೋಮಶೇಖರ್

ರಾಜರಾಜೇಶ್ವರಿನಗರ : ಮುನಿರತ್ನ

ಮಹಾಲಕ್ಷ್ಮಿ ಲೇಔಟ್ : ಕೆ.ಗೋಪಾಲಯ್ಯ

ಮಲ್ಲೇಶ್ವರಂ : ಡಾ.ಸಿ.ಎನ್.ಅಶ್ವಥ್ ನಾರಾಯಣ

ಸಿವಿ ರಾಮನ್ ನಗರ (SC) : ಎಸ್.ರಘು

ರಾಜಾಜಿ ನಗರ : ಎಸ್.ಸುರೇಶ್ ಕುಮಾರ್

ಬಸವನಗುಡಿ : ರವಿ ಸುಬ್ರಹ್ಮಣ್ಯ

ಪದ್ಮನಾಭನಗರ : ಆರ್.ಅಶೋಕ

ಮಹದೇವಪುರ (SC) : ಅರವಿಂದ ಲಿಂಬಾವಳಿ

ಬೊಮ್ಮನಹಳ್ಳಿ : ಎಂ ಸತೀಶ್ ರೆಡ್ಡಿ

ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ

ಕೆ.ಆರ್‌ ಪೇಟೆ: ನಾರಾಯಣ ಗೌಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+