ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು?

|
Google Oneindia Kannada News

ಬೆಂಗಳೂರು, ಜನವರಿ 11: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲ್ವೆ ಯೋಜನೆ ಮಾರ್ಗ ಬದಲಾವಣೆ ಹಾಗೂ ಉದ್ದೇಶಿತ ಮೆಟ್ರೋ ವಿಸ್ತರಣಾ ಯೋಜನೆಗಳ ವೆಚ್ಚ ಪರಿಷ್ಕರಣೆ ಪ್ರಸ್ತಾವನೆಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ನಾಗವಾರದಿಂದ ಹೆಗಡೆನಗರ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬದಲು, ಹೆಬ್ಬಾಳದ ಮೂಲಕ ಸಂಪರ್ಕ ಕಲ್ಪಿಸುವ ಪರಿಷ್ಕೃತ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಪರಿಷ್ಕೃತ ಪ್ರಸ್ತಾವನೆಯಂತೆ ಈ ಮೆಟ್ರೋ ರೈಲು ಮಾರ್ಗದ ಉದ್ದ 9 ಕಿ.ಮೀ ಹೆಚ್ಚಳವಾಗಿದ್ದು, ಯೋಜನಾ ವೆಚ್ಚ 5,950 ಕೋಟಿ ರೂಗಳಿಂದ 10,584 ಕೋಟಿ ರೂಗಳಿಗೆ ಏರಿಕೆಯಾಗಿದೆ.

ಮೆಟ್ರೊ ಎರಡನೇ ಹಂತದ ಯೋಜನೆಯಲ್ಲಿ ನಾಗವಾರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 29 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ. ನಾಗವಾರ, ಆರ್‌.ಕೆ.ಹೆಗಡೆ ನಗರ, ಜಕ್ಕೂರು, ಕೋಗಿಲು ಕ್ರಾಸ್‌, ಚಿಕ್ಕಜಾಲ, ಟ್ರಂಪೆಟ್‌, ವೆಸ್ಟ್‌ ಕೆಐಎ, ವಿಮಾನ ನಿಲ್ದಾಣ ಹಾದಿಯಾಗಿ ಮಾರ್ಗ ನಿರ್ಮಿಸಲು ತಾತ್ಕಾಲಿಕ ವಿನ್ಯಾಸ ಸಿದ್ಧವಾಗಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಧ್ಯಯನ ನಡೆಸುತ್ತಿದ್ದಾಗ ನಾಗವಾರ-ಆರ್‌.ಕೆ.ಹೆಗಡೆ ನಗರ ಮಾರ್ಗದಲ್ಲಿ ಪೆಟ್ರೋಲಿಯಂ ಪೈಪ್‌ ಇರುವುದು ತಿಳಿದುಬಂದಿದೆ. ಹೀಗಾಗಿ 'ನಾಗವಾರ-ಆರ್‌.ಕೆ.ಹೆಗಡೆ ನಗರ-ಜಕ್ಕೂರು' ಬದಲು 'ನಾಗವಾರ-ಹೆಬ್ಬಾಳ-ಜಕ್ಕೂರು' ಮೂಲಕ ಮಾರ್ಗ ನಿರ್ಮಿಸಲು ಚರ್ಚೆಯಾಗಿದೆ. ಹೀಗೆ ಮಾರ್ಗ ನಿರ್ಮಿಸಿದರೆ ಹೊರವರ್ತುಲ ರಸ್ತೆಯಲ್ಲಿ ಭೂ ಸ್ವಾಧೀನದ ಸಮಸ್ಯೆಯೇ ಇಲ್ಲದೆ ಜಾಗ ಲಭ್ಯವಾಗಿದೆ.

 ಹೆಗಡೆನಗರದ ಮೂಲಕವೇ ಮೆಟ್ರೋ ಹಾದುಹೋಗಬೇಕು

ಹೆಗಡೆನಗರದ ಮೂಲಕವೇ ಮೆಟ್ರೋ ಹಾದುಹೋಗಬೇಕು

ಹೆಗಡೆಗರದ ಮೂಲಕವೇ ಮೆಟ್ರೋ ಮಾರ್ಗ ಹಾದುಹೋಗಬೇಕು ಎಂಬ ಒತ್ತಾಯಕ್ಕೆ ಮನ್ನಡ ನೀಡದ ಸರ್ಕಾರ, ಹೆಬ್ಬಾಳ, ಜಕ್ಕೂರು ಹಾಗೂ ಕೋಗಿಲು ಮೂಲಕ ವಿಮಾನ ನಿಲ್ದಾಣ ತಲುಪಲಿದೆ. ಇದರಿಂದ ಯಲಹಂಕ ಸೇರಿದಂತೆ ಹೆಚ್ಚಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಸಿಗಲಿದೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಯೋಜನಾ ವೆಚ್ಚ ಏರಿಕೆ

ಯೋಜನಾ ವೆಚ್ಚ ಏರಿಕೆ

ಭೂ ಸ್ವಾಧೀನ, ವೆಚ್ಚ ಹೆಚ್ಚಳ ಮತ್ತಿತರೆ ಕಾರಣದಿಂದಾಗಿ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದ್ದು, ಪರಿಷ್ಕೃತ ಮೊತ್ತಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಈ ಮೊದಲು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದ ಉದ್ದ 9.1 ಕಿ.ಮೀ ಆಗಿತ್ತು, ಪರಿಷ್ಕೃತ ಯೋಜನೆಯಂತೆ ಈ ಮಾರ್ಗದ ಉದ್ದ 38 ಕಿ.ಮೀ ಆಗಿದೆ. ಇದೂ ಕೂಡ ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

ವೆಚ್ಚ ಹೆಚ್ಚಳ

ವೆಚ್ಚ ಹೆಚ್ಚಳ

ವೆಚ್ಚವೂ ಹೆಚ್ಚಳ'ಮಡಿವಾಳದ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆಆರ್‌ಪುರ ವರೆಗಿನ ಮೆಟ್ರೋ 2 ಯೋಜನಾ ವೆಚ್ಚವನ್ನು 4,202 ಕೋಟಿ ರೂಗಳಿಂದ 5,994 ಕೋಟಿ ರೂ ಗಳಿಗೆ ಪರಿಷ್ಕರಣೆ ಮಾಡುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಜೊತೆಗೆ ಮೆಟ್ರೋಪೂರ್ವ-ಪಶ್ಚಿಮ ಕಾರಿಡಾರ್ ನ ವಿಸ್ತರಣೆ ಮಾರ್ಗವಾಗಿ ಚೆಲ್ಲಘಟ್ಟ ಸ್ಟೇಷನ್ ನಿರ್ಮಾಣ ಸಂಬಂಧ ಒಟ್ಟು 140 ಕೋಟಿ ರೂ ವೆಚ್ಚದ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ.

ಏರ್‌ಪೋರ್ಟ್ ಮಾರ್ಗ ಬದಲಾಗಲು ಕಾರಣ

ಏರ್‌ಪೋರ್ಟ್ ಮಾರ್ಗ ಬದಲಾಗಲು ಕಾರಣ

ಹೆಗಡೆ ನಗರದಲ್ಲಿ ಗ್ಯಾಸ್‌ಪೈಪ್‌ಲೈನ್ ಹಾದುಹೋಗಿರುವುದರಿಂದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಲಿದೆ. ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ತೊಡಕಾಗಲಿದೆ ಎಂಬ ಕಾರಣಕ್ಕೆ ನಾಗವಾರ, ಹೆಬ್ಬಾಳ, ಜಕ್ಕೂರು ಕೋಗಿಲು ಮೂಲಕ ಮೆಟ್ರೋ ಸಂಚರಿಸಲಿದೆ.

English summary
The Karnataka state cabinet on Thursday approved a change in the metro route connecting East Bengaluru with the city’s airport at an additional cost Rs 5,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X