ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ವಿದ್ಯಾರ್ಥಿ ನವೀನ್‌ ಪಾರ್ಥೀವ ಶರೀರ; ಸಿಎಂ ಬೊಮ್ಮಾಯಿಯಿಂದ ಅಂತಿಮ ನಮನ

|
Google Oneindia Kannada News

ಬೆಂಗಳೂರು, ಮಾರ್ಚ್ 21: ಉಕ್ರೇನ್‌ನಲ್ಲಿ ಮಾರ್ಚ್ 1 ರಂದು ಶೆಲ್ ದಾಳಿಯಲ್ಲಿ ಹುತಾತ್ಮರಾದ ಎಂಬಿಬಿಎಸ್‌ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವು ಬೆಂಗಳೂರಿಗೆ ಆಗಮಿಸಿದ್ದು, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೀನ್‌ಗೆ ಅಂತಿಮ ನಮನ ಸಲ್ಲಿಸಿದರು.

ಉಕ್ರೇನ್‌ನಲ್ಲಿ ಮೃತವಾಗಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸೋಮವಾರ ನಸುಕಿನ ಜಾವ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಬೆಂಗಳೂರಿನಿಂದ ನೇರವಾಗಿ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ವರದಿಯು ಹೇಳಿದೆ.

Recommended Video

ಕಡೆಗೂ Naveen ಮೃತದೇಹ ತವರಿಗೆ ತಂದ ಭಾರತೀಯ ಸರ್ಕಾರ | Oneindia Kannada

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ; ಕುಟುಂಬಸ್ಥರ ನಿರ್ಧಾರಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ; ಕುಟುಂಬಸ್ಥರ ನಿರ್ಧಾರ

ಬೆಳಗ್ಗೆ 10 ಗಂಟೆಗೆ ಸಿಎಂ ಬೊಮ್ಮಾಯಿ ಹಾವೇರಿ ನವೀನ್ ಮನೆಗೆ ಭೇಟಿ ನೀಡಲಿದ್ದಾರೆ. ಒಂದು ಗಂಟೆಗಳ ಕಾಲ ವೀರಶೈವ ಸಂಪ್ರದಾಯದಂತೆ ವಿಧಿವಿಧಾನ ನಡೆಯಲಿದೆ. ನಂತರ ದೇಹದಾನ ಪ್ರಕ್ರಿಯೆ ನಡೆಯಲಿದೆ. ಉಕ್ರೇನ್‌ನಿಂದ ನವೀನ್ ಮೃತದೇಹ ಭಾರತಕ್ಕೆ ತರಲು ನೆರವಾಗಿದ್ದಕ್ಕೆ ಪ್ರಧಾನಿಗೆ ಸಿಎಂ ಧನ್ಯವಾದ ಕೂಡಾ ತಿಳಿಸಿದ್ದಾರೆ.

Karnataka CM Basavaraj Bommai pays last respects to MBBS student Naveen

ಇನ್ನು ನವೀನ್‌ಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಉಕ್ರೇನ್‌ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಹುತಾತ್ಮರಾದ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಶ್ರಮಿಸಿದ ಕೇಂದ್ರ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ," ಎಂದು ಹೇಳಿದರು. ಹಾಗೆಯೇ ಇದೇ ಸಂದರ್ಭದಲ್ಲಿ ಶೆಲ್ ದಾಳಿಯಲ್ಲಿ ನಾವು ಅವರನ್ನು ಕಳೆದುಕೊಂಡಿರುವುದು ದುರದೃಷ್ಟಕರ ಎಂದು ನುಡಿದರು.

ಪ್ರಧಾನಿ ಮೋದಿಗೆ ಕರ್ನಾಟಕ ಸಿಎಂ ಬೊಮ್ಮಾಯಿ ಧನ್ಯವಾದ

ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಹುತಾತ್ಮರಾದ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಶ್ರಮಿಸಿದ್ದಕ್ಕಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಧನ್ಯವಾದ ಅರ್ಪಿಸಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ನವೀನ್ ಕರ್ನಾಟಕದ ಹಾವೇರಿ ಜಿಲ್ಲೆಯ ನಿವಾಸಿಯಾಗಿದ್ದು, ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ 21 ವರ್ಷದ ವಿದ್ಯಾರ್ಥಿ ಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಪತ್ರದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಉಕ್ರೇನ್‌ ಯುದ್ಧದಲ್ಲಿ ಖಾರ್ಕಿವ್‌ನಲ್ಲಿ ಮಡಿದ ನವೀನ್ ಶೇಖರಪ್ಪ ಅವರ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲು ಶ್ರದ್ಧೆಯಿಂದ ಶ್ರಮಿಸುತ್ತಿರುವ ಹಾಗೂ ನವೀನ್ ಶೇಖರಪ್ಪ ಅವರ ಬಗ್ಗೆ ನಿಮ್ಮ ಕಾಳಜಿಗಾಗಿ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು ಅರ್ಪಿಸುತ್ತೇನೆ ಸರ್‌," ಎಂದು ಬರೆದುಕೊಂಡಿದ್ದಾರೆ.

"ನಿಮ್ಮ ಪ್ರಯತ್ನದಿಂದ ಸೋಮವಾರ ನವೀನ್ ಶೇಖರಪ್ಪ ಅವರ ಪಾರ್ಥಿವ ಶರೀರ ಭಾರತಕ್ಕೆ ಬರಲಿದೆ. ಅವರ ಪಾರ್ಥೀವ ಶರೀರ ಭಾರತಕ್ಕೆ ಬರಲಿದೆ ಎಂಬ ಸುದ್ದಿ ಎಲ್ಲಾ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ನಿಮ್ಮ ಕಾಳಜಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಪೋಷಕರು ಮತ್ತು ಕರ್ನಾಟಕದ ಜನರ ಪರವಾಗಿ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಾವಿರಾರು ವಿದ್ಯಾರ್ಥಿಗಳನ್ನು ದೇಶಕ್ಕೆ ಮರಳಿ ಕರೆತಂದಿದ್ದಕ್ಕಾಗಿ ನಾನು ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ," ಎಂದು ಕರ್ನಾಟಕ ಸಿಎಂ ಭಾನುವಾರ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

English summary
Ukraine-Russia War: Karnataka CM Basavaraj Bommai pays last respects to MBBS student Naveen and thanks PM Modi for efforts on bringing back body of Naveen Shekharappa killed in Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X