RTO: ಆಟೋ ಚಾಲಕರೇ ಎಚ್ಚರ! ದುಪಟ್ಟು ಹಣ ಕೀಳುವವರ ವಿರುದ್ಧ ರಾಮಲಿಂಗಾ ರೆಡ್ಡಿ ಸಮರ
ಬೆಂಗಳೂರು, ಜೂನ್ 28: ರಾಜ್ಯದಲ್ಲಿ ರಾಪಿಡೋ ಬೈಕ್, ಟ್ಯಾಕ್ಸಿಗಳು ನಿಷೇಧಗೊಂಡ ಬಳಿಕ ಆಟೋ ಚಾಲಕ ಹಾವಳಿ ಮಿತಿ ಮೀರಿದೆ. ಕೆಲವು ಆಟೋ ಚಾಲಕರಿಂದ ನಿತ್ಯವು ಸಾರ್ವಜನಿಕರು ತೊಂದರೆ ಆಗುತ್ತಿದೆ. ನಿರ್ದಿಷ್ಠ ಪ್ರಯಾಣ ದರಕ್ಕಿಂತಲೂ ಹೆಚ್ಚು ಹಣ ಕೀಳಲು ಮುಂದಾಗಿದ್ದಾರೆ. ಇದೀಗ ಅಂತ ಆಟೋ ಚಾಲಕರ ವಿರುದ್ಧ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (RTO) ಪತ್ರ ಬರೆದಿದ್ದಾರೆ. ಆಟೋ ಚಾಲಕರು ಎಚ್ಚೆತ್ತುಕೊಳ್ಳಬೇಕಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ಹೈಕೋರ್ಟ್ ರಾಪಿಡೋ ಬೈಕ್, ಓಲಾ ಮತ್ತು ಊಬರ್ ಟ್ಯಾಕ್ಸಿಗಳನ್ನು ನಿಷೇಧಿಸಿದೆ. ಹೀಗಾಗಿ ರಾಜ್ಯದಲ್ಲಿ ಈ ವಾಹನಗಳು ಸಂಚರಿಸುತ್ತಿಲ್ಲ. ಇದರಿಂದ ಬೆಂಗಳೂರಿನಲ್ಲಿ ಜನರು ಮೆಟ್ರೋ ಹಾಗೂ ಆಟೋಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಇದನ್ನು ದುರುಪಯೋಗಪಡಸಿಕೊಳ್ಳಲು ಮುಂದಾದ ಕೆಲವು ಆಟೋ ಚಾಲಕರು ಮನ ಬಂದಂತೆ ಹಣ ವಸೂಲಿಗೆ ಇಳಿದಿದ್ದಾರೆ. ಇದನ್ನು ಕಡಿವಾಣ ಹಾಕಲು ರಾಜ್ಯ ಸರ್ಕಾರ, ಸಾರಿಗೆ ಇಲಾಖೆ ಸಚಿವರು, ಅಧಿಕಾರಿಗಳು ಮುಂದಾಗಿದ್ದಾರೆ.

ತಪ್ಪಿತಸ್ಥ ಎಲ್ಲ ಆಟೋಗಳ ವಿರುದ್ಧವು ಕ್ರಮ
ಪತ್ರದಲ್ಲಿ ರಾಮಲಿಂಗಾ ರೆಡ್ಡಿ ಅವರು, ಬೆಂಗಳೂರು ನಗರದಲ್ಲಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಆಪ್ (APP) ಆಧಾರಿತ ಆಟೋಗಳಾಗಲಿ ಅಥವಾ ಇನ್ನಾವುದೇ ಮಾದರಿಯ ಆಟೋಗಳಾಗಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.
ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರದ ಬೇಡಿಕೆ, ಹೆಚ್ಚಿನ ದರ ನೀಡದಿದ್ದಲ್ಲಿ ಪ್ರಯಾಣವನ್ನು ರದ್ದುಗೊಳಿಸುವುದು ಮತ್ತು ಹೆಚ್ಚಿನ ಹೆಚ್ಚಿನದು ದರ ವಸೂಲು ಮಾಡುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಟೋಗಳ ಪರ್ಮಿಟ್ ರದ್ದು ಮಾಡಬೇಕು. ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಉದಾಹರಣೆಗೆ ದಿನಾಂಕ 18 ನೇ ಜೂನ್ 2025 ರಂದು ರಾಪಿಡೋ ಆಟೋ ಆಪ್ ಪ್ರತಿ ಕಿ.ಮೀ ರೂ. 100.89, ಅದೇ ಆಟೋ ಓ ಆಪ್ ಅವರು 4 ಕಿ.ಮೀ ದೂರದ ಪ್ರಯಾಣಕ್ಕೆ ರೂ. 184.19 ತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಂದ ಈ ರೀತಿಯ ಹಗಲು ದರೋಡೆ ಅಕ್ಷಮ್ಯ ಅಪರಾಧ ಹಾಗೂ ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದ್ದಾರೆ.
ಸಾರ್ವಜನಿಕರಿಂದ ಹೆಚ್ಚುತ್ತಿವೆ ದೂರು
ಪ್ರಯಾಣಿಕರು ಕರೆದ ಕಡೆಗೆ ಬಾಡಿಗೆಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತಾಯಿಸಿದ ಆಟೋ ಚಾಲಕರ ವಿರುದ್ಧ ಪ್ರಕರಣಗಳನ್ನು ಸಾರಿಗೆ ಇಲಾಖೆಯು ದಾಖಲಿಸುತ್ತಿದ್ದಾರೆ. ಹೀಗಿದ್ದರು ಸಹ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಪತ್ರದೊಂದಿಗೆ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿದ್ದಾರೆ. ಇಂತಹ ಅನೇಕ ದೂರುಗಳು ಬಂದಿವೆ. ಈ ಸಂಬಂಧ ಸೂಕ್ತ ಕ್ರಮ ಜರುಗಿಸುಂತೆ ತಿಳಿಸಿದ್ದಾರೆ. ಈ ಮೂಲಕ ದುಪಟ್ಟು ದರ ವಸೂಲಿಗೆ ಮುಂದಾಗಿದ್ದ ಆಟೋ ಚಾಲಕರೇ ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ತಪ್ಪಿದಲ್ಲ.












Click it and Unblock the Notifications