ಚುನಾವಣಾ ಸಿದ್ಧತೆಗಳ ಮೇಲ್ವಿಚಾರಣೆಗೆ ವೀಕ್ಷಕರ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್. 15: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಜೊತೆಗೆ ಚುನಾವಣಾ ವೀಕ್ಷಕರ ಪಟ್ಟಿ ಕಡೆಗು ಗಮನ ಹರಿಸುತ್ತಿವೆ. ಜೆಡಿಎಸ್ ಶುಕ್ರವಾರ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ ಮಾಡಿದೆ. ಇದರ ಜೊತೆಗೆ ಕಾಂಗ್ರೆಸ್ ತನ್ನ ಚುನಾವಣಾ ವೀಕ್ಷಕರ ಪಟ್ಟಿಯನ್ನು ರಿಲೀಸ್ ಮಾಡಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಚುನಾವಣಾ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಬೆಂಗಳೂರು ನಗರ ಮತ್ತು ವಿಧಾನಸಭೆ ಮಟ್ಟದ ವೀಕ್ಷಕರ ಕಾಂಗ್ರೆಸ್ ಚುನಾವಣಾ ವೀಕ್ಷಕರ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ ಎಂದು ಶುಕ್ರವಾರ ತಿಳಿಸಿದೆ. ರಾಜ್ಯದಲ್ಲಿ ಚುನಾವಣಾ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಒಟ್ಟು 61 ವೀಕ್ಷಕರನ್ನು ಕಾಂಗ್ರೆಸ್ ನೇಮಿಸಿದೆ.

ಈ 61 ಅಭ್ಯರ್ಥಿಗಳ ಪಟ್ಟಿಯಿಂದ ಬೆಂಗಳೂರಿನ ಚುನಾವಣಾ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಪಕ್ಷವು 5 ಮಂದಿ ವೀಕ್ಷಕರನ್ನು ನೇಮಿಸಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷವು, "ಬೆಂಗಳೂರು ನಗರಕ್ಕೆ ಎಐಸಿಸಿ ವೀಕ್ಷಕರು ಮತ್ತು ಕರ್ನಾಟಕ-2023 ರ ವಿಧಾನಸಭಾ ಚುನಾವಣೆಯ ಚುನಾವಣಾ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಎಐಸಿಸಿ ವಿಧಾನಸಭೇ ಮಟ್ಟದ ವೀಕ್ಷಕರ ನೇಮಕದ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದಾರೆ" ಎಂದಿದೆ.
"ಬೆಂಗಳೂರು ನಗರದ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಮಾಜಿ ಪಿಸಿಸಿ ಮುಖ್ಯಸ್ಥ ಎನ್. ರಘುವೀರಾ ರೆಡ್ಡಿ, ಮಾಜಿ ಎಂಆರ್‌ಸಿಸಿ ಅಧ್ಯಕ್ಷ ಸಂಜಯ್ ನಿರುಪಮ್, ಸಂಸದ ಬೆನ್ನಿ ಬೆಹನನ್, ಸಂಸದ ಕಾರ್ತಿ ಚಿದಂಬರಂ, ಸಂಸದ ಜೋತಿಮಣಿ ಅವರನ್ನು ನೇಮಿಸಲಾಗಿದೆ. ಈ ತಕ್ಷಣವೇ ಜಾರಿಗೆ ಬರುವಂತೆ ವೀಕ್ಷಕರನ್ನು ನಿಯೋಜಿಸಲಾಗಿದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಕಾಂಗ್ರೆಸ್ ಕೂಡ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೂ 50ಕ್ಕೂ ಹೆಚ್ಚು ಸ್ಥಾನಗಳನ್ನು ಹಾಗೆ ಉಳಿಸಿಕೊಂಡಿದೆ. ಬೇರೆ ಪಕ್ಷಗಳಿಂದ ಬರುವವರಿಗೆ ಮತ್ತು ತನಗೆ ಟಿಕೆಟ್ ಹಂಚಿಕೆಯಲ್ಲಿ ಭಾರೀ ಸವಾಲಾಗುವ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ಟಿಕೆಟ್ ಸಿಗದೆ ಬಂಡಾಯವೆದ್ದಿದ್ದ ನಾಯಕರುಕಪ್ಪೆ ಜಿಗಿತ ಆರಂಭಿಸಿದ್ದು, ಯಾರು ಯಾವ ಪಕ್ಷದವರು ಎಂಬ ಗೊಂದಲಕ್ಕೆ ಮತದಾರ ಸಿಲುಕಬೇಕಾಗಿದೆ.

ಶುಕ್ರವಾರ ಸಂಜೆ ಜೆಡಿಎಸ್ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾರೀ ವಿವಾದಕ್ಕೆ ಕಾರಣವಾಗಿದ್ದ, ಕುಟುಂಬದ ಒಡಕಿಗೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವರೂಪ್ ಅವರನ್ನು ಘೋಷಿಸಲಾಗಿದೆ. ಹಾಸನದಿಂದಲೇ ಕಣಕ್ಕೆ ಇಳಿಯುವುದಾಗಿ ಪಟ್ಟು ಹಿಡಿದಿದ್ದ ಭವಾನಿ ರೇವನ್ಣ ಅವರಿಎಗ ಮುಖಭಂಗವಾಗಿದೆ.
ರಾಜ್ಯದ 224 ವಿಧಾನಸಭೆಗಳ ಪೈಕಿ ಯಾವುದೇ ಗೊಂದಲಗಳಿಲ್ಲದೆ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದ ಜೆಡಿಎಸ್‌ಗೆ ಹಾಸನ ವಿಧಾನಸಭಾ ಕ್ಷೇತ್ರವೇ ದೊಡ್ಡ ಕಗ್ಗಂಟಾಗಿತ್ತು. ಕೊನೆಗೂ ಎರಡನೇ ಪಟ್ಟಿಯಲ್ಲಿ 49 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂದಿದ್ದ ಎಚ್‌ಡಿ ಕುಮಾರಸ್ವಾಮಿ ಕೊನೆಗೂ ಸ್ವರೂಪ್ ಪ್ರಕಾಶ್ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ರಾಜ್ಯದ ರಾಜಕೀಯ ಪಕ್ಷಗಳು ಈಗಾಗಲೇ ಆರೋಪ ಮತ್ತು ಪ್ರತ್ಯಾರೋಪಗಳ ಸುರಿಮಳೆಯಲ್ಲಿ ತೊಡಗಿದ್ದು, ಭ್ರಷ್ಟಾಚಾರದ ವಿಷಯದಲ್ಲಿ ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.t












Click it and Unblock the Notifications