ಬಿಜೆಪಿ ಶಾಸಕ ಮಾಡಾಳ್ ಮಗನ 'ಲಂಚ' ಪ್ರಕರಣ ರೆಕಾರ್ಡ್ ಮಾಡಲು ಸ್ಮಾರ್ಟ್‌ವಾಚ್ ಕ್ಯಾಮೆರಾ ಬಳಸಿದ ಉದ್ಯಮಿ- ಇನ್‌ಸೈಡ್ ರಿಪೋರ್ಟ್
ಮಾಡಾಳ್ ಪ್ರಶಾಂತ್ ಅವರೊಂದಿಗೆ ಉದ್ಯಮಿ ಹಲವು ಬಾರಿ ಸಂವಾದವನ್ನು ನಡೆಸಿದ್ದರು. ಈ ಸಂವಾದದ ವಿಡಿಯೊವನ್ನು ಲೋಕಾಯುಕ್ತ ಪೊಲೀಸರಿಗೆ ಉದ್ಯಮಿ ನೀಡಿದ್ದರು. ಇದನ್ನು ಸ್ಮಾರ್ಟ್‌ವಾಚ್ ಕ್ಯಾಮಾರಾದಿಂದ ಚಿತ್ರಿಕರಿಸಿದ್ದರು. ಇನ್‌ಸೈಟ್ ರಿಪೋರ್ಟ್ ಓದಿ
ಬೆಂಗಳೂರು, ಮಾರ್ಚ್ 06: ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಮಗ ಪ್ರಶಾಂತ್ 'ಲಂಚ' ಪ್ರಕರಣವು ದೇಶದಾದ್ಯಂತ ಸದ್ದು ಮಾಡುತ್ತಿದೆ. ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕು ಬಿದ್ದದ್ದಲ್ಲದೇ, ಪ್ರಶಾಂತ್ ನಿವಾಸದಲ್ಲಿ ಆರೂ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗದು ಸಿಕ್ಕಿರುವುದು ಕೋಲಾಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲೂ ಕೆಪಿಸಿಸಿ ಮುಂದಾಗಿದೆ.

ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ಗುತ್ತಿಗೆ
ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ಗೆ (ಕೆಎಸ್‌ಡಿಎಲ್) ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ಗುತ್ತಿಗೆಗಾಗಿ 90 ಲಕ್ಷ ರೂಪಾಯಿ ಲಂಚ ಕೇಳಲಾಗಿತ್ತು. ಪೂರೈಕೆದಾರನಿಂದ 40 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿರುವಾಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪ್ರಶಂತ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ಗೆ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಗನ ಲಂಚ ಪ್ರಕರಣ ಬೆಳಕಿಗೆ ಬಂದ ನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಜಾಲಾ ಬೀಸಿದ್ದಾರೆ.

ಲೋಕಾಯುಕ್ತಕ್ಕೆ ಉದ್ಯಮಿ ದೂರು
ಕಚ್ಚಾ ಸಾಮಾಗ್ರಿ ಪೂರೈಕೆದಾರ ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೂ ಮೊದಲು ಮಾಡಾಳ್ ಪ್ರಶಾಂತ್ ಅವರೊಂದಿಗೆ ಉದ್ಯಮಿ ಹಲವು ಬಾರಿ ಸಂವಾದವನ್ನು ನಡೆಸಿದ್ದರು. ಈ ಸಂವಾದದ ವಿಡಿಯೊವನ್ನು ಲೋಕಾಯುಕ್ತ ಪೊಲೀಸರಿಗೆ ಉದ್ಯಮಿ ನೀಡಿದ್ದರು. ಇದನ್ನು ರಿಕಾರ್ಡ್ ಮಾಡಲು ಉದ್ಯಮಿಯು ಸ್ಮಾರ್ಟ್‌ವಾಚ್ ಕ್ಯಾಮಾರಾ ಬಳಸಿದ್ದರು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ
‘ಇಂಡಿಯನ್ ಎಕ್ಸ್‌ಪ್ರೆಸ್'ನ ವರದಿ ಪ್ರಕಾರ, ಒಟ್ಟು 1.2 ಕೋಟಿ ರೂಪಾಯಿ ಲಂಚವನ್ನು ಪ್ರಶಾಂತ್ ಕೇಳಿದ್ದರು ಎಂದು ಉದ್ಯಮಿ ಶ್ರೇಯಸ್ ಕಶ್ಯಪ್ ಅವರು ಆರೋಪಿಸಿದ್ದಾರೆ. ಕೆಎಸ್‌ಡಿಎಲ್‌ಗೆ ಕಚ್ಚಾ ವಸ್ತುವಾಗಿ 5,100 ಕೆಜಿ ಗ್ವಾಯಾಕ್‌ವುಡ್ ಎಣ್ಣೆ ಮತ್ತು 29,520 ಕೆಜಿ ಅಬ್ಬಲಿಡ್ ಎಣ್ಣೆಯನ್ನು ಪೂರೈಸಲು ಕಶ್ಯಪ್ ಮುಂದಾಗಿದ್ದರು. ಅವರ ಸಂಸ್ಥೆಯಾದ ಕೆಮಿಕ್ಸಿಲ್ ಕಾರ್ಪೊರೇಷನ್ ಮತ್ತು ಸಹವರ್ತಿ ಸಂಸ್ಥೆ ಡೆಲಿಸಿಯಾ ಕಾರ್ಪೊರೇಶನ್‌ಗೆ ಅನುಮೋದನೆ ನೀಡಲಾಗಿತ್ತು. ಕೆಎಸ್‌ಡಿಎಲ್ ಅಧ್ಯಕ್ಷ, ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಕರ್ನಾಟಕ ಆಡಳಿತ ಸೇವಾ ಅಧಿಕಾರಿಯಾಗಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಸಿಎಫ್‌ಒ ಆಗಿದ್ದಾರೆ.

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ
ಪ್ರಶಾಂತ್ ಬಂಧನವಾಗಿದ್ದರೂ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರನ್ನು ಇನ್ನೂ ಬಂಧಿಸಿಲ್ಲ. ಬಿಜೆಪಿ ಶಾಸಕರು ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಮಾರ್ಚ್ 2 ಮತ್ತು ಮಾರ್ಚ್ 3 ರಂದು ನಡೆದ ಶೋಧದ ನಂತರ ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಮಾಡಾಳ್ ಅವರ ವೈಯಕ್ತಿಕ ಕಚೇರಿಯಲ್ಲಿ ಒಟ್ಟು 2,02,00,000 ರೂ ಮತ್ತು ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ 6,10,30,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ವಿರೂಪಾಕ್ಷಪ್ಪ ಚನ್ನಗಿರಿಯ ಬಿಜೆಪಿ ಶಾಸಕ
ವಿರೂಪಾಕ್ಷಪ್ಪ ಚನ್ನಗಿರಿಯ ಬಿಜೆಪಿ ಶಾಸಕರಾಗಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಎಫ್ಐಆರ್ ಪ್ರಕಾರ, ಉದ್ಯಮಿ ಕಶ್ಯಪ್ ಮತ್ತು ಅವರ ಸಹವರ್ತಿ ಎಸ್ ಮೂರ್ತಿ ಅವರು 4.8 ಕೋಟಿ ರೂಪಾಯಿ ಮೌಲ್ಯದ ಪೂರೈಕೆ ಗುತ್ತಿಗೆಗೆ 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಇದಕ್ಕಾಗಿ ಮೊದಲ ಹಂತದಲ್ಲಿ 40 ಲಕ್ಷ ರೂಪಾಯಿ ನೀಡುವಂತೆ ಕೇಳಲಾಗಿತ್ತು.












Click it and Unblock the Notifications